More

    ನೇಪಾಳ ಸೇನೆಗೆ 10 ವೆಂಟಿಲೇಟರ್​​ಗಳನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಸೇನೆ

    ನವದೆಹಲಿ: ಭಾರತ ಹಾಗೂ ನೇಪಾಳದ ಸಂಬಂಧ ಈಗ ಮೊದಲಿನಷ್ಟು ಸೌಹಾರ್ಧಯುತವಾಗಿ ಇಲ್ಲ. ಈ ಮಧ್ಯೆ ಭಾರತೀಯ ಸೇನೆ, ನೇಪಾಳ ಸೇನೆಗೆ 10 ವೆಂಟಿಲೇಟರ್​​ಗಳನ್ನು ಉಡುಗೊರೆ ನೀಡಿದೆ.

    10 ವೆಂಟಿಲೇಟರ್​​ಗಳನ್ನು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ವಿನಯ್​ ಮೋಹನ್​ ಕ್ವಾತ್ರಾ ಅವರು ನೇಪಾಳ ಸೇನಾ ಮುಖ್ಯಸ್ಥ ಪೂರ್ಣಚಂದ್ರ ತಾಪಾ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

    ಸುಧಾರಿತ ವಿನ್ಯಾಸದ ಈ ವೆಂಟಿಲೇಟರ್​ಗಳು ಭಾರವಿಲ್ಲ ಹಾಗೂ ಕೈಯಲ್ಲಿ ಸಾಗಿಸಬಹುದಾಗಿದೆ. ಐಸಿಯುಗಳಲ್ಲಿ ಇರುವ ರೋಗಿಗಳಿಗೆ ತುರ್ತು ಅಗತ್ಯವಾಗಿ ಸುಗಮವಾಗಿ ಲಭ್ಯವಾಗುವಂತಹ ವೆಂಟಿಲೇಟರ್​ಗಳು ಇವು ಎನ್ನಲಾಗಿದೆ.

    ನೇಪಾಳದಲ್ಲಿ ಕರೊನಾ ಸೋಂಕಿಗೆ ಈಗಾಗಲೇ 75 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 22,972 ಮಂದಿಗೆ ವೈರಸ್​ ತಗುಲಿದೆ. ಕೊವಿಡ್​-19 ವಿರುದ್ಧ ಹೋರಾಡಲು ನೇಪಾಳಿಗರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗುವುದು ಎಂದು ರಾಯಭಾರಿ ಕ್ವಾತ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡರಲ್ಲಿ ಹೆಚ್ಚುತ್ತಿದೆ ಭಯ; ಇಂದು ನಾಲ್ವರು ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts