More

    VIDEO: ಮುಂದುವರಿದ ಶ್ರೀಶಾಂತ್ ಸ್ಲೆಡ್ಜಿಂಗ್ ಆಟ..!

    ತಿರುವನಂತಪುರಂ: ಭಾರತ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್, ಬರೋಬ್ಬರಿ 8 ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ಜನವರಿ 10 ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲು ಕೇರಳ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಟೂರ್ನಿಗೆ ಪೂರ್ವಾಭ್ಯಾಸದಂತೆ ಅಭ್ಯಾಸ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಆದರೆ, ಶ್ರೀಶಾಂತ್ ಮಾತ್ರ ತಮ್ಮ ಎದುರಾಳಿ ಆಟಗಾರರನ್ನು ಸ್ಲೆಡ್ಜಿಂಗ್ ಮಾಡುವ ಮೂಲಕ ಹಿಂದಿನ ಛಾಳಿ ಮುಂದುವರಿಸಿದ್ದಾರೆ. 37 ವರ್ಷದ ಶ್ರೀಶಾಂತ್ ಅವರ ಸೆಡ್ಜಿಂಗ್ ಕುರಿತು ಕೆಲವೊಂದು ತುಣಕನ್ನು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಯೂಟೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದೆ.

    ಇದನ್ನೂ ಓದಿ: ಕೆಜಿಎಫ್ ನಿರ್ದೇಶಕರೇ ಹುಟ್ಟುಹಾಕಿದರು; ರವಿ ಬಸ್ರೂರ್ ಗಿಂದು ಒಂದಲ್ಲ ಎರಡು ಹುಟ್ಟುಹಬ್ಬ 

    ಆಕ್ರಮಣಕಾರಿ ನಿರ್ವಹಣೆಗೆ ಹೆಸರಾಗಿದ್ದ ಶ್ರೀಶಾಂತ್, ಎದುರಾಳಿಗಳನ್ನು ಕೆಣಕುವುದಕ್ಕೂ ಅಷ್ಟೇ ಪ್ರಸಿದ್ಧಿಯಾಗಿದ್ದರು. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನದ ನಿರೀಕ್ಷೆಯಲ್ಲಿರುವ ಶ್ರೀಶಾಂತ್ ಹಿಂದಿನ ಶೈಲಿಯನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಆಡುವ ಕನಸು ಹೊಂದಿರುವುದಾಗಿ ಶ್ರೀಶಾಂತ್ ತಿಳಿಸಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪದ ಮೇರೆಗೆ ಬಿಸಿಸಿಐ 7 ವರ್ಷ ನಿಷೇಧದ ಶಿಕ್ಷೆ ವಿಧಿಸಿತ್ತು. ಅಭ್ಯಾಸ ಪಂದ್ಯವಾಡುವುದಕ್ಕೂ ಮುನ್ನ ಸಹ ಆಟಗಾರರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

    ಇದನ್ನೂ ಓದಿ: ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ

    ಕೇರಳ ತಂಡಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಡುವುದೇ ಮೊದಲ ಗುರಿ ಎಂದು ಪ್ರತಿಕ್ರಿಯಿಸಿದ್ದಾರೆ. ಉತ್ತಮ ನಿರ್ವಹಣೆ ತೋರಿದರೆ ಐಪಿಎಲ್‌ನಲ್ಲಿ ಆಡುವ ಅವಕಾಶ ಅದಾಗಿಯೇ ದಕ್ಕಲಿದೆ ಎಂದರು. 2013ರಲ್ಲಿ ಶ್ರೀಶಾಂತ್‌ಗೆ 8ವರ್ಷ ನಿಷೇಧ ಹೇರಿದ್ದರೂ 2019ರಲ್ಲಿ 7 ವರ್ಷಕ್ಕೆ ಇಳಿಸಲಾಗಿತ್ತು. ಶ್ರೀಶಾಂತ್ 2007ರ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts