ನವದೆಹಲಿ: ಪಾಕಿಸ್ತಾನದ ನನಕಾನಾ ಸಾಹಿಬ್ ಗುರುದ್ವಾರದ ಮೇಲೆ ನಡೆದ ವಿಧ್ವಂಸಕ ಕೃತ್ಯವನ್ನು ಭಾರತ ಖಂಡಿಸಿದೆ.
ಪಾಕಿಸ್ತಾನ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅಲ್ಲಿನ ಅಲ್ಪ ಸಂಖ್ಯಾತ ಸಿಖ್ರ ರಕ್ಷಣೆಗೆ ಮುಂದಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಗುರುನಾನಕ್ ಅವರ ಜನ್ಮಸ್ಥಳ ಹಾಗೂ ಪವಿತ್ರ ನಗರವಾದ ನನಕಾನಾ ಸಾಹಿಬ್‌ನಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರವನ್ನು ಸಚಿವಾಲಯ ಖಂಡಿಸಿದೆ.
ಅಲ್ಲಿನ ಸಿಖ್ ಸಮುದಾಯದ ಸದಸ್ಯರ ಸುರಕ್ಷತೆಗೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ಪಾಕಿಸ್ತಾನ ಸರ್ಕಾರವನ್ನು ಕೋರುತ್ತೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಿಖ್ ಧರ್ಮದ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಮಧ್ಯಪ್ರವೇಶಿಸಬೇಕು. ಅಲ್ಲಿನ ಐತಿಹಾಸಿಕ ದೇಗುಲವನ್ನು ಹಾನಿಯಾಗದಂತೆ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಈ ಬಗ್ಗೆ ಖಂಡಿಸಿ ಟ್ವೀಟ್ ಮಾಡಿದ್ದು ಸೂಕ್ತ ಕ್ರಮಕ್ಕೆ ಪಾಕಿಸ್ತಾನ ಅಧ್ಯಕ್ಷರಿಗೆ ಕೋರಿದ್ದಾರೆ.
ಈ ಬಗ್ಗೆ ಉತ್ತರಿಸಲು ಮುಂದಾದ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್, ಉತ್ತರ ಪ್ರದೇಶದಲ್ಲಿ ಮುಸ್ಲಿಂರ ಮೇಲೆ ದಾಳಿ ನಡೆದಿದೆ ಎನ್ನಲಾದ ಮೂರು ಹಳೆಯ ಫೊಟೋಗಳನ್ನು ಟ್ವೀಟರ್ನಲ್ಲಿ ಹಂಚಿಕೊಂಡು ನಂತರ ಡಿಲಿಟ್ ಮಾಡಿದ್ದಾರೆ.
ಈ ಫೊಟೋಗಳು ಹಳೆಯದಾಗಿದ್ದು ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾಚಾರದ ಫೋಟೋಗಳು, ಅದನ್ನು ಭಾರತದ ಉತ್ತರ ಪ್ರದೇಶದಲ್ಲಿ ನಡೆದಿತ್ತು ಎಂದು ಇಮ್ರಾನ್ ಖಾನ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ಮತ್ತೆ ಅದನ್ನು ಡಿಲಿಟ್ ಮಾಡಿ ಭಾರಿ ಮುಖಭಂಗ ಅನುಭವಿದ್ದಾರೆ. (ಏಜೆನ್ಸೀಸ್)
Prime Minister of Pakistan Imran Khan tweets an old video of violence from Bangladesh and says, 'Indian police's pogrom against Muslims in UP.' pic.twitter.com/6SrRQvm0H9
— ANI (@ANI) January 3, 2020