More

    ನ್ಯೂಲ್ಯಾಂಡ್ಸ್‌ನಲ್ಲಿ ಬುಮ್ರಾ ದರ್ಬಾರ್ ; ಭಾರತಕ್ಕೆ 13 ರನ್‌ಗಳ ಅಲ್ಪ ಮುನ್ನಡೆ

    ಕೇಪ್‌ಟೌನ್: ವೇಗಿ ಜಸ್‌ಪ್ರೀತ್ ಬುಮ್ರಾ (42ಕ್ಕೆ 5) ಮಾರಕ ದಾಳಿ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ರನ್‌ಗಳ ಅಲ್ಪಮುನ್ನಡೆ ಸಾಧಿಸಿತು. ನಿರ್ಣಾಯಕ ಹಂತದಲ್ಲಿ ಉಮೇಶ್ ಯಾದವ್ (64ಕ್ಕೆ 2) ಹಾಗೂ ಮೊಹಮದ್ ಶಮಿ (39ಕ್ಕೆ 2) ಆತಿಥೇಯ ತಂಡಕ್ಕೆ ಆಘಾತ ನೀಡುವ ಮೂಲಕ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡನೇ ಸರದಿ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತದ ನಡುವೆಯೂ ಎಚ್ಚರಿಕೆ ನಿರ್ವಹಣೆಗೆ ಮುಂದಾಗಿದೆ. ಸರಣಿ ಗೆಲುವಿನ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುವಳು ಎಂಬುದು ಕುತೂಹಲ ಕೆರಳಿಸಿದೆ.

    ನ್ಯೂಲ್ಯಾಂಡ್ಸ್ ಮೈದಾನದ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್‌ಗೆ 17 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಕೀಗನ್ ಪೀಟರ್ಸೆನ್ (72ರನ್, 166 ಎಸೆತ 9 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ 210 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ದಿನದಂತ್ಯಕ್ಕೆ 2 ವಿಕೆಟ್‌ಗೆ 57 ರನ್ ಪೇರಿಸಿದ್ದು, ಒಟ್ಟಾರೆ 70 ರನ್ ಮುನ್ನಡೆಯಲ್ಲಿದೆ. ಎರಡನೇ ದಿನದಾಟದಲ್ಲೂ 11 ವಿಕೆಟ್ ಪತನ ಕಂಡವು.

    ಭಾರತ: 223 ಮತ್ತು 17 ಓವರ್‌ಗಳಲ್ಲಿ 2 ವಿಕೆಟ್‌ಗೆ 57 (ವಿರಾಟ್ ಕೊಹ್ಲಿ 14*, ಕೆಎಲ್ ರಾಹುಲ್ 10, ಪೂಜಾರ 9*, ಕಗಿಸೊ ರಬಾಡ 25ಕ್ಕೆ 1, ಮಾರ್ಕೋ ಜಾನ್ಸೆನ್ 7ಕ್ಕೆ 1). ದಕ್ಷಿಣ ಆಫ್ರಿಕಾ: 210 (ಕೀಗನ್ ಪೀಟರ್ಸೆನ್ 72, ಟೆಂಬಾ ಬವುಮಾ 28, ರಾಸಿ ವ್ಯಾನ್ ಡರ್ ಡುಸೆನ್ 21, ಕಗಿಸೊ ರಬಾಡ 15, ಜಸ್‌ಪ್ರೀತ್ ಬುಮ್ರಾ 42ಕ್ಕೆ 5, ಉಮೇಶ್ ಯಾದವ್ 64ಕ್ಕೆ 2, ಮೊಹಮದ್ ಶಮಿ 39ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts