More

    ದೀಪಕ್ ಚಹರ್, ಭುವಿ ಮ್ಯಾಜಿಕ್, ಭಾರತ ತಂಡಕ್ಕೆ ಏಕದಿನ ಸರಣಿ

    ಕೊಲಂಬೊ: ಪ್ರಧಾನ ಬೌಲರ್‌ಗಳಾಗಿ ಕಣಕ್ಕಿಳಿದರೂ ಕೆಳಕ್ರಮಾಂಕದಲ್ಲಿ ಆಸರೆಯಾದ ದೀಪಕ್ ಚಹರ್ (69*ರನ್, 82 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಭುವನೇಶ್ವರ್ ಕುಮಾರ್ (19*ರನ್, 28 ಎಸೆತ, 2 ಬೌಂಡರಿ) ಜೋಡಿ ಮುರಿಯದ 8ನೇ ವಿಕೆಟ್‌ಗೆ ಪೇರಿಸಿದ 84 ರನ್ ಜತೆಯಾಟದ ಫಲವಾಗಿ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎದುರು 3 ವಿಕೆಟ್‌ಗಳಿಂದ ರೋಚಕ ಜಯ ದಾಖಲಿಸಿತು. ಪಂದ್ಯದಲ್ಲಿ ಆಲ್ರೌಂಡ್ ನಿರ್ವಹಣೆ ತೋರಿದ ದೀಪಕ್ ಚಹರ್ (53ಕ್ಕೆ 2) ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.

    ಅಗ್ರ ಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಒಂದು ಹಂತದಲ್ಲಿ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದ ಭಾರತ ತಂಡವನ್ನು ದೀಪಕ್ ಚಹರ್, ಭುವನೇಶ್ವರ್ ಕುಮಾರ್ ಜತೆಗೂಡಿ ಗೆಲುವಿನ ದಡ ಸೇರಿಸಿದರು. ಇದರಿಂದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಯುವ ತಂಡ 3 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ 2-0ಯಿಂದ ಜಯ ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 9 ವಿಕೆಟ್‌ಗೆ 275 ರನ್ ಪೇರಿಸಿತು. ಪ್ರತಿಯಾಗಿ ಭಾರತ 49.1 ಓವರ್‌ಗಳಲ್ಲಿ 7 ವಿಕೆಟ್‌ಗೆ 277 ರನ್ ಗಳಿಸಿ ಜಯದ ನಗೆ ಬೀರಿತು.

    ಶ್ರೀಲಂಕಾ: 9 ವಿಕೆಟ್‌ಗೆ 275 (ಚರಿತಾ ಅಸಲಂಕಾ 65, ಅವಿಷ್ಕಾ ಫೆರ್ನಾಂಡೊ 50, ಚಮಿಕಾ ಕರುಣರತ್ನೆ 44*, ಮಿನೊದ್ ಭನುಕಾ 36, ಭುವನೇಶ್ವರ್ ಕುಮಾರ್ 54ಕ್ಕೆ 3, ಯಜುವೇಂದ್ರ ಚಾಹಲ್ 50ಕ್ಕೆ 3, ದೀಪಕ್ ಚಹರ್ 53ಕ್ಕೆ 2), ಭಾರತ : 49.1 ಓವರ್‌ಗಳಲ್ಲಿ 7 ವಿಕೆಟ್‌ಗೆ 277 (ದೀಪಕ್ ಚಹರ್ 69*, ಸೂರ್ಯಕುಮಾರ್ ಯಾದವ್ 53, ಮನೀಷ್ ಪಾಂಡೆ 37, ಶಿಖರ್ ಧವನ್ 29, ವನಿಂದು ಹಸರಂಗ 37ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts