More

    ಭಾರತದಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾಯ

    ನವದೆಹಲಿ: ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 142ನೇ ಸ್ಥಾನವನ್ನು ಭಾರತ ಉಳಿಸಿಕೊಂಡಿದೆ. ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ ಎನ್ನುವುದನ್ನು ಈ ರ‍್ಯಾಂಕಿಂಗ್ ಸೂಚಿಸಿದೆ. ‘ಪತ್ರಕರ್ತರಿಗೆ ಅಪಾಯಕಾರಿಯಾದ ಜಗತ್ತಿನ ದೇಶಗಳಲ್ಲಿ ಭಾರತವೂ ಒಂದು’ ಎಂದು ಅಂತಾರಾಷ್ಟ್ರೀಯ ಪತ್ರಿಕೋದ್ಯಮದ ಸಂಸ್ಥೆ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ (ಆರ್​ಎಸ್​ಎಫ್) ಮಂಗಳವಾರ ಪ್ರಕಟಿಸಿರುವ 2021ನೇ ಸಾಲಿನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಹೇಳಿದೆ.

    ಭಾರತದಲ್ಲಿ ಬಿಜೆಪಿ ಬೆಂಬಲಿಗರು ನಿರ್ಭೀತ ಹಾಗೂ ಟೀಕಾತ್ಮಕ ವರದಿ ಮಾಡುವ ಪತ್ರಕರ್ತರಲ್ಲಿ ಭೀತಿ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ. ವಿಶ್ಲೇಷಣಾತ್ಮಕ ವರದಿಗಾರರಿಗೆ ‘ಸರ್ಕಾರದ ವಿರೋಧಿ’ ಅಥವಾ ‘ರಾಷ್ಟ್ರ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಆರ್​ಎಸ್​ಎಫ್ ದೂರಿದೆ.

    ನಾರ್ವೆ ಟಾಪ್: ನಾರ್ವೆ ಕಳೆದ ಸಾಲಿನಂತೆ ಈ ವರ್ಷವೂ ನಂಬರ್ ಒನ್ ಸ್ಥಾನದಲ್ಲಿದೆ. ಫಿನ್ಲೆಂಡ್ ಮತ್ತು ಡೆನ್ಮಾರ್ಕ್ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಏರಿಟ್ರಿಯಾ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಪಾಕಿಸ್ತಾನ 145, ಚೀನಾ 177 ಹಾಗೂ ಉತ್ತರ ಕೊರಿಯಾ 179ನೇ ಸ್ಥಾನದಲ್ಲಿವೆ.

    ಮತ್ತೊಮ್ಮೆ ಲಾಕ್​ಡೌನ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts