More

    ಎಲ್ಲ ರಂಗಗಳಲ್ಲಿ ವಿಕಾಸನಗೊಂಡಿದೆ ಭಾರತ

    ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟದ ಆಕ್ಸರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಶನಿವಾರ ಸಂಜೆ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ನಡೆಯಿತು.

    ವಿಕಸಿತ ಭಾರತಕ್ಕೆ ಭಗವದ್ಗೀತೆ ಕುರಿತು ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಸವರಾಜ ಹಂಚಲಿ ಉಪನ್ಯಾಸ ನೀಡಿ ಮಾತನಾಡಿ, ಭಾರತ ಆರ್ಥಿಕ ರಂಗವನ್ನು ಹೊರತುಪಡಿಸಿ ಉಳಿದ ರಂಗಗಳಲ್ಲಿ ಮೊದಲಿನಿಂದಲೂ ವಿಕಾಸವಾಗಿಯೇ ಇದೆ ಎಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಡಿ.ಬಿ. ವಡವಡಗಿ ಮಾತನಾಡಿ, ವಿದ್ಯಾರ್ಥಿಗಳು ಬೆಳಗ್ಗೆ ಎದ್ದ ಕೂಡಲೇ ಓಂ ಶ್ರೀ ಗುರುಭ್ಯೋ ನಮಃ ಎಂದು ಪ್ರಾರ್ಥಿಸಿ ತಾಯಿ- ತಂದೆ ಸ್ಮರಣೆ ಮಾಡಬೇಕು.

    ಗುರಿ ಸಾಧನೆಯತ್ತ ಗಮನ ಹರಿಸಿ ಯಶಸ್ಸು ಗಳಿಸಬೇಕು ಎಂದರು.

    ಇದನ್ನೂ ಓದಿ: BBKS10: ಫಿನಾಲೆಯಲ್ಲಿ ಈ ಐವರು ಇರುತ್ತಾರೆ; ಸ್ನೇಹಿತ್​ ಹೆಸರಿಸಿದ ಆ ಟಾಪ್ ಫೈನಲಿಸ್ಟ್​ಗಳು ಇವರೇ ನೋಡಿ

    ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ ಅವರು ಅಭಿಯಾನ ಹಾಗೂ ಭಗವದ್ಗೀತೆ ಮತ್ತು ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಅವರ ಪ್ರಯತ್ನ ಕುರಿತು ಮಾತನಾಡಿದರು.

    ಪ್ರಾಂಶುಪಾಲ ಸಿ.ಎಸ್. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ದರ್ಶನಗೌಡ ಪಾಟೀಲ, ಮುಖ್ಯಶಿಕ್ಷಕಿ ರಂಜಿತಾ ಹೆಗಡೆ, ರೂಪಾ ನಾಟೀಕಾರ, ಸೌಮ್ಯಾ, ಅನುಷಾ, ಸಾನಿಯಾ, ಸಂಗೀತಾ, ಸುಹಾನಾ, ಅಂಕಿತಾ, ಪ್ರಿಯಾಂಕ, ಸೃಷ್ಟಿ, ಭವಾನಿ, ಕುಮಾರ ಚಿಕ್ಕಮಠ, ಅಭಿರಾಮ ಹೆಗಡೆ ಅವರು ಭಗವದ್ಗೀತೆಯ 10ನೇ ಅಧ್ಯಾಯ ಪಠಿಸಿ ಗೀತ ಗಾಯನ ನಡೆಸಿಕೊಟ್ಟರು. ಮುಖ್ಯಶಿಕ್ಷಕ ಇಸ್ಮಾಯಿಲ್ ಮನಿಯಾರ ಸ್ವಾಗತಿಸಿದರು. ಪ್ರಾಂಶುಪಾಲ ರೇವಣಸಿದ್ದ ಮುರಾಳ ವಂದಿಸಿದರು.

    ಜ್ಞಾನಭಾರತಿಯಲ್ಲಿ ಉಪನ್ಯಾಸ, ದೀಪಾರಾಧನೆ : ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಅಭಿಯಾನದ ಎರಡನೇ ದಿನದ ಕಾರ್ಯಕ್ರಮ ಮತ್ತು ಕಾರ್ತಿಕ ದೀಪಾರಾಧನೆ ಶುಕ್ರವಾರ ಸಂಜೆ ನಡೆಯಿತು. ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ ಉಪನ್ಯಾಸ ನೀಡಿದರು. ಜ್ಞಾನಭಾರತಿ ಆಡಳಿತಾಧಿಕಾರಿ ಶಾಂತಾ ಭಟ್ ದೀಪಾರಾಧನೆ ಮಹತ್ವ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಬಿ.ಪಿ. ಕುಲಕರ್ಣಿ ಮಾತನಾಡಿದರು. ಶಿಕ್ಷಕಿಯರಾದ ಗುರುಬಾಯಿ ಮತ್ತು ಶೈಹನಾ ಅವರು ಭಾರತಾಂಬೆ, ಸರಸ್ವತಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಜ್ಞಾನಭಾರತಿ ಶಾಲೆಯ ಪಾಲಕರಿಂದ ಕಾರ್ತಿಕ ದೀಪಾರಾಧನೆ ಆಚರಿಸಲಾಯಿತು. ಶಿಕ್ಷಕಿ ರಂಜಿತಾ ಹೆಗಡೆ ಭಗವದ್ಗೀತೆ ಪಠಣ, ಗೀತಗಾಯನ ಮಾಡಿದರು. ರಾಜಶೇಖರ ಹೊಳಿ, ಶಾಲೆಯ ಉಪಾಧ್ಯಕ್ಷ ಡಾ. ಎಸ್.ಬಿ. ವಡವಡಗಿ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಪ್ರಾಚಾರ್ಯ ಎ.ಕೆ. ಹುನಗುಂದ, ಜಿ.ಜೆ. ಪಾದಗಟ್ಟಿ, ಮಹಾದೇವಿ ಕಂಠಿ, ಪಾಲಕರಾದ ಅಕ್ಕಮಹಾದೇವಿ ಪೂಲೇಶಿ, ರೇಖಾ ಕಾಳೆ, ಅನಿತಾ ಕರಣಿ, ರಶ್ಮಿ ತೇಲಂಗಿ, ಭಾಗ್ಯಶ್ರೀ ಹಳೇಮನಿ, ಶಾರದಾ ಗಸ್ತಿಗಾರ, ಬಸನಗೌಡ ಪಾಟೀಲ, ಪಿಂಟು ರಾಠೋಡ ಉಪಸ್ಥಿತರಿದ್ದರು. ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ ಆಶಯ ನುಡಿ ಹೇಳಿದರು. ಸರಸ್ವತಿ ಮಡಿವಾಳರ ನಿರೂಪಿಸಿದರು. ಅಕ್ಕಮಹಾದೇವಿ ನಾಗರಾಳ ವಂದಿಸಿದರು.
    ಸಂತ ಕನಕದಾಸ ಶಾಲೆಯಲ್ಲಿಂದು : ಭಗವದ್ಗೀತೆ ಅಭಿಯಾನ ಸಪ್ತಾಹದ ನಾಲ್ಕನೇ ದಿನದ ಪಠಣ, ಉಪನ್ಯಾಸ ಕಾರ್ಯಕ್ರಮವನ್ನು ಡಿ. 11ರಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಪಟ್ಟಣದ ಅವರು ಸುಂದರ ಬದುಕಿಗೆ ಭಗವದ್ಗೀತೆ ವಿಷಯದ ಮೇಲೆ ಉಪನ್ಯಾಸ ನೀಡುವರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಅಧ್ಯಕ್ಷತೆ ವಹಿಸುವರು. ಶಾಲೆಯ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯದರ್ಶಿ ಬಿ.ಎಸ್. ಮೇಟಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಲ್. ಗುರವ, ಮುಖ್ಯಶಿಕ್ಷಕ ಎಂ.ಎನ್. ಯರಝರಿ ಅತಿಥಿಗಳಾಗಿ ಆಗಮಿಸುವರು ಎಂದು ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts