More

    ವೈದ್ಯಲೋಕಕ್ಕೆ ಸವಾಲಾದ 10 ವರ್ಷದ ಬಾಲಕ: “ಮಾನವ ಹಾವು” ಎಂದು ಕರೆಯಲ್ಪಡುವ ಬಾಲಕನಿಗಿರುವ ರೋಗ ಯಾವುದು?

    ನವದೆಹಲಿ: ವಿಚಿತ್ರ ರೋಗದಿಂದ ಬಳಲುತ್ತಿರುವ ಹತ್ತು ವರ್ಷದ ಬಾಲಕನೊಬ್ಬ ‘ಮಾನವ ಹಾವು’ ಎಂಬ ಅನಿರೀಕ್ಷಿತ ಹೆಸರನ್ನು ಹೊತ್ತುಕೊಂಡಿದ್ದಾನೆ. ಹಾವಿನ ಚರ್ಮದ ಮಾದರಿಯಲ್ಲಿರುವ ಬಾಲಕನ ದೇಹವೇ ಇದಕ್ಕೆಲ್ಲ ಕಾರಣವಾಗಿದೆ.

    ಜಗನ್ನಾಥ್​ ಎಂಬ ಬಾಲಕ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಮಗುವಾಗಿದ್ದಾಗಿನಿಂದಲೂ ದಪ್ಪ ಹಾಗೂ ಕಪ್ಪು ಬಣ್ಣದ ವಿಚಿತ್ರ ಚರ್ಮವನ್ನು ಹೊಂದಿದ್ದು, ನೋಡಲು ವಿಕಾರವಾಗಿದ್ದಾನೆ.

    ಬಾಲಕನ ಚರ್ಮವು ವಿರಳವಾದ ಮತ್ತು ವಾಸಿಮಾಡಲಾಗದ ಪರಿಸ್ಥಿತಿಯಲ್ಲಿದ್ದು, ಚರ್ಮದಲ್ಲಿನ ಹಳೆಯ ಕೋಶಗಳನ್ನು ತ್ವರಿತವಾಗಿ ಹೊರಗಡೆ ಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಜಗನ್ನಾಥ್​ ಚರ್ಮವು ತುಂಬಾ ಒಣಗಿರುವುದರಿಂದ ನಿರಂತರವಾಗಿ ಚರ್ಮದ ತೆಳುಭಾಗ ಉದುರುತ್ತಿರುವುದು ವಿರಳವಾದ ಆನುವಂಶಿಕ ಸ್ಥಿತಿ “ಲ್ಯಾಮೆಲ್ಲರ್ ಇಚ್ಥಿಯೋಸಿಸ್” ಎಂಬ ರೋಗಕ್ಕೆ ತುತ್ತಾಗಿದ್ದಾನೆ.

    ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಜಗನ್ನಾಥ್​ ಪ್ರತಿಗಂಟೆಗೂ ಒಮ್ಮೆ ಸ್ನಾನ ಮಾಡಬೇಕಾಗಿದೆ. ಅಲ್ಲದೆ, ತನ್ನ ನೋವುಳ್ಳ ಒಣ ಚರ್ಮವನ್ನು ಶಾಂತಗೊಳಿಸಲು ದಿನವೊಂದಕ್ಕೆ ಅನೇಕ ಬಾರಿ ಮಾಯಿಶ್ಚರೈಸರ್ ಕ್ರೀಮ್​ಗಳನ್ನು ಚರ್ಮಕ್ಕೆ ಹಚ್ಚಬೇಕಾಗಿದೆ. ಬಾಲಕನ ಚರ್ಮ ತುಂಬಾ ಬಿಗಿಯಾಗಿರುವ ಕಾರಣ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಹೆಜ್ಜೆಯನ್ನಿಡಲು ಕೋಲಿನ ಸಹಾಯ ಬೇಕಾಗಿದೆ.

    ಜಗನ್ನಾಥ್​ ತಂದೆ ಪ್ರಭಾಕರ್​ ಪ್ರಧಾನ್​ ಕೂಲಿ ಕಾರ್ಮಿಕರಾಗಿದ್ದಾರೆ. ಮಗನ ಚಿಕಿತ್ಸೆಗೆ ಬೇಕಾದ ಹಣ ಅವರ ಬಳಿ ಇಲ್ಲ. ಅಂದಹಾಗೆ ಪ್ರಭಾಕರ್​ ಪ್ರಧಾನ್​ ಒಡಿಶಾದ ಗಂಜಾಮ್​ ಜಿಲ್ಲೆಯವರಾಗಿದ್ದು, ನನ್ನ ಮಗ ಮಗುವಾಗಿದ್ದಾನಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಲು ಅಗತ್ಯವಾದ ಹಣ ನಮ್ಮ ಬಳಿಯಿಲ್ಲ. ಶಾಪಯುಕ್ತ ಕಾಯಿಲೆಯಿಂದ ನನ್ನ ಮಗ ಪ್ರತಿನಿತ್ಯ ಬಳಲುತ್ತಿರುವುದನ್ನು ನೋಡಿ ನನ್ನ ಹೃದಯ ಬಿರಿದಿದೆ. ಇನ್ನೂ ಗುಣವಾಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

    ಲ್ಯಾಮೆಲ್ಲರ್ ಇಚ್ಥಿಯೋಸಿಸ್ ಎಂಬ ಕಾಯಿಲೆ 2 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಸಿಗುತ್ತದೆ. ಇದು ಚರ್ಮರೋಗ ಇಚ್ಥಿಯೋಸಿಸ್​ನ 20 ಬಗೆಗಳಲ್ಲಿ ಒಂದಾಗಿದೆ. ಇದು ದೋಷಯುಕ್ತ ಜೀನ್​ನಿಂದ ಉಂಟಾಗುತ್ತದೆ. ಇದು ಚರ್ಮದ ಮರು ಉತ್ಪತಿಯನ್ನು ವೇಗಗೊಳಿಸುತ್ತದೆ ಅಥವಾ ಕಡಿತಗೊಳಿಸುತ್ತದೆ. ಈ ಎರಡು ಕೂಡ ಚರ್ಮವನ್ನು ಬಿಗಿಯಾಗಿಸುತ್ತದೆ. ನೋಡಲು ಮೀನು ಮತ್ತು ಸರೀಸೃಪಗಳ ಚರ್ಮದಂತೆ ಕಾಣಿಸುತ್ತದೆ.

    ಲ್ಯಾಮೆಲ್ಲರ್ ಇಚ್ಥಿಯೋಸಿಸ್ ಮೇಲ್ನೋಟಕ್ಕೆ ಮಗುವಾಗಿದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬಿಗಿಯಾದ ಚರ್ಮವು ಮಗುವನ್ನು ಆವರಿಸುತ್ತದೆ. ಈ ಸ್ಥಿತಿಯನ್ನು ಮೆಂಬ್ರೇನ್​ ಎಂತಲೂ ಕರೆಯಲಾಗುತ್ತದೆ. ಕೆಲವು ವಾರಗಳ ನಂತರ ಮೆಂಬ್ರೆನ್​ ಉದುರಿ ಹೋಗುತ್ತದೆ. ಆದರೆ, ಜಗನ್ನಾಥ್​ ವಿಚಾರದಲ್ಲಿ ಆಗಿರುವುದೇ ಬೇರೆಯಾಗಿದೆ. ಮೆಂಬ್ರೇನ್​ ಮುಂದುವರಿದುಕೊಂಡು ಬಂದಿದೆ. ಇದು ಕಣ್ಣನ್ನು ಮುಚ್ಚುವಷ್ಟು ಬಿಗಿಯಾಗಿರುತ್ತದೆ. ಅಲ್ಲದೆ, ತಲೆಯ ಕೂದಲು ಕೂಡ ಉದುರಿ ಹೊಗುತ್ತದೆ.

    ವಿಪರ್ಯಾಸವೆಂದರೆ ಜಗನ್ನಾಥ್​ ಚರ್ಮ ಮಾತ್ರ ಇನ್ನೂ ಗುಣಮುಖವಾಗಿಲ್ಲ. ಆದರೆ, ಮಾಯಿಶ್ಚರೈಸರ್ ಕ್ರೀಮ್​ ಸಹಾಯದಿಂದ ತಾತ್ಕಾಲಿಕ ನೆಮ್ಮದಿಯನ್ನು ನೀಡಲಾಗುತ್ತಿದೆ. ಸ್ಥಳೀಯ ಚರ್ಮರೋಗ ವೈದ್ಯ ಈ ರೋಗವನ್ನು ಗುಣಪಡಿಸಲಾಗದು ಎಂದಿದ್ದಾರೆ. ಆದರೆ, ಕಲೆವು ವೈದ್ಯರು ಇದು ಸಾಧ್ಯವಿದೆ ಎಂದಿದ್ದಾರೆ. ಏನೇ ಆಗಲಿ ಆಡಿ ನಲಿಯಬೇಕಾದ ವಯಸ್ಸಿನಲ್ಲಿ ವಿಚಿತ್ರ ಕಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿರುವ ಬಾಲಕ ಶೀಘ್ರ ಗುಣಮುಖನಾಗಲಿ ಎಂದು ಎಲ್ಲರು ಹಾರೈಸೋಣ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts