More

    ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಿ

    ಕುಡಚಿ: ಸ್ವಚ್ಛತೆ ಹಾಗೂ ಕುಡಿಯುವ ನೀರು ಸೇರಿ ಮೂಲಸೌಕರ್ಯಗಳಿಗೆ ಪ್ರಥಮ ಪ್ರಾಶಸ್ತ್ಯ ಕೊಡಬೇಕು ಎಂದು ಶಾಸಕ ಮಹೇಂದ್ರ ತಮ್ಮಣವರ ಪುರಸಭೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಕುಡಚಿ ಪಟ್ಟಣದ ಪುರಸಭೆ ವ್ಯಾಪ್ತಿಯ ಸಾಗರ ನಗರ ಹಾಗೂ ಕುಡಚಿ -ಜಮಖಂಡಿ ರಸ್ತೆ ಪಕ್ಕದಲ್ಲಿರುವ ಪ್ರವಾಹ ಸಂತ್ರಸ್ತರ ಕಾಲನಿಗಳಿಗೆ ಶನಿವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿ ಮಾತನಾಡಿದರು.

    ಅನೇಕ ತಿಂಗಳಿಂದ ಶೌಚಗೃಹದ ನೀರು ಗಟಾರ್‌ಗಳಲ್ಲಿ ತುಂಬಿ ಹರಿಯುತ್ತಿದೆ. ರಸ್ತೆ ಮೇಲೆ ಹಾಗೂ ಬಾಗಿಲುಗಳ ಎದುರೇ ಗಲೀಜು ನೀರು ಹರಿದು ಬರುವುದರಿಂದ ದುರ್ವಾಸನೆ ಹೆಚ್ಚಾಗಿ ಜನರಿಗೆ ಸಂಕಟ ತಂದೊಡ್ಡುತ್ತಿದೆ. ಇದರಿಂದ ಜನಸಂಚಾರ ಕಷ್ಟವಾಗುತ್ತಿದೆ. ಅಲ್ಲದೆ ಸೊಳ್ಳೆಗಳ ಕಾಟವೂ ಹೆಚ್ಚಾಗಿ ರೋಗಗಳ ಭಯ ಆವರಿಸುತ್ತಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಡಬೇಕು. ಕುಡಿಯುವ ನೀರಿನ ಘಟಕವಿದ್ದರೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಹಾಗೂ ಶಾಸಕರ ಎದುರು ಸ್ಥಳೀಯರು ಅಳಲು ತೋಡಿಕೊಂಡರು.

    ಗಟಾರ್ ನೀರು ಹರಿದು ಹೊರಹೋಗುವಂತೆ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ 15 ದಿನದಲ್ಲಿ ಬಗೆಹರಿಸಬೇಕು. ಜನರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

    ನಗರಾಭಿವೃದ್ಧಿ ಅಧಿಕಾರಿ ಉಮೇಶ ಆರ್.ಕೆ., ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಇಂಜಿನಿಯರ್ ಎಸ್.ಆರ್. ಚೌಗಲಾ, ಪುರಸಭೆ ಸದಸ್ಯ ಹಮಿದೋದ್ದಿನ್ ರೋಹಿಲೆ, ಇಮಾಮುದ್ದಿನ್ ಸಜ್ಜನ್, ರಫೀಕ್ ಪಿನ್ನತೋಡ್, ಆತಿಬ್ ಪಟಾಯಿಟ್, ವಾಶಿಪ್ ಮಾರ್ೂ, ವಿನೋದ ಮಗದುಮ್ಮ, ಸಾಹೇಬಲಾಲ್ ರೋಹಿಲೆ, ಆಷ್ಪಾಕ್ ಅಲಾಲಖಾನ್, ಈಶ್ವರ ಗಿಣಮುಗೆ, ಸರ್ರಾಜ್ ಕರೀಂಖಾನ್, ಸಾದಿಕ್ ರೋಹಿಲೆ, ಮುಷ್ಪಾಕ್ ಜಿನ್ನಾಬಡೆ, ರಾಜು ನಿಡಗುಂದಿ, ಸುರೇಶ ಹೊಸಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts