More

    ಪುಲ್ವಾಮಾ ದಾಳಿ ಮಾಡಿದ್ದು ನಾವೇ ಎಂದ ಪಾಕ್​ಗೆ ಭಾರತದ ಕಟು ತಿರುಗೇಟು

    ನವದೆಹಲಿ: ಪುಲ್ವಾಮಾ ದಾಳಿ ನಡೆಸಿದ್ದು ನಾವೇ ಎಂದು ಇಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಸಂಸತ್ತಿನಲ್ಲಿ ಫೆಡರಲ್ ಸಚಿವ ಫವಾದ್ ಚೌಧರಿ ಮಾತನಾಡುತ್ತ, ಪುಲ್ವಾಮಾ ದಾಳಿ ಇಮ್ರಾನ್ ಖಾನ್​ ಸರ್ಕಾರದ ಬಹುದೊಡ್ಡ ಸಾಧನೆ ಎಂದು ಹೇಳಿದ್ದಾರೆ.

    ಪಾಕ್​ನ ಈ ಹೇಳಿಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಬಗೆಗಿನ ಸತ್ಯ ಇಡೀ ಜಗತ್ತಿಗೇ ಗೊತ್ತಿದೆ. ಭಯೋತ್ಪಾದಕರಿಗೆ ಆ ದೇಶ ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತದೆ ಎಂಬುದು ಜಗಜ್ಜಾಹೀರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್​ ಶ್ರೀವಾಸ್ತವ್ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಸಂಸತ್ತಿನಲ್ಲಿ ‘ಮೋದಿ’; ಭಾಷಣ ಅರ್ಧಕ್ಕೇ ಬಿಟ್ಟ ಸಚಿವ, ಮುಜಗರಕ್ಕೀಡಾದ ಇಮ್ರಾನ್​ ಸರ್ಕಾರ

    ಪಾಕ್​ ಉಗ್ರರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂಬ ಸತ್ಯವನ್ನು ಅದರ ಯಾವ ನಿರಾಕರಣೆಗಳೂ ಮುಚ್ಚಿಡಲು ಸಾಧ್ಯವೇ ಇಲ್ಲ. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಅನೇಕ ಉಗ್ರಸಂಘಟನೆಗಳ ಭಯೋತ್ಪಾದಕರಿಗೆ ಆಶ್ರಯಕೊಟ್ಟಿರುವ ಪಾಕಿಸ್ತಾನ, ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುವುದೂ ಸರಿಯಲ್ಲ ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.

    ಕಳೆದ ವರ್ಷ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್​​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಅದು ಭಾರತದ ಪಾಲಿಗೆ ಕರಾಳ ದಿನ. ಈ ದಾಳಿಯ ಹೊಣೆಯನ್ನು ಪಾಕ್​ನ ಜೈಷ್​ ಎ ಮೊಹಮ್ಮದ್​ ಉಗ್ರಸಂಘಟನೆ ಹೊತ್ತುಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಪಾಕ್​ನ ಬಾಲಾಕೋಟ್​​ನ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. (ಏಜೆನ್ಸೀಸ್​)

    ಪುಲ್ವಾಮ ದಾಳಿ ಮಾಡಿಸಿದ್ದು ನಾವೇ: ಸತ್ಯ ಒಪ್ಪಿಕೊಂಡ ಪಾಕ್ ಸಚಿವ..! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts