More

    ಟ್ರಂಪ್​ ಭೇಟಿ ಹಿನ್ನೆಲೆಯಲ್ಲಿ ಬರೋಬ್ಬರಿ 300 ವರ್ಷಗಳ ಬಳಿಕ ತಾಜ್​ ಮಹಲ್​ ಗೋರಿಗಳ ಸ್ವಚ್ಛ!

    ಆಗ್ರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ ಹಿನ್ನೆಲೆಯಲ್ಲಿ ಅಹಮದಾಬಾದ್​ನಲ್ಲಿನ ಸ್ಲಮ್​ಗಳಿಗೆ ಗೋಡೆ ನಿರ್ಮಿಸಿದ್ದು ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಯೋಜನೆಯನ್ನು ಭಾರತ ಸರ್ಕಾರ ಪೂರ್ಣಗೊಳಿಸಿರುವುದು ಬೆಳಕಿಗೆ ಬಂದಿದೆ. ಅದೇನೆಂದರೆ, ಬಹು ವರ್ಷಗಳ ಬಳಿಕ ತಾಜ್​ ಮಹಲಿನಲ್ಲಿನ ಎರಡು ಗೋರಿಗಳನ್ನು ಟ್ರಂಪ್​ ಭೇಟಿಗಾಗಿ ಶುಚಿಗೊಳಿಸಲಾಗಿದೆ.

    ಅಹಮದಬಾದ್​ನಲ್ಲಿನ ನಮಸ್ತೆ ಟ್ರಂಪ್​ ಕಾರ್ಯಕ್ರಮ ಮುಗಿಸಿ ಅಧ್ಯಕ್ಷ ಟ್ರಂಪ್ ಕುಟುಂಬ ಸಮೇತ​ ನೇರವಾಗಿ ತಾಜ್​ ಮಹಲ್​ ವೀಕ್ಷಣೆಗೆ ತೆರಳಿದರು. ಹೀಗಾಗಿ ಟ್ರಂಪ್​ ಆಗಮನಕ್ಕೂ ಮುನ್ನ ತಾಜ್​ ಮಹಲ್​ ಸುತ್ತಲೂ ಸ್ವಚ್ಛಗೊಳಿಸಲಾಗಿತ್ತು. ವಿಶೇಷವೆಂದರೆ ತಾಜ್​ ಮಹಲಿನೊಳಗಿರುವ ಒಂದೇ ರೀತಿಯ ಎರಡು ಗೋರಿಗಳನ್ನು ಸುಮಾರು 300 ವರ್ಷಗಳ ಬಳಿಕ ಶುಚಿಗೊಳಿಸಲಾಗಿದೆ. ಗೋರಿಗಳಲ್ಲಿ ಉಂಟಾಗಿದ್ದ ರಂಧ್ರಗಳಿಗೆ ಜೇಡಿ ಮಣ್ಣನ್ನು ಪ್ಯಾಕ್​ ಮಾಡಿ ಮರು ಜೀವವನ್ನು ನೀಡಲಾಗಿದೆ.

    ಭಾರತೀಯ ಮಹಿಳೆಯು ಸುಂದರವಾಗಿ ಕಾಣಲು ಮುಖಕ್ಕೆ ಹಾಕುವ ಫೇಸ್​ಪ್ಯಾಕ್​ನಿಂದ ಈ ಜೇಡಿ ಮಣ್ಣಿನ ಪ್ಯಾಕ್ ಯೋಜನೆ​ ಸ್ಫೂರ್ತಿ ಪಡೆದುಕೊಂಡಿದೆ. ಈ ಹಿಂದೆ ಅರಿಶಿನ ನೀರಿನ ಮೂಲಕ ತೊಳೆಯಲಾಗುತ್ತಿತ್ತು ಎಂದು ತಿಳಿದುಬಂದಿದೆ. ತಾಜ್​ ಮಹಲ್​ಗೆ ಈವರೆಗೂ ಐದು ಬಾರಿ ಜೇಡಿ ಮಣ್ಣಿನ ಪ್ಯಾಕ್​ ಮಾಡಲಾಗಿದೆ. ಆದರೆ, ಅದರ ಒಳಗಿರುವ ಗೋರಿಗಳಿಗೆ ಒಮ್ಮೆಯೂ ಪ್ಯಾಕ್​ ಮಾಡಿರಲಿಲ್ಲ. ಆ ಗೋರಿಗಳು ಮೊಘಲ್​ ರಾಜ ಶಹಜಹಾನ್​ ಮತ್ತು ಆತನ ಪತ್ನಿ ಮುಮ್ತಾಜ್​ರದ್ದಾಗಿದೆ.

    ನಮಸ್ತೆ ಟ್ರಂಪ್​ ಕಾರ್ಯಕ್ರಮ ಹಿನ್ನೆಲೆಯಲ್ಲಿ ಟ್ರಂಪ್​ ಕುಟುಂಬ ಸಮೇತ ತಾಜ್​ ಮಹಲ್​ಗೆ ಇಂದು ಭೇಟಿ ನೀಡಿದ್ದರು. ಆದರೆ, ಗೋರಿಗಳ ಬಳಿ ತೆರಳಲು ಇರುವ ಪ್ರವೇಶ ದ್ವಾರ ಕೇವಲ 5 ಅಡಿ ಇದ್ದುದ್ದರಿಂದ ಗೋರಿಗಳನ್ನು ನೋಡಲು ಸಾಧ್ಯವಾಗಲಿಲ್ಲ. ಈ ಮೊದಲೇ ಟ್ರಂಪ್​ ಭದ್ರತಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. 17ನೇ ಶತಮಾನದ ಗೋರಿಗಳನ್ನು ನೋಡಲು ಟ್ರಂಪ್​ ಅವರಿಗೆ ಬಾಗುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.

    ಗೋರಿಗಳನ್ನು ನೋಡಲು ವರ್ಷಕ್ಕೆ ಮೂರು ಬಾರಿ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ. ಮೊಘಲ್​ ರಾಜ್ಯ ಶಹಜಹಾನ್​ ಮರಣ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತ್ರ ತೆರೆದಿರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts