ಕೋಲ್ಕತ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಭುತ್ವ ಸಾಧಿಸಿದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು. ಇದರಿಂದ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು. ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದ್ದ ಭಾರತ ತಂಡ ಬಲಿಷ್ಠ ವಿಂಡೀಸ್ ಎದುರು ಚುಟುಕು ಕ್ರಿಕೆಟ್‌ನಲ್ಲೂ ಸವಾರಿ ನಡೆಸುವ ಸೂಚನೆ ನೀಡಿತು.
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ, ಯುವ ಸ್ಪಿನ್ನರ್ ರವಿ ಬಿಷ್ಣೋಯಿ (17ಕ್ಕೆ 2) ಮಾರಕ ದಾಳಿ ನಡುವೆಯೂ ನಿಕೋಲಸ್ ಪೂರನ್ (61ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 157 ರನ್ ಗಳಿಸಿತು. ಬಳಿಕ ಭಾರತ ತಂಡ ರೋಹಿತ್ ಶರ್ಮ (40ರನ್, 19 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 162ರನ್‌ಗಳಿಸಿತು.
ವೆಸ್ಟ್ ಇಂಡೀಸ್: 7 ವಿಕೆಟ್‌ಗೆ 157 (ನಿಕೋಲಸ್ ಪೂರನ್ 61, ಕೈರಾನ್ ಪೊಲ್ಲಾರ್ಡ್ 24*, ಕೈಲ್ ಮೇಯರ್ಸ್ 31, ರವಿ ಬಿಷ್ಣೋಯಿ 17ಕ್ಕೆ 2, ಹರ್ಷಲ್ ಪಟೇಲ್ 37ಕ್ಕೆ 2, ಭುವನೇಶ್ವರ್ ಕುಮಾರ್ 31ಕ್ಕೆ 1, ದೀಪಕ್ ಚಹರ್ 28ಕ್ಕೆ 1), ಭಾರತ: 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 162 (ರೋಹಿತ್ ಶರ್ಮ 40, ಇಶಾನ್ ಕಿಶನ್ 35, ಸೂರ್ಯಕುಮಾರ್ 34*, ವೆಂಕಟೇಶ್ ಅಯ್ಯರ್ 24*, ರೋಸ್ಟನ್ ಚೇಸ್ 14ಕ್ಕೆ 2).
#TeamIndia seal a 6-wicket win 💪💪@Paytm #INDvWI pic.twitter.com/AoDdAjA2Lh
— BCCI (@BCCI) February 16, 2022