More

    ಜಗತ್ತಿಗೆ ಸಾಂಪ್ರದಾಯಿಕ ಮೌಲ್ಯ ಕೊಟ್ಟ ಭಾರತ

    ಶೃಂಗೇರಿ: ಭಾರತ ವೈವಿಧ್ಯದ ದೇಶವಾದರೂ ಎಲ್ಲರೂ ಸಾಂಪ್ರದಾಯಿಕ ಮೌಲ್ಯಗಳನ್ನು ಗೌರವಿಸಿ ಜಗತ್ತಿಗೆ ಉನ್ನತ ಸಂದೇಶ ನೀಡುತ್ತಿದ್ದಾರೆ ಎಂದು ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಭಾರತಿ ತಿಳಿಸಿದರು.

    ಗುರುವಾರ ಕಾಲೇಜಿನಲ್ಲಿ ಕರ್ನಾಟಕ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ ಎಂಬ ಶಬ್ದದ ಅರ್ಥ ಬಹುವ್ಯಾಪಕವಾಗಿ ಬೆಳೆದಿದೆ. ರಾಜ್ಯದ ನಾನಾ ಪ್ರಾಂತ್ಯಗಳಲ್ಲಿ ಆಚರಿಸುವ ಹಾಗೂ ದೇಶದ ವಿವಿಧ ಪ್ರದೇಶಗಳಲ್ಲಿ ಆಚರಣೆಗಳು ವಿಭಿನ್ನವಾಗಿದೆ. ಹಿರಿಯರು ನೀಡಿ ಹೋದ ಮೌಲ್ಯ, ಪರಂಪರೆ, ಜೀವನಮಟ್ಟ, ಹಬ್ಬಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಆಧುನಿಕ ಜಗತ್ತಿನ ತಂತ್ರಜ್ಞಾನದ ಭರಾಟೆಯಲ್ಲಿ ಮೌಲ್ಯಯುತ ರಾಷ್ಟ್ರೀಯ ಸಂಸ್ಕೃತಿಯನ್ನು ಮರೆಯಬಾರದು. ಅದನ್ನು ನಿರಂತರವಾಗಿ ಅನುಸರಿಸಿದರೆ ಮಾತ್ರ ದೇಶದ ಉನ್ನತಿ ಸಾಧ್ಯ ಎಂದರು.
    ಕರ್ನಾಟಕ ಸಂಸ್ಕೃತಿ ದರ್ಶನ ಶೀರ್ಷಿಕೆಯಡಿ ವಿದ್ಯಾರ್ಥಿಗಳು ಮದ್ರಾಸ್ ಕರ್ನಾಟಕ, ಹಳೇ ಮೈಸೂರು, ಕೊಡವ, ದಕ್ಷಿಣ ಕನ್ನಡ, ಹೈದರಾಬಾದ್ ಹಾಗೂ ಬುಡಗಟ್ಟು ಜನಾಂಗದ ವೇಷಭೂಷಣಗಳನ್ನು ತೊಟ್ಟು ಅಲ್ಲಿನ ಪರಂಪರೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.
    ಪ್ರಾಧ್ಯಾಪಕರಾದ ಬಿ.ಜಿ.ಆಶಾ, ಮಂಜುನಾಥ್, ರಾಘವೇಂದ್ರ ಪ್ರಸಾದ್, ಆಶಾ, ರಾಘವೇಂದ್ರರೆಡ್ಡಿ, ಗ್ರಂಥಪಾಲಕ ಮೇಘಾನಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts