More

    ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಶತಕ ಬಾರಿಸಿದ ಭಾರತ: ವಿವಿಧ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದವರ ಮಾಹಿತಿ ಇಲ್ಲಿದೆ !

    ಹಾಂಗ್‌ರೆೌ: ಭಾರತದ ಕ್ರೀಡಾಶಕ್ತಿ ಹಾಂಗ್‌ರೆೌ ಏಷ್ಯನ್ ಗೇಮ್ಸ್‌ನಲ್ಲಿ ಅನಾವರಣಗೊಂಡಿದೆ. ಕ್ರೀಡಾಕೂಟದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪದಕಗಳ ಶತಕ ಸಿಡಿಸುವ ಮೂಲಕ ಭಾರತ, ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ. ಚೀನಾ ಅಂಗಳದಲ್ಲಿ ಪದಕಗಳ ಶತಕ ಪೂರ್ಣಗೊಂಡ ಅಕ್ಟೋಬರ್ 7 ದೇಶದ ಕ್ರೀಡಾಪ್ರೇಮಿಗಳಿಗೆ ಸ್ಮರಣೀಯ ದಿನವೆನಿಸಿದೆ. ಕಳೆದ ಬಾರಿ ಸರ್ವಾಧಿಕ 70 ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳು ಈ ಬಾರಿ ಚಿನ್ನ,ಬೆಳ್ಳಿ, ಕಂಚಿನ ಪದಕಗಳ ಪ್ರತ್ಯೇಕ ಲೆಕ್ಕಾಚಾರದಲ್ಲೂ ಹೊಸ ದಾಖಲೆ ಬರೆದಿದ್ದಾರೆ. 661 ಕ್ರೀಡಾಪಟುಗಳ ಬೃಹತ್ ತಂಡದೊಂದಿಗೆ ಕಣಕ್ಕಿಳಿದಿದ್ದ ಭಾರತ 22 ಕ್ರೀಡೆಗಳಲ್ಲಿ ಒಟ್ಟು 107 ಪದಕ ಗೆಲ್ಲುವ ಮೂಲಕ ಶನಿವಾರ ಅಭಿಯಾನ ಮುಗಿಸಿದೆ.

    ಚಿನ್ನ: 28
    ಬೆಳ್ಳಿ: 38
    ಕಂಚು: 41

    *ರೋಯಿಂಗ್: ಪುರುಷರ ಡಬಲ್ಸ್ ತಂಡ : ಬಾಬು ಲಾಲ್ ಯಾದವ್,ಲೇಖ್ ರಾಮ್. ರೋಯಿಂಗ್: ಪುರುಷರ ಕೋಕ್ಸ್‌ಲೆಸ್ ತಂಡ
    ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್, ಆಶಿಶ್.

    https://x.com/SonySportsNetwk/status/1710481450561347717?s=20


    *ರೋಯಿಂಗ್: ಪುರುಷರ ಸ್ಕಲ್ಸ್ ತಂಡ 
    ಸತ್ನಾಮ್ ಸಿಂಗ್, ಪರ್ಮಿಂದರ್ ಸಿಂಗ್, ಸುಖ್‌ಮೀತ್ ಸಿಂಗ್. ಜಕರ್ ಖಾನ್.
    *ಶೂಟಿಂಗ್: ಪುರುಷರ ಏರ್ ರೈಲ್ 10 ಮೀ. 3 ಪೋಸಿಷನ್
    ಐಶ್ವರಿ ಪ್ರತಾಪ್ ಸಿಂಗ್

    *ಶೂಟಿಂಗ್: ಪುರುಷರ 25 ಮೀ. ರ‌್ಯಾಪಿಡ್ ೈರ್ ಪಿಸ್ತೂಲ್ ತಂಡ
    ಆದರ್ಶ್ ಸಿಂಗ್, ಅನೀಶ್ ಬನ್ನಾವಾಲ, ವಿಜಯವೀರ್ ಸಿಧು*ಶೂಟಿಂಗ್: ಮಹಿಳೆಯರ 10 ಮೀ. ಏರ್ ರೈಲ್
    ರಮಿತಾ ಜಿಂದಾಲ್

    *ಶೂಟಿಂಗ್: ಮಹಿಳೆಯರ ರೈಲ್ 50 ಮೀ.
    ಆಶಿ ಚೋಕ್ಸಿ

    *ಶೂಟಿಂಗ್: ಪುರುಷರ ಸ್ಕೀಟ್ ತಂಡ
    ಗುರ್‌ಜೋತ್ ಸಿಂಗ್, ಅಂಗದ್ ವೀರ್ ಸಿಂಗ್, ಅನಂತ್‌ಜೀತ್ ನರುಕಾ

    *ಶೂಟಿಂಗ್: ಪುರುಷರ ವೈಯಕ್ತಿಕ ಟ್ಯ್ರಾಪ್ ವಿಭಾಗ
    ಕೈನಾನ್ ಚೈನಾಯಿ

    *ಸೈಲಿಂಗ್: ಪುರುಷರ ಡಿಂ ಐಎಲ್‌ಸಿಅ7
    ವಿಷ್ಣು ಸರವಣನ್

    *ಸೈಲಿಂಗ್: ಪುರುಷರ ವಿಂಡ್‌ಸರ್ ಆರ್‌ಎಸ್‌ಎಕ್ಸ್
    ಇಬಾದ್ ಅಲಿ

    *ಈಕ್ವೆಸ್ಟ್ರಿಯನ್: ಡ್ರೆಸೆಜ್ ವೈಯಕ್ತಿಕ ವಿಭಾಗ
    ಅನುಶ್ ಅಗರ್ವಾಲ್

    *ಸ್ಕಾ ್ವಷ್: ಮಹಿಳೆಯರ ತಂಡ
    ಜೋಶ್ನಾ ಚಿನ್ನಪ್ಪ, ಅನಾಹತ್ ಸಿಂಗ್, ದೀಪಿಕಾ ಪಲ್ಲಿಕಲ್, ತನ್ವಿ ಖನ್ನಾ

    *ಸ್ಕ್ವಾಷ್: ಮಿಶ್ರ ಡಬಲ್ಸ್ ವಿಭಾಗಅಭಯ್ ಸಿಂಗ್, ಅನಾಹತ್ ಸಿಂಗ್

    *ಅಥ್ಲೆಟಿಕ್ಸ್: ಮಹಿಳೆಯರ ಶಾಟ್‌ಪುಟ್
    ಕಿರಣ್ ಬಲಿಯಾನ್

    *ಅಥ್ಲೆಟಿಕ್ಸ್: ಪುರುಷರ 1,000 ಮೀ ಓಟ
    ಗುಲ್‌ವೀರ್ ಸಿಂಗ್

    *ಅಥ್ಲೆಟಿಕ್ಸ್: ಪುರುಷರ 1,500 ಮೀ ಓಟ
    ಜಿನ್ಸನ್ ಜಾನ್ಸನ್

    *ಅಥ್ಲೆಟಿಕ್ಸ್: ಮಹಿಳೆಯರ ಡಿಸ್ಕಸ್ ಥ್ರೋ
    ಸೀಮಾ ಪೂನಿಯಾ

    *ಅಥ್ಲೆಟಿಕ್ಸ್: ಹೆಪ್ಟಾಥ್ಲಾನ್
    ನಂದಿನಿ ಅಗಸರ

    *ಅಥ್ಲೆಟಿಕ್ಸ್: ಮಹಿಳೆಯರ 3,000 ಮೀ. ಸ್ಟೀಪಲ್ ಚೇಸ್:
    ಪ್ರೀತಿ ಲಾಂಬ

    *ಅಥ್ಲೆಟಿಕ್ಸ್: 35 ಕಿಮೀ ನಡಿಗೆ ಮಿಶ್ರ ತಂಡ ವಿಭಾಗ
    ರಾಮ್ ಬಾಬು, ಮಂಜು ರಾಣಿ

    *ರೋಲರ್ ಸ್ಪೋರ್ಟ್ಸ್: ಪುರುಷರ 3,000 ಮೀ. ಸ್ಕೇಟಿಂಗ್ ರಿಲೇ
    ವಿಕ್ರಮ ಇಂಗಳೆ, ಅರ್ಯನ್‌ಪಾಲ್ ಸಿಂಗ್, ಸಿದ್ದಾರ್ಥ್ ಕಾಂಬ್ಳೆ, ಆನಂದ್ ಕುಮಾರ್.

    *ರೋಲರ್ ಸ್ಪೋರ್ಟ್ಸ್: ಮಹಿಳೆಯರ 3,000 ಮೀ. ಸ್ಪೀಡ್ ಸ್ಕೇಟಿಂಗ್ ರಿಲೇ
    ಆರತಿ, ಕಾರ್ತಿಕಾ, ಹೀರಲ್ ಸಧು, ಸಂಜನಾ ಬತುಲಾ

    *ಟಿಟಿ: ಮಹಿಳೆಯರ ಡಬಲ್ಸ್
    ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ.

    *ಕನೋಯಿಂಗ್: ಪುರುಷರ ಸ್ಪ್ರೀಂಟ್ ಸಿ-2, 1,000 ಮೀ.
    ಅರ್ಜುನ್ ಸಿಂಗ್, ಸುನೀಲ್ ಸಿಂಗ್.

    *ಅಥ್ಲೆಟಿಕ್ಸ್: ಮಹಿಳೆಯರ 400 ಮೀ. ಹರ್ಡಲ್ಸ್
    ವಿದ್ಯಾ ರಾಮರಾಜ್.

    *ಅಥ್ಲೆಟಿಕ್ಸ್: ಪುರುಷರ ಟ್ರಿಪಲ್ ಜಂಪ್
    ಪ್ರವೀಣ್ ಚಿತ್ರಾವೇಲ್

    *ಬಾಕ್ಸಿಂಗ್: ಮಹಿಳೆಯರ 50 ಕೆಜಿ ವಿಭಾಗ
    ನಿಖತ್ ಜರೀನ್

    *ಬಾಕ್ಸಿಂಗ್: ಮಹಿಳೆಯರ 54 ಕೆಜಿ ವಿಭಾಗ
    ಪ್ರೀತಿ ಪವಾರ್

    *ಬಾಕ್ಸಿಂಗ್: ಮಹಿಳೆಯರ 57 ಕೆಜಿ ವಿಭಾಗ:
    ಪರ್ವೀನ್ ಹೂಡಾ

    *ಬಾಕ್ಸಿಂಗ್: ಪುರುಷರ 92 ಕೆಜಿ ವಿಭಾಗ:
    ನರೇಂದರ್

    *ಕುಸ್ತಿ: ಪುರುಷರ ಗ್ರೀಕ್-ರೋಮನ್ 87 ಕೆಜಿ ವಿಭಾಗ
    ಸುನೀಲ್ ಕುಮಾರ್

    *ಕುಸ್ತಿ: ಮಹಿಳೆಯರ ಫ್ರಿಸ್ಟೈಲ್ 53 ಕೆಜಿ ವಿಭಾಗ
    ಅಂತಿಮ್ ಪಾಂಗಲ್

    *ಕುಸ್ತಿ: ಮಹಿಳೆಯರ ಫ್ರಿಸ್ಟೈಲ್ 62 ಕೆಜಿ ವಿಭಾಗ
    ಸೋನಮ್ ಮಲಿಕ್

    *ಕುಸ್ತಿ: ಮಹಿಳೆಯರ ಫ್ರಿಸ್ಟೈಲ್ 76 ಕೆಜಿ ವಿಭಾಗ
    ಕಿರಣ್ ಬಿಷ್ಣೋಯಿ

    *ಕುಸ್ತಿ: ಪುರುಷರ ಫ್ರಿಸ್ಟೈಲ್ 57 ಕೆಜಿ ವಿಭಾಗ
    ಅಮಾನ್ ಶೆರಾವತ್

    *ಆರ್ಚರಿ: ಮಹಿಳಾ ರಿಕರ್ವ್ ತಂಡ
    ಅಂಕಿತಾ, ಸಿಮ್ರಾನ್‌ಜೀತ್ ಕೌರ್, ಭಜನ್ ಕೌರ್

    * ಆರ್ಚರಿ: ಮಹಿಳೆಯರ ವೈಯಕ್ತಿಕ ಕಂಪೌಂಡ್ ವಿಭಾಗ
    ಆದಿತಿ ಸ್ವಾಮಿ

    *ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ವಿಭಾಗ
    ಎಚ್‌ಎಸ್ ಪ್ರಣಯ್

    *ಸೆಪಕ್ ಟೆಕ್ರಾ: ಮಹಿಳೆಯರ ರೇಗು ತಂಡ
    ಪ್ರಿಯಾ ದೇವಿ, ಖುಷ್ಬೂ, ಚಾವೋಬ ದೇವಿ, ಬಿ ದೇವಿ, ಮೈಪಾಕ್ ದೇವಿ.

    *ಹಾಕಿ: ಮಹಿಳೆಯರ ತಂಡ ವಿಭಾಗ
    ಸವಿತಾ ಪೂನಿಯಾ ಸಾರಥ್ಯದ 18 ಆಟಗಾರ್ತಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts