More

    ಅಹರ್ನಿಶಿ ಟೆಸ್ಟ್​ನಲ್ಲಿ ಪ್ರಾಬಲ್ಯ ಸಾಧಿಸಿದರೂ ಡ್ರಾಕ್ಕೆ ತೃಪ್ತಿಪಟ್ಟ ಭಾರತದ ಮಹಿಳೆಯರು

    ಕ್ಯಾರಾರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಅಹರ್ನಿಶಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತ ತಂಡ ಐತಿಹಾಸಿಕ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರೂ ಡ್ರಾಕ್ಕೆ ತೃಪ್ತಿಪಟ್ಟಿದೆ. ಪಂದ್ಯದ ಮೊದಲೆರಡು ದಿನ ಮಳೆ ಕಾಡಿದ್ದು ಕೂಡ ಮಿಥಾಲಿ ರಾಜ್ ಪಡೆಯ ಗೆಲುವಿಗೆ ಹಿನ್ನಡೆಯಾಗಿತ್ತು. ಇದರಿಂದ ಉಭಯ ತಂಡಗಳು ತಲಾ 2 ಅಂಕ ಹಂಚಿಕೊಂಡವು.

    ಭಾನುವಾರ 4 ವಿಕೆಟ್‌ಗೆ 143 ರನ್‌ಗಳಿಂದ 4ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಆಸೀಸ್, 9 ವಿಕೆಟ್‌ಗೆ 241 ರನ್ ಗಳಿಸಿ 136 ರನ್ ಹಿನ್ನಡೆಯೊಂದಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ದಿಟ್ಟ ನಿರ್ಧಾರ ತೆಗೆದುಕೊಂಡಿತು. ಎಲ್ಲಿಸ್ ಪೆರ‌್ರಿ (68*) ಮತ್ತು ಆಶ್ಲೆಗ್ ಗಾರ್ಡ್ನರ್ (51) ಜೋಡಿ 5 ವಿಕೆಟ್‌ಗೆ 89 ರನ್ ಪೇರಿಸಿದ ಬಳಿಕ ಆಸೀಸ್ 32 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಕುಸಿತ ಕಂಡಿತ್ತು.

    ಪ್ರತಿಯಾಗಿ ಭಾರತ ತಂಡ ಶೆಫಾಲಿ ವರ್ಮ (52 ರನ್, 91 ಎಸೆತ, 6 ಬೌಂಡರಿ) ಅರ್ಧಶತಕದ ಬಲದಿಂದ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 135 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 272 ರನ್ ಗುರಿ ಪಡೆದ ಆಸೀಸ್, 2 ವಿಕೆಟ್‌ಗೆ 36 ರನ್ ಗಳಿಸಿ ಡ್ರಾ ಸಾಧಿಸಿತು.

    ಕಳೆದ 15 ವರ್ಷಗಳಲ್ಲಿ ಇದು ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಭಾರತದ ಮಹಿಳೆಯರಿಗೆ ಇದು ಚೊಚ್ಚಲ ಅಹರ್ನಿಶಿ ಟೆಸ್ಟ್ ಕೂಡ ಆಗಿತ್ತು. ಗುರುವಾರದಿಂದ ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    ಭಾರತ: 8 ವಿಕೆಟ್‌ಗೆ 377 ಡಿಕ್ಲೇರ್ ಮತ್ತು 3 ವಿಕೆಟ್‌ಗೆ 135 ಡಿಕ್ಲೇರ್ (ಶೆಫಾಲಿ ವರ್ಮ 52, ಸ್ಮತಿ 31, ಪೂನಂ ಯಾದವ್ 41*, ಮೊಲಿನೆಕ್ಸ್ 23ಕ್ಕೆ 1); ಆಸ್ಟ್ರೇಲಿಯಾ: 9 ವಿಕೆಟ್‌ಗೆ 241 ಡಿಕ್ಲೇರ್ (ಎಲ್ಲಿಸ್ ಪೆರ‌್ರಿ 68*, ಗಾರ್ಡ್ನರ್ 51, ಪೂಜಾ 49ಕ್ಕೆ 3, ಜೂಲನ್ 33ಕ್ಕೆ 2, ಮೇಘನಾ 54ಕ್ಕೆ 2, ದೀಪ್ತಿ 36ಕ್ಕೆ 2) ಮತ್ತು 2 ವಿಕೆಟ್‌ಗೆ 36 (ಹೀಲಿ 6, ಮೂನಿ 11, ಲ್ಯಾನಿಂಗ್ 17*, ಪೂಜಾ 13ಕ್ಕೆ 1, ಜೂಲನ್ 8ಕ್ಕೆ1). ಪಂದ್ಯಶ್ರೇಷ್ಠ: ಸ್ಮತಿ ಮಂದನಾ.

    ಮಹಿಳಾ ಕ್ರಿಕೆಟರ್​ ಸ್ಮತಿ ಮಂದನಾ ಶತಕಕ್ಕಿಂತ ಮುಂಗುರುಳಿಗೆ ಫಿದಾ ಆದ್ರೂ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts