More

    3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ, 1-1 ರಿಂದ ಸರಣಿ ಸಮಬಲ

    ಲೀಡ್ಸ್: ಆತಿಥೇಯ ಇಂಗ್ಲೆಂಡ್ ವೇಗಿಗಳ ದಾಳಿ ಎದುರು ಮಂಡಿಯೂರಿದ ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 76 ರನ್‌ಗಳಿಂದ ಸೋಲನುಭವಿಸಿತು. ಇದರಿಂದ 5 ಟೆಸ್ಟ್‌ಗಳ ಸರಣಿಯೂ 1-1 ರಿಂದ ಸಮಬಲಗೊಂಡಿತು. ಚೇತೇಶ್ವರ ಪೂಜಾರ (91ರನ್, 189 ಎಸೆತ, 15 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (55ರನ್, 125 ಎಸೆತ, 8 ಬೌಂಡರಿ) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಿರುಗೇಟು ನೀಡುವ ಭರವಸೆಯಲ್ಲಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ವೇಗಿಗಳು 4ನೇ ದಿನದಾಟದ ಆರಂಭದಲ್ಲೇ ಕಡಿವಾಣ ಹೇರಿದರು.

    ಇದನ್ನೂ ಓದಿ: VIDEO: ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ ಭವಿನಾಬೆನ್ ಪಟೇಲ್

    91ರನ್‌ಗಳಿಂದ ಪೂಜಾರ ಹಾಗೂ 45 ರನ್‌ಗಳಿಂದ ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಜೋಡಿಗೆ ಆರಂಭದಲ್ಲೇ ಒಲಿ ರಾಬಿನ್‌ಸನ್ ಕಡಿವಾಣ ಹಾಕಿದರು. ಒಲಿ ರಾಬಿನ್‌ಸನ್ (65ಕ್ಕೆ 5), ಕ್ರೇಗ್ ಓವರ್‌ಟನ್ (47ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 99.3 ಓವರ್‌ಗಳಲ್ಲಿ 278 ರನ್‌ಗಳಿಗೆ ಸರ್ವಪತನ ಕಂಡಿತು. ದಿನದಾಟದಲ್ಲಿ ಭಾರತ ಕೇವಲ 19.3 ಓವರ್‌ಗಳಲ್ಲಿ ಉಳಿದ 8 ವಿಕೆಟ್ ಕೈಚೆಲ್ಲಿತು. ಭೋಜನ ವಿರಾಮಕ್ಕೂ ಮುನ್ನವೇ ಸರ್ವಪತನ ಕಂಡಿತು. ಭಾರತ ಮೊದಲ ಇನಿಂಗ್ಸ್ 78 ರನ್‌ಗಳಿಸಿದ್ದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್ 432 ರನ್‌ಗಳಿಸಿ 354 ರನ್ ಮುನ್ನಡೆ ಸಾಧಿಸಿತ್ತು. 

    ಇದನ್ನೂ ಓದಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ಆರಂಭಿಸಿದ ಮೀರಾಬಾಯಿ ಚಾನು

    ಭಾರತ: 78 ಮತ್ತು 99.3 ಓವರ್‌ಗಳಲ್ಲಿ 278 (ರೋಹಿತ್ ಶರ್ಮ 59, ಕೆಎಲ್ ರಾಹುಲ್ 9, ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಒಲಿ ರಾಬಿನ್‌ಸನ್ 65ಕ್ಕೆ 5, ಕ್ರೇಗ್ ಓವರ್‌ಟನ್ 47ಕ್ಕೆ 3, ಜೇಮ್ಸ್ ಆಂಡರ್‌ಸನ್ 63ಕ್ಕೆ 1, ಮೊಯಿನ್ ಅಲಿ 40ಕ್ಕೆ 1), ಇಂಗ್ಲೆಂಡ್: 432

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts