More

    ಜನಮನ ತಣಿಸಿದ ಇಂಡಿಯನ್ ರಾಗಾಸ್

    ಶಿರಸಿ: ನಗರದ ಟಿ.ಎಂ.ಎಸ್. ಸಭಾಂಗಣದಲ್ಲಿ ಇಲ್ಲಿನ ಜನನಿ ಮ್ಯೂಸಿಕ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಇಂಡಿಯನ್ ರಾಗಾಸ್ ಮೂರು ದಿನಗಳ ಕಾಲ ನಡೆದ ಗಾನ ಕಾರ್ಯಕ್ರಮ ಜನಮನ ತಣಿಸಿತು.

    ಗಾಯನ ಕಾರ್ಯಕ್ರಮದ ಅಂಗವಾಗಿ ಕರ್ನಾಟಕೀಯ ಸಂಗೀತ ಖ್ಯಾತಿಯ ಧಾರವಾಡದ ಡಾ. ರಂಜನ್ ಮಯ್ಯಾ ಅವರು ಭಜನ್, ದಾಸರ ಪದ ಹಾಗೂ ವಾದಿರಾಜರ ಕೆಲ ಕೃತಿ, ವಿಜಯ ವಿಠಲದಾಸರ ಪದಗಳನ್ನು ಭಕ್ತಿ ಪೂರ್ವಕವಾಗಿ ಹಾಡಿದರು. ಮೃದಂಗ ವಾದನದಲ್ಲಿ ಶಂಕರ ಭಾಗವತ ಯಲ್ಲಾಪುರ, ಹಾಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಕೊಳಲು ವಾದನದಲ್ಲಿ ಸಮರ್ಥ ತೆಂಗಾರಮನೆ ಸಾಥ್ ನೀಡಿದರು.

    ಹೊನ್ನಾವರದ ವಿನಾಯಕ ಹುಗ್ಗಣ್ಣ ಭಜನೆಗಳನ್ನು ಹಾಡಿದರು. ತಬಲಾದಲ್ಲಿ ಅಕ್ಷಯ ಭಟ್ಟ ಹಂಸಳ್ಳಿ, ಹಾಮೋನಿಯಂನಲ್ಲಿ ಸತೀಶ ಹೆಗ್ಗಾರ್ ಮತ್ತು ತಂಬುರಾದಲ್ಲಿ ಸಂಪದಾ ಸತೀಶ ಹಾಗೂ ಭೂಮಿ ದಿನೇಶ ಸಹಕರಿಸಿದರು.

    ಸಂಸ್ಥೆಯ ವಿದ್ಯಾರ್ಥಿಗಳಾದ ಸನ್ಮತಿ ಕೇಶವ ಹೆಗಡೆ, ಭೂಮಿಕಾ ರಮೇಶ ಹೆಗಡೆ, ರಚಿತಾ

    ಹೆಗಡೆ ಗಾನ ಪ್ರದರ್ಶನ ನಡೆಸಿದರು. ಸಂವಾದಿನಿಯಲ್ಲಿ ಅಜೇಯ ಹೆಗಡೆ ವರ್ಗಾಸರ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಹಕರಿಸಿದರು.

    ಕಲಾವಿದ ಡಾ. ಅಶೋಕ ಹುಗ್ಗಣ್ಣ ಮರಾಠಿ ಅಭಂಗ ಹಾಡಿದರು. ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಅಕ್ಷಯ ಹಂಸಳ್ಳಿ ಹಾಗೂ ತಂಬುರಾದಲ್ಲಿ ಭೂಮಿ ದಿನೇಶ ಮತ್ತು ಸ್ನೇಹಾ ಅಮ್ಮಿನಳ್ಳಿ ಸಾಥ್ ನೀಡಿದರು. ಜನನಿ ಸಂಸ್ಥೆಯ ರೇಖಾ ದಿನೇಶ್ ಗಾಯನ ಪ್ರಸ್ತುತಗೊಳಿಸಿದರು. ಹಾಮೋನಿಯಂನಲ್ಲಿ ಸತೀಶ ಭಟ್ಟ ಹಾಗೂ ತಬಲಾದಲ್ಲಿ ಗುರುರಾಜ ಆಡುಕಳ ಸಾಥ್ ನೀಡಿದರು.

    ತಂಬೂರಾದಲ್ಲಿ ಯುವ ಗಾಯಕಿಯರಾದ ಸಂಪದಾ ಸತೀಶ ಹಾಗೂ ಸ್ನೇಹಾ ಅಮ್ಮಿನಳ್ಳಿ, ತಾಳದಲ್ಲಿ ಅನಂತ ಮೂರ್ತಿ ಸಹಕರಿಸಿದರು.

    ಇದಕ್ಕೂ ಮುನ್ನ ಸಮಾರೋಪ ಸಮಾರಂಭದಲ್ಲಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ವಿದ್ಯಾರ್ಥಿಗಳ ವಿದ್ಯೆಗೆ ಮಾರ್ಗದರ್ಶನದ ಜತೆ ಅದನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಉತ್ತಮ ಶಿಕ್ಷಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಜನನಿ ಸಂಸ್ಥೆಯ ದಿನೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts