More

    “10 ಮಿಲಿಯನ್ ಬಾಂಗ್ಲಾದೇಶೀಯರಿಗೆ ಭಾರತ ಆಶ್ರಯ ನೀಡಿದೆ”

    ಢಾಕಾ : “ಪಾಕಿಸ್ತಾನಿ ಸೈನಿಕರಿಂದ ಜೀವಕ್ಕೆ ಮತ್ತು ಮಾನಕ್ಕೆ ಅಪಾಯ ಎದುರಿಸಿ ಬಾಂಗ್ಲಾದೇಶದಿಂದ ಓಡಿಹೋಗಬೇಕಾದ ಸುಮಾರು 10 ಮಿಲಿಯನ್ ಜನರಿಗೆ ಭಾರತ ಆಶ್ರಯ ನೀಡಿದೆ. ಅವರಿಗೆ ಆಹಾರ, ಔಷಧಿ, ವಾಸಿಸಲು ಸ್ಥಳ ನೀಡಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತ ಎಲ್ಲ ರೀತಿಯ ಸಹಕಾರ ನೀಡಿದೆ” – ಇದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು.

    ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಹಸೀನಾ ಅವರು ಈ ಮಾತುಗಳನ್ನಾಡಿದ್ದಾರೆ. ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದ ಮೇರೆಗೆ ಇಂದು ಬೆಳಿಗ್ಗೆ ಢಾಕಾ ತಲುಪಿದ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಹಸೀನಾ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಾಂಗ್ಲಾ ಸೇನೆಯ ಅದ್ಧೂರಿ ಸ್ವಾಗತ ಮತ್ತು ಸಲ್ಯೂಟ್ ನಡುವೆ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

    ಇದನ್ನೂ ಓದಿ: ಖೇಲಾ ಶೇಷ್ ಹೋಬೆ ! “ದೀದಿ, ನಿಮ್ಮ ಆಟ ಮುಗಿಯಲಿದೆ” ಎಂದ ಮೋದಿ

    ಇದು ಕರೊನಾ ಮಹಾಮಾರಿಯು ಜಗತ್ತನ್ನು ಅಪ್ಪಳಿಸಿದ ನಂತರ ಪ್ರಧಾನಿ ಮೋದಿ ಅವರು ಕೈಗೊಂಡಿರುವ ಮೊದಲ ವಿದೇಶ ಯಾತ್ರೆಯಾಗಿದೆ. ಬಾಂಗ್ಲಾದೇಶದ 50 ನೇ ರಾಷ್ಟ್ರೀಯ ದಿವಸ ಆಚರಣೆ ಮತ್ತು ಶೇಖ್ ಮುಜೀಬ್ ಉರ್ ರೆಹಮಾನ್ ಅವರ ಜನ್ಮಶತಮಾನೋತ್ಸವದಲ್ಲಿ ಮೋದಿ ಭಾಗವಹಿಸುತ್ತಿದ್ದಾರೆ. ಈ ಪ್ರವಾಸದ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಹಸೀನಾ ಅವರೊಂದಿಗೆ ಮಾತುಕತೆ ನಡೆಸುವುದರೊಂದಿಗೆ ದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರನ್ನೂ ಭೇಟಿ ಮಾಡಲಿದ್ದಾರೆ. (ಏಜೆನ್ಸೀಸ್)

    ಅಂತರರಾಜ್ಯ ಡ್ರಗ್ ಪೆಡ್ಲರ್ಸ್ : 1.5 ಕೋಟಿ ರೂ. ಮೌಲ್ಯದ ಗಾಂಜಾ ವಶ

    ತೆರೆಯ ಮೇಲೆ ಬ್ಯಾಡ್ಮಿಂಟನ್ ಲೋಕ ತೋರಿಸುವ ‘ಸೈನಾ’

    ಸಾಲ ತೀರಿಸಲು ಶ್ರೀಮಂತರ ಮಗನನ್ನು ಅಪಹರಿಸಿದರು, 2 ಕೋಟಿ ರೂ. ಬೇಡಿಕೆ ಇಟ್ಟರು; 7 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts