More

    ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು

    ನವದೆಹಲಿ: ಯೋಧರ ಜೀವನವೇ ಹಾಗೆ. ಯಾವಾಗ, ಏನಾಗುತ್ತದೆಯೋ ಗೊತ್ತೇ ಆಗುವುದಿಲ್ಲ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಈ ಯೋಧರ ಜೀವನ ಹಾಗೂ ಅವರ ಕುಟುಂಬ ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಲೇ ಇರುತ್ತವೆ.

    ಅಂಥದ್ದೇ ಒಂದು ನೋವಿನ ಘಟನೆ ಭಾರತದ ಯೋಧ ಕೆ.ಪಳನಿ ಅವರ ಜೀವನದಲ್ಲಿಯೂ ನಡೆದುಬಿಟ್ಟಿದೆ. ಚೀನಾದಿಂದ ಭಾರತವನ್ನು ಕಾಪಾಡಲು ನಿನ್ನೆ ಹೋರಾಟ ನಡೆಸಿ ಹುತಾತ್ಮರಾದವರ ಪೈಕಿ ತಮಿಳುನಾಡಿನ ಕೆ.ಪಳನಿ ಕೂಡ ಒಬ್ಬರು. ರಾಮನಾಥಪುರ ಜಿಲ್ಲೆಯ ಕಡುಕ್ಕಲೂರು ಗ್ರಾಮದ ನಿವಾಸಿಯಾಗಿರುವ ಪಳನಿ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಇವರು ಈಚೆಗಷ್ಟೇ ಸ್ವಂತದ ಮನೆ ಕಟ್ಟಿಸಿದ್ದರು. ತಾವು ಈಗಿರುವ ಮನೆಯ ಸಮೀಪ ಯಾವುದೇ ಉತ್ತಮ ಶಾಲೆಗಳು ಇಲ್ಲದ ಹಿನ್ನೆಲೆಯಲ್ಲಿ, ಅವರು ತಮ್ಮ ಗ್ರಾಮದಿಂದ 65 ಕಿ.ಮೀ ದೂರದಲ್ಲಿರುವ ರಾಮಂತಪುರದ ಪಟ್ಟಣದ ಬಳಿ ಮನೆ ನಿರ್ಮಿಸಿದ್ದರು.

    15 ದಿನಗಳ ಹಿಂದಷ್ಟೇ ಗೃಹ ಪ್ರವೇಶವೂ ಆಗಿತ್ತು. ಆದರೆ ಪಳನಿಯವರು ಇನ್ನೂ ಆ ಮನೆಗೆ ಹೋಗಿರಲಿಲ್ಲ. ಚೀನಾ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ಏರ್ಪಟ್ಟಿದ್ದರಿಂದ ಅವರು ಗೃಹ ಪ್ರವೇಶಕ್ಕೂ ಬಂದಿರಲಿಲ್ಲ.

    ಇದನ್ನೂ ಓದಿ: ‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು

    ಮುಂದಿನ ವರ್ಷವೇ ಅವರ ನಿವೃತ್ತಿಯಾಗಲಿತ್ತು. ನಿವೃತ್ತಿ ಬಳಿಕ ಹೊಸ ಮನೆಯಲ್ಲಿ ಕುಟುಂಬದ ಜೊತೆಗೆ ಕಳೆಯುವ ಆಸೆ ಹೊಂದಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಯೋಧ ಈಗ ಹುತಾತ್ಮರಾಗಿದ್ದಾರೆ.

    ಪತ್ನಿ ವನತಿದೇವಿ, ಮಗ ಪ್ರಸನ್ನ (10), ಮಗಳು ದಿವ್ಯಾರನ್ನು ( 8) ಅವರನ್ನು ಬಿಟ್ಟು ಹೋಗಿದ್ದಾರೆ. ಪಳನಿಯ ಅವರಂತೆ ಅವರ ಕಿರಿಯ ಸಹೋದರ ಇಧಾಯಕಾನಿ ಸಹ ಸೇನೆಗೆ ಸೇರಿದ್ದರು. ಅವರು ಸದ್ಯ ರಾಜಸ್ಥಾನದಲ್ಲಿ ನೆಲೆಸಿದ್ದು, ಅಣ್ಣನ ಅಂತ್ಯಕ್ರಿಯೆಗೆ ಹಾಜರಾಗುತ್ತಿದ್ದಾರೆ. ಬುಧವಾರ ಪಳಾನಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

    ತಮಿಳುನಾಡು ಮುಖ್ಯಮಂತ್ರಿ ಕೆ ಪಲ್ನೈಸ್ವಾಮಿ ಪಳನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಅರ್ಹ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನೂ ಘೋಷಿಸಿದ್ದಾರೆ. ಅಂತಿಮ ವಿಧಿಗಳನ್ನು ರಾಜ್ಯ ಸರ್ಕಾರದ ಗೌರವಗಳೊಂದಿಗೆ ನಡೆಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)

    ಪ್ರೀತಿಯೇ ಮುಳುವಾಯ್ತು: ಮೂತ್ರ ಕುಡಿಸಿ ಹಲ್ಲೆ- ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts