More

    ಇಂದ್ರಜಿತ್​ ಮಾಹಿತಿ ನೀಡಿದ್ದಾರಷ್ಟೇ, ಯಾವುದೇ ಪುರಾವೆಗಳನ್ನು ನೀಡಿಲ್ಲ: ಸಿಸಿಬಿ ಆಯುಕ್ತರ ಸ್ಪಷ್ಟನೆ

    ಬೆಂಗಳೂರು: ಮಾದಕ ಜಾಲದಲ್ಲ ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು ಭಾಗಿಯಾಗಿರುವುದಾಗಿ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸಿಸಿಬಿಗೆ ನಿನ್ನೆಯಷ್ಟೇ ಮಾಹಿತಿ ನೀಡಿದ್ದು, ಅವರು ನೀಡಿರುವ ಮಾಹಿತಿಯಲ್ಲಿ ವಿಡಿಯೋ ಸಾಕ್ಷಿಯು ಇದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಈ ವಿಚಾರವಾಗಿ ಸಿಸಿಬಿ‌ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರು ಹಿಂದಿನ ಕೆಲವು ಘಟನೆಗಳು ಹಾಗೂ‌ ಹೆಸರುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೇಳಿಕೆ ವೇಳೆ ಯಾವುದೇ ವಸ್ತು ಅಥವಾ ಪುರಾವೆಗಳನ್ನು ನೀಡಿಲ್ಲ. ಸಂಬಂಧಪಟ್ಟ ಪುರಾವೆಗಳಿದ್ದರೆ ಒದಗಿಸಲು‌ ಮತ್ತೊಮ್ಮೆ ಅವಕಾಶ ನೀಡಲಿದ್ದೇವೆ. ಸಿಸಿಬಿಯೂ ತನ್ನ ತನಿಖೆಯನ್ನು ಮುಂದುವರೆಸಲಿದೆ ಎಂದರು.

    ಸೋಮವಾರವಷ್ಟೇ ಸುಮಾರು ಐದೂವರೆ ತಾಸು ಸಿಸಿಬಿ ಕಚೇರಿಯಲ್ಲೇ ವಿಚಾರಣೆಗೆ ಒಳಪಟ್ಟಿದ್ದ ಇಂದ್ರಜಿತ್​ ಲಂಕೇಶ್​, ‘ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಡ್ರಗ್ಸ್ ಮಾಫಿಯಾ ದೊಡ್ಡದು. ನಾನು ಐದೂವರೆ ತಾಸು ಸಿಸಿಬಿ ಅಧಿಕಾರಿಗಳ ಜತೆ ಮಾತನಾಡಿದ್ದು, ಈ ದಂಧೆಯಲ್ಲಿ ಭಾಗಿಯಾದವರ ಬಗ್ಗೆ ನನಗೆ ಗೊತ್ತಿರುವ ಎಲ್ಲ ಮಾಹಿತಿಯನ್ನೂ ಹೇಳಿದ್ದೇನೆ. ನನಗೆ ಗೊತ್ತಿರುವಂತೆ ಡ್ರಗ್ಸ್​ ದಂಧೆಯಲ್ಲಿ ಇರುವ ಕನ್ನಡ ಸಿನಿಮಾದ 10-15 ಜನರ ಹೆಸರನ್ನು ಹೇಳಿದ್ದೇನೆ, ಜಾಗದ ಬಗ್ಗೆಯೂ ತಿಳಿಸಿದ್ದೇನೆ. ನಾನು ಕೊಟ್ಟ ಮಾಹಿತಿ ಕೇಳಿ ಸಿಸಿಬಿಗೆ ಖುಷಿಯ ಜತೆಗೆ ಶಾಕ್​ ಆಗಿದೆ. ಅವರು ಖಂಡಿತ ಈ ಮಾಫಿಯಾಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ಹೇಳಿದ್ದರು. (ದಿಗ್ವಿಜಯ ನ್ಯೂಸ್​)

    ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts