More

    ಭಾರತ ಫುಟ್‌ಬಾಲ್ ತಂಡಕ್ಕೆ ಜಯ, ಏಷ್ಯನ್ ಕಪ್ ಅರ್ಹತೆ ಕನಸು ಜೀವಂತ

    ದೋಹಾ: ನಾಯಕ ಸುನೀಲ್ ಛೇಟ್ರಿ (79, 92ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ 2023ರ ಏಷ್ಯನ್ ಕಪ್ ಹಾಗೂ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 2-0 ಗೋಲುಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಸತತ 11 ಪಂದ್ಯಗಳಲ್ಲಿ ಜಯ ಕಾಣದೆ ನಿರಾಸೆ ಅನುಭವಿಸಿದ್ದ ಭಾರತ ತಂಡ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಅಲ್ಲದೆ, ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತ 2015ರ ಬಳಿಕ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ಇ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದೆ.

    ಇದನ್ನೂ ಓದಿ: ಅನುಷ್ಕಾ ಶರ್ಮರ ಕ್ವಾರಂಟೈನ್​​ ಫೋಟೋ ಕ್ಲಿಕ್ಕಿಸಲು ಕೊಹ್ಲಿ ಪಟ್ಟ ಶ್ರಮವನ್ನು ವಿವರಿಸಿದ ಮಹಿಳಾ ಕ್ರಿಕೆಟರ್​!

    ಈಗಾಗಲೇ ಫಿಫಾ ವಿಶ್ವಕಪ್ ರೇಸ್‌ನಿಂದ ಹೊರಬಿದ್ದಿರುವ ಭಾರತ ತಂಡ, ಏಷ್ಯನ್ ಕಪ್ ಅರ್ಹತಾ ಸುತ್ತಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ತೀವ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದ್ದವು. ಬಳಿಕ ದ್ವಿತೀಯಾರ್ಧದಲ್ಲೂ ಭಾರತ ತಂಡ ಪ್ರಬಲ ಪೈಪೋಟಿ ಎದುರಿಸಿತು. ಕಡೇ 10 ನಿಮಿಷ ಭಾರತ ತಂಡ ಪ್ರಬಲ ಪೈಪೋಟಿ ತೋರಿತು. ನಿಗದಿತ ಸಮಯದ ವೇಳೆಗೆ 1-0 ಯಿಂದ ಗೋಲು ದಾಖಲಿಸಿದ್ದ ಭಾರತ, ಇಂಜುರಿ ವೇಳೆಯಲ್ಲೂ ಮತ್ತೊಂದು ಗೋಲು ಬಾರಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: ಕ್ರಿಕೆಟ್​ ಆಡುವ ಎಲ್ಲರಿಗೂ ಸಿಕ್ಸ್​ ಪ್ಯಾಕ್​ ಇರಬೇಕಾಗಿಲ್ಲ, ಪಾಕ್​ ಕ್ರಿಕೆಟಿಗನಿಗೆ ಪ್ಲೆಸಿಸ್​ ಬೆಂಬಲ

    ಮುಂದಿನ ಎದುರಾಳಿ: ಅಫ್ಘಾನಿಸ್ತಾನ 
    ಯಾವಾಗ: ಜೂನ್ 15

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts