More

    ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ಹನುಮ ವಿಹಾರಿ, ರಿಷಭ್ ಪಂತ್ ಶತಕ

    ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡ ಅಹರ್ನಿಶಿ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಮೂಲಕ ಗಮನಸೆಳೆದಿದೆ. ಟೆಸ್ಟ್ ಬ್ಯಾಟ್ಸ್‌ಮನ್ ಹನುಮ ವಿಹಾರಿ (104*ರನ್, 194 ಎಸೆತ, 13 ಬೌಂಡರಿ) ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (103*ರನ್, 73 ಎಸೆತ, 9 ಬೌಂಡರಿ, 6 ಸಿಕ್ಸರ್) ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ (61 ರನ್, 120 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಶುಭಮಾನ್ ಗಿಲ್ (65 ರನ್, 78 ಎಸೆತ, 10 ಬೌಂಡರಿ) ಅರ್ಧಶತಕ ಬಾರಿಸಿ ಉತ್ತಮ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ಎ ವಿರುದ್ಧ ಪ್ರಾಬಲ್ಯ ಸಾಧಿಸಿದೆ.

    ಎಸ್‌ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 2ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿ 4 ವಿಕೆಟ್‌ಗೆ 386 ರನ್ ಪೇರಿಸಿದೆ. ಈ ಮೂಲಕ ಒಟ್ಟಾರೆ 472 ರನ್‌ಗಳ ಮುನ್ನಡೆ ಕಂಡು ಸ್ಪಷ್ಟ ಮೇಲುಗೈ ಸಾಧಿಸಿದೆ.

    ಆರಂಭಿಕ ಪೃಥ್ವಿ ಷಾ (3) ಬೇಗನೆ ಔಟಾದ ಬಳಿಕ ಮಯಾಂಕ್-ಶುಭಮಾನ್ ಗಿಲ್ ಜೋಡಿ 2ನೇ ವಿಕೆಟ್‌ಗೆ 104 ರನ್ ಜತೆಯಾಟವಾಡಿತು. ಈ ಮೂಲಕ ಇವರಿಬ್ಬರು ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆರಂಭಿಕರ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದ್ದಾರೆ. ಇವರಿಬ್ಬರು 60 ಪ್ಲಸ್ ರನ್ ಬಾರಿ ನಿರ್ಗಮಿಸಿದ ಬಳಿಕ ನಾಯಕ ಅಜಿಂಕ್ಯ ರಹಾನೆ (38) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ಜತೆಗೂಡಿದ ಹನುಮ ವಿಹಾರಿ ಮತ್ತು ರಿಷಭ್ ಪಂತ್ ಜೋಡಿ ಆತಿಥೇಯ ಬೌಲರ್‌ಗಳಿಗೆ ಕಗ್ಗಂಟಾಯಿತು. ವಿಹಾರಿ-ಪಂತ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 147 ರನ್ ಜತೆಯಾಟವಾಡಿದರು. ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಮೂಲಕ ಆಸೀಸ್ ಎ ಬೌಲರ್‌ಗಳನ್ನು ಕಾಡಿದರು.

    ಭಾರತ: 194 ಮತ್ತು 90 ಓವರ್‌ಗಳಲ್ಲಿ 4 ವಿಕೆಟ್‌ಗೆ 386 (ಪೃಥ್ವಿ ಷಾ 3, ಮಯಾಂಕ್ ಅಗರ್ವಾಲ್ 61, ಶುಭಮಾನ್ ಗಿಲ್ 65, ಹನುಮ ವಿಹಾರಿ 104*, ಅಜಿಂಕ್ಯ ರಹಾನೆ 38, ರಿಷಭ್ ಪಂತ್ 103*, ಸ್ಟೆಕೆಟೀ 54ಕ್ಕೆ 2, ವೈಲ್ಡರ್‌ಮತ್ 79ಕ್ಕೆ 1, ಸ್ವಿಪ್‌ಸನ್ 148ಕ್ಕೆ 1), ಆಸ್ಟ್ರೇಲಿಯಾ ಎ: 108 (ಅಲೆಕ್ಸ್ ಕ್ಯಾರಿ 32, ಶಮಿ 29ಕ್ಕೆ 3, ಸೈನಿ 19ಕ್ಕೆ 3, ಬುಮ್ರಾ 33ಕ್ಕೆ 2, ಸಿರಾಜ್ 26ಕ್ಕೆ 1).

    ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮ ಪಾಸ್, ಆಸೀಸ್‌ಗೆ ಪ್ರಯಾಣಿಸಲು ಸಿದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts