More

    ಭಾರತ ಯುವ ಪಡೆಗೆ ಸೋಲು, ಟಿ20 ಸರಣಿ ಸಮಬಲ

    ಕೊಲಂಬೊ: ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಗೆಲುವಿಗಾಗಿ ಅಂತಿಮ ಹಂತದವರೆಗೂ ಹೋರಾಡಿದ ಭಾರತದ ಯುವ ಪಡೆ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು. ಇದರಿಂದ ಮೂರು ಪಂದ್ಯಗಳ ಸರಣಿ 1-1 ರಿಂದ ಸಮಬಲ ಕಂಡಿತು. ನಿರ್ಣಾಯಕ 3ನೇ ಹಾಗೂ ಅಂತಿಮ ಟಿ20 ಗುರುವಾರ (ರಾತ್ರಿ 8ಕ್ಕೆ ಆರಂಭ) ನಡೆಯಲಿದೆ.

    ಇದನ್ನೂ ಓದಿ: ಡಾಕ್ಟರ್ ಆಗಬೇಕೆಂಬ ರೈತನ ಮಗಳ ಕನಸು ನನಸಾಗಿಸಿದ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್

    ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ಶಿಖರ್ ಧವನ್ (40 ರನ್, 42 ಎಸೆತ, 5 ಬೌಂಡರಿ), ಋತುರಾಜ್ ಗಾಯಕ್ವಾಡ್ (21 ರನ್, 18 ಎಸೆತ, 1 ಬೌಂಡರಿ) ಹಾಗೂ ಕನ್ನಡಿಗ ದೇವದತ್ ಪಡಿಕಲ್ (29 ರನ್, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ದೇಣಿಗೆಯಿಂದ 5 ವಿಕೆಟ್‌ಗೆ 132 ರನ್ ಪೇರಿಸಿತು. ಪ್ರತಿಯಾಗಿ ಶ್ರೀಲಂಕಾ ತಂಡ ಧನಂಜಯ ಡಿಸಿಲ್ವ (40*ರನ್, 34 ಎಸೆತ, 1 ಬೌಂಡರಿ, 1 ಸಿಕ್ಸರ್) ಕಡೇ ಹಂತದಲ್ಲಿ ತೋರಿದ ಏಕಾಂಗಿ ನಿರ್ವಹಣೆ ಲವಾಗಿ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 133 ರನ್‌ಗಳಿಸಿ ಜಯದ ನಗೆ ಬೀರಿತು.

    ಇದನ್ನೂ ಓದಿ: ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಭಾರತ: 5 ವಿಕೆಟ್‌ಗೆ 132 (ಧವನ್ 40, ಪಡಿಕಲ್ 29, ಋತುರಾಜ್ 21, ಸ್ಯಾಮ್ಸನ್ 7, ನಿತೀಶ್ ರಾಣಾ 9, ಭುವನೇಶ್ವರ್ 13*, ಸೈನಿ 1*, ಅಖಿಲ 29ಕ್ಕೆ 2, ಚಮೀರಾ 23ಕ್ಕೆ 1, ಹಸರಂಗ 30ಕ್ಕೆ 1, ಶನಕ 14ಕ್ಕೆ 1). ಶ್ರೀಲಂಕಾ: 6 ವಿಕೆಟ್‌ಗೆ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 133 (ಮಿನೋದ್ ಭನುಕಾ 36, ಧನಂಜಯ ಡಿಸಿಲ್ವ 40*, ಕುಲದೀಪ್ ಯಾದವ್ 30ಕ್ಕೆ 2 , ಭುವನೇಶ್ವರ್ 21ಕ್ಕೆ 1, ವರುಣ್ ಚಕ್ರವರ್ತಿ 18ಕ್ಕೆ 1, ಸಕಾರಿಯ 34ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts