More

    ಕಿವೀಸ್‌ಗೆ ಬೃಹತ್ ಸವಾಲು ; ವಾಂಖೆಡೆಯಲ್ಲಿ ಗೆಲುವಿನತ್ತ ಭಾರತ

    ಮುಂಬೈ: ಸಂಪೂರ್ಣ ಬಿಗಿ ಹಿಡಿತ ಸಾಧಿಸಿರುವ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ಗೆಲುವಿನ ಹಾದಿಯಲ್ಲಿದೆ. ಇನ್ನೂ 2 ದಿನಗಳ ಆಟ ಬಾಕಿ ಉಳಿದಿರುವ ನಿರ್ಣಾಯಕ ಪಂದ್ಯವನ್ನು ಮೂರೂವರೆ ದಿನಗಳಲ್ಲೇ ಗೆಲ್ಲುವ ಅವಕಾಶ ಭಾರತದ ಮುಂದಿದೆ. ಸೋಮವಾರ ಉಳಿದ 5 ವಿಕೆಟ್ ಕಬಳಿಸಿ ಸರಣಿ ವಶಪಡಿಸಿಕೊಳ್ಳುವತ್ತ ವಿರಾಟ್ ಕೊಹ್ಲಿ ಪಡೆ ದಿಟ್ಟ ಹೆಜ್ಜೆ ಇಟ್ಟಿದೆ.

    ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ನೀಡಿದ 540 ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್, ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 138 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನೂ 400 ರನ್ ಗಳಿಸಬೇಕಿದೆ. ಕಾನ್ಪುರದಲ್ಲಿ ಕೇವಲ 1 ವಿಕೆಟ್‌ನಿಂದಾಗಿ ಗೆಲುವು ತಪ್ಪಿಸಿಕೊಂಡಿದ್ದ ಭಾರತ ತಂಡ, ಈ ಬಾರಿ 4ನೇ ದಿನದಾಟದಲ್ಲೇ ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

    ಭಾನುವಾರ ವಿಕೆಟ್ ನಷ್ಟವಿಲ್ಲದೆ 69 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಪರ ಮಯಾಂಕ್ ಅಗರ್ವಾಲ್ (62ರನ್, 108 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (47 ರನ್, 97 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಲಯ ಕಂಡುಕೊಂಡಿತು. ಇದರ ನಡುವೆಯೂ ಅಜಾಜ್ ಪಟೇಲ್ (106ಕ್ಕೆ 4) ಹಾಗೂ ರಚಿನ್ ರವೀಂದ್ರ (56ಕ್ಕೆ 3) ಮಾರಕ ದಾಳಿಯಿಂದ ಗಮನಸೆಳೆದರು. ಬಳಿಕ ಉತ್ತಮ ಟಾರ್ಗೆಟ್ ಪೇರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ 7 ವಿಕೆಟ್‌ಗೆ 276 ರನ್‌ಗಳಿಸಿ ಎರಡನೇ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತ್ತು.

    ಭಾರತ: 325 ಮತ್ತು 7 ವಿಕೆಟ್‌ಗೆ 276 ಡಿಕ್ಲೇರ್ (ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಭಮಾನ್ ಗಿಲ್ 47, ಕೊಹ್ಲಿ 36, ಅಕ್ಷರ್ ಪಟೇಲ್41*, ಅಜಾಜ್ ಪಟೇಲ್ 106ಕ್ಕೆ 4, ರಚಿನ್ ರವೀಂದ್ರ 56ಕ್ಕೆ 3), ನ್ಯೂಜಿಲೆಂಡ್ : 62 ಮತ್ತು 45 ಓವರ್‌ಗಳಲ್ಲಿ 5 ವಿಟೆಟ್‌ಗೆ 140 (ಡೆರಿಲ್ ಮಿಚೆಲ್ 60, ಹೆನ್ರಿ ನಿಕೋಲಸ್ 36, ಆರ್.ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts