More

    ದ್ರಾವಿಡ್-ರೋಹಿತ್ ಜೋಡಿ ಶುಭಾರಂಭ; ಭಾರತಕ್ಕೆ ನ್ಯೂಜಿಲೆಂಡ್ ಎದುರು 5 ವಿಕೆಟ್ ಜಯ

    ಜೈಪುರ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಕಂಡಿತು. ಈ ಮೂಲಕ ದಿಗ್ಗಜ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಅವರ ನೂತನ ಕೋಚ್-ಕ್ಯಾಪ್ಟನ್ ಜೋಡಿಯೂ ಮೊದಲ ಪಂದ್ಯದಲ್ಲೇ ಗೆಲುವಿನ ಮೋಡಿ ಮಾಡಿತು. ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನ ನಿರ್ಣಾಯಕ ಹಣಾಹಣಿಯಲ್ಲಿ ಕಿವೀಸ್ ವಿರುದ್ಧ ಅನುಭವಿಸಿದ್ದ ಸೋಲಿಗೂ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿತು.

    ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಆಘಾತದ ನಡುವೆಯೂ ಬಳಿಕ ಪುಟಿದೆದ್ದ ನ್ಯೂಜಿಲೆಂಡ್, ಆರಂಭಿಕ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ (70ರನ್, 42 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಮಾರ್ಕ್ ಚಾಪ್‌ಮನ್ (63ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ನಿರ್ವಹಣೆಯಿಂದ 6 ವಿಕೆಟ್‌ಗೆ 164 ರನ್ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ (48 ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್) ನಾಯಕನಾಟ ಹಾಗೂ ಸೂರ್ಯಕುಮಾರ್ ಯಾದವ್ (62ರನ್, 40 ಎಸೆತ, 6 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್‌ಗಳಿಸಿ ಜಯದ ನಗೆ ಬೀರಿತು.

    ನ್ಯೂಜಿಲೆಂಡ್: 6 ವಿಕೆಟ್‌ಗೆ 164 (ಮಾರ್ಟಿನ್ ಗುಪ್ಟಿಲ್ 70, ಮಾರ್ಕ್ ಚಾಪ್‌ಮನ್ 63, ಟಿಮ್ ಸೀರ್ಟ್ 12, ಭುವನೇಶ್ವರ್ ಕುಮಾರ್ 24ಕ್ಕೆ 2, ಆರ್.ಅಶ್ವಿನ್ 23ಕ್ಕೆ 2, ದೀಪಕ್ ಚಹರ್ 42ಕ್ಕೆ 1, ಮೊಹಮದ್ ಸಿರಾಜ್ 39ಕ್ಕೆ 1), ಭಾರತ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166 (ರೋಹಿತ್ ಶರ್ಮ 48, ಸೂರ್ಯಕುಮಾರ್ ಯಾದವ್ 62, ಕೆಎಲ್ ರಾಹುಲ್ 15, ರಿಷಭ್ ಪಂತ್ 17*, ಟ್ರೆಂಟ್ ಬೌಲ್ಟ್ 31ಕ್ಕೆ 2, ಟಿಮ್ ಸೌಥಿ 40ಕ್ಕೆ 1, ಮಿಚೆಲ್ ಸ್ಯಾಂಟ್ನರ್ 19ಕ್ಕೆ 1, ಡೆರಿಲ್ ಮಿಚೆಲ್ 11ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts