More

    ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ ತೋರಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಕ್ರೀಡಾಪಟುಗಳ ಜತೆಗೆ ಮೋದಿ ಬೆಳಗಿನ ಉಪಹಾರವನ್ನೂ ಸವಿದರು. ಈ ವೇಳೆ ಕ್ರೀಡಾಪಟುಗಳು ಮೋದಿ ನೀಡಿದ ಪ್ರೋತ್ಸಾಹಕ್ಕಾಗಿ ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಧನ್ಯವಾದ ಸಲ್ಲಿಸಿದರು.

    ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ಭೇಟಿಯ ವೇಳೆ ಕ್ರೀಡಾಪಟುಗಳು ಮೋದಿಗೆ ತಮ್ಮ ವಿವಿಧ ಕ್ರೀಡಾ ಪರಿಕರಗಳನ್ನು ಉಡುಗೊರೆ ನೀಡಿದ್ದು ವಿಶೇಷವಾಗಿತ್ತು. ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಒಂದನ್ನು ಗಿಫ್ಟ್​ ನೀಡಿದರೆ, ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಹಸ್ತಾಕ್ಷರವಿದ್ದ ಸ್ಟಿಕ್ ನೀಡಿದವು. ಪಿವಿ ಸಿಂಧು ರ‌್ಯಾಕೆಟ್, ಕತ್ತಿವರಸೆಪಟು ಭವಾನಿ ದೇವಿ ಖಡ್ಗ ಮತ್ತು ಬಾಕ್ಸರ್ ಲವ್ಲಿನಾ ಬಾಕ್ಸಿಂಗ್ ಗ್ಲೌಸ್ ಉಡುಗೊರೆ ನೀಡಿ ಮೋದಿಗೆ ಧನ್ಯವಾದ ಸಲ್ಲಿಸಿದರು.

    ಇದನ್ನೂ ಓದಿ: ರೋಜರ್ ಫೆಡರರ್‌ಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ, ಮುಗಿಯಿತೇ ಟೆನಿಸ್ ಜೀವನ?

    ಭಾನುವಾರ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೂ ಭಾರತದ ಒಲಿಂಪಿಕ್ಸ್ ತಂಡಕ್ಕೆ ವಿಶೇಷ ಆಹ್ವಾನಿಸಿದ್ದ ಮೋದಿ, ಎಲ್ಲ ಕ್ರೀಡಾಪಟುಗಳ ಜತೆಗೆ ಛಾಯಾಚಿತ್ರಗಳಿಗೂ ಪೋಸ್ ನೀಡಿದರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ, ಭಾರತದ ಒಲಿಂಪಿಯನ್‌ಗಳ ಸಾಧನೆಯನ್ನು ಕೊಂಡಾಡಿದ್ದರು. ಈ ಮುನ್ನ ಒಲಿಂಪಿಕ್ಸ್ ವೇಳೆಯೂ ಎಲ್ಲ ಪದಕ ವಿಜೇತರ ಜತೆಗೆ ಮೋದಿ ದೂರವಾಣಿ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದ್ದರು.

    ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ದಾಖಲೆಯ 7 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಸ್ವರ್ಣ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಸತತ 2ನೇ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, 41 ವರ್ಷಗಳ ಬಳಿಕ ಪದಕ ಜಯಿಸಿದ ಪುರುಷರ ಹಾಕಿ ತಂಡ, ಒಲಿಂಪಿಕ್ಸ್ ರಜತ ಪದಕ ಜಯಿಸಿದ 2ನೇ ಭಾರತೀಯ ಕುಸ್ತಿಪಟು ಎನಿಸಿದ ರವಿ ಕುಮಾರ್ ದಹಿಯಾ, ಕಂಚು ವಿಜೇತ ಭಜರಂಗ್ ಪೂನಿಯಾ ಜತೆಗೆ ಪ್ರಧಾನಿ ವಿಶೇಷ ಪೋಸ್ ನೀಡಿದರು. ಒಲಿಂಪಿಕ್ಸ್ ವೇಳೆ ತೋರಿದ ಅಶಿಸ್ತಿನ ವರ್ತನೆಗಾಗಿ ಭಾರತೀಯ ಕುಸ್ತಿ ಒಕ್ಕೂಟದಿಂದ ಅಮಾನತುಗೊಂಡಿರುವ ವಿನೇಶ್ ಪೋಗಟ್ ಕೂಡ ಸಮಾರಂಭದಲ್ಲಿ ಹಾಜರಿದ್ದರು.

    ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ಇಂದು ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳ ಜತೆ ಸಂವಾದ
    ಆಗಸ್ಟ್ 24ರಿಂದ ನಡೆಯಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಕ್ರೀಡಾಪಟುಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11ಗಂಟೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆಯ 54 ಕ್ರೀಡಾಪಟುಗಳು 9 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

    ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts