More

    ವಿಶ್ವಕಪ್​ ಫೈನಲ್​: ಅರ್ಧ ಶತಕದ ಭರವಸೆ ಬೆನ್ನಲ್ಲೇ ಕೊಹ್ಲಿ ಔಟ್​, ಭಾರತಕ್ಕೆ ಬಹುದೊಡ್ಡ​ ಆಘಾತ

    ಅಹಮಾದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಕೇವಲ 81 ರನ್​ಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ, ಅರ್ಧ ಶತಕದೊಂದಿಗೆ ಆಸರೆಯಾಗಿದ್ದರು. ಆದರೆ, 54 ರನ್​ ಗಳಿಸಿ ಕೊಹ್ಲಿ ವಿಕೆಟ್​ ಒಪ್ಪಿಸುವ ಮೂಲಕ ಭಾರತದ ಭರವಸೆ ಮತ್ತೆ ಕಳೆಗುಂದಿದೆ.

    ಟ್ರೋಫಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಧ ಶತಕ ಹೊಸ ಭರವಸೆಯನ್ನು ಮೂಡಿಸಿತು. ಪಂದ್ಯದ ಗತಿಯನ್ನೇ ಕೊಹ್ಲಿ ಬದಲಿಸುತ್ತಾರೆ ಎಂದು ಕ್ರೀಡಾಭಿಮಾನಿಗಳು ನಂಬಿದ್ದರು. ಆದರೆ, ಆ ನಂಬಿಕೆ ಇದೀಗ ಹುಸಿಯಾಗಿದೆ. 148 ರನ್​ಗಳಿಗೆ ಟೀಮ್​ ಇಂಡಿಯಾ 4 ವಿಕೆಟ್​ಗಳು ಪತನಗೊಂಡಿವೆ. ತಂಡದ ಮೊತ್ತ 30 ರನ್​ ಆಗಿದ್ದಾಗ ಶುಭಮಾನ್​ ಗಿಲ್​ (4), 76 ರನ್​​ ವೇಳೆ ರೋಹಿತ್​ ಶರ್ಮ (47) ಮತ್ತು 81 ರನ್​ ಆಗಿದ್ದಾಗ ಶ್ರೇಯಸ್​ ಅಯ್ಯರ್​ (4) ಔಟಾಗುವ ಮೂಲಕ ಭಾರತಕ್ಕೆ ಭಾರೀ ಆಘಾತವನ್ನು ನೀಡಿದರು. ಆದರೆ, ಇದ್ಯಾವುದಕ್ಕೂ ಅಳುಕದ ಕೊಹ್ಲಿ ತಮ್ಮ ಉತ್ತಮ ಪ್ರದರ್ಶನೊಂದಿಗೆ ಮುನ್ನುಗುತ್ತಿದ್ದರು. ಇದೀಗ ಅರ್ಧ ಶತಕ ಸಿಡಿಸಿ ಕೊಹ್ಲಿ ಔಟಾಗಿರುವುದು ಭಾರತಕ್ಕೆ ಭಾರೀ ಆಘಾತವಾಗಿದೆ.

    ಸದ್ಯ ಕೆ.ಎಲ್​. ರಾಹುಲ್​ ಮತ್ತು ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದಾರೆ. 30 ಓವರ್​ ಮುಕ್ತಾಯಕ್ಕೆ ಭಾರತ 4 ವಿಕೆಟ್​ ನಷ್ಟಕ್ಕೆ 157 ರನ್​ ಕಲೆಹಾಕಿದೆ. ರಾಹುಲ್​ 43 ಮತ್ತು ಜಡೇಜಾ 2 ರನ್​ ಗಳಿಸಿ ಆಟವಾಡುತ್ತಿದ್ದಾರೆ. ರಾಹುಲ್​, ಜಡೇಜಾ ಮತ್ತು ಸೂರ್ಯಕುಮಾರ್​ ಯಾದವ್​ ಮೇಲೆ ಇದೀಗ ಹೆಚ್ಚು ಒತ್ತಡ ಬಿದ್ದಿದೆ. ಈ ಮೂವರಲ್ಲಿ ಯಾರದಾದರೂ ಜಾದೂ ಮಾಡಬೇಕಿದೆ.

    ಅಂದಹಾಗೆ ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿರುವುದು ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ವಿಶ್ವಕಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿರುವುದು ಇದು ನಾಲ್ಕನೇ ಬಾರಿ. 1983, 2003 ಮತ್ತು 2011 ರಲ್ಲಿ ಫೈನಲ್ ತಲುಪಿದೆ ಮತ್ತು 1983 ಮತ್ತು 2011 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.

    ಭಾರತ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್​ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಎರಡೂ ತಂಡಗಳು ಕಾದಾಡುತ್ತಿವೆ.

    ಈ ಪಂದ್ಯವನ್ನು ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಮೋದಿ ಸ್ಟೇಡಿಯಂನಲ್ಲಿ ಫೈನಲ್​ ವೀಕ್ಷಿಸಿದ ಅನುಷ್ಕಾ ಶರ್ಮಾ

    ವಿಶ್ವಕಪ್ ಮಹಾಸಮರ; ಬೆಂಗಳೂರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts