More

    ಭಾರತದ ಗೆಲುವಿಗೆ 1 ವಿಕೆಟ್ ಅಡ್ಡಿ; ಕಾನ್ಪುರದಲ್ಲಿ ರೋಚಕ ಡ್ರಾ ಸಾಧಿಸಿದ ಕಿವೀಸ್

    ಕಾನ್ಪುರ: ಆತಿಥೇಯ ಭಾರತ ತಂಡ ಅಂತಿಮ ಕ್ಷಣದವರೆಗೆ ಗೆಲುವಿಗಾಗಿ ಪ್ರಬಲ ಪೈಪೋಟಿ ತೋರಿದರೂ ಪ್ರವಾಸಿ ನ್ಯೂಜಿಲೆಂಡ್ ಬಾಲಂಗೋಚಿ ಬ್ಯಾಟರ್‌ಗಳ ದಿಟ್ಟ ಹೋರಾಟದ ಫಲವಾಗಿ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತು. ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ (40ಕ್ಕೆ 4) ಹಾಗೂ ಆರ್.ಅಶ್ವಿನ್ (35ಕ್ಕೆ 3) ಅಲ್ಪಮಟ್ಟಿಗೆ ಯಶಸ್ವಿಯಾದರೂ ಟೀಮ್ ಇಂಡಿಯಾಗೆ ಗೆಲುವು ತಂದುಕೊಡಲು ಶಕ್ತರಾಗಲಿಲ್ಲ. ಭಾರತ ಮೂಲದವರಾದ ಕೆಳಕ್ರಮಾಂಕದ ಬ್ಯಾಟರ್‌ಗಳಾದ ರಚಿನ್ ರವೀಂದ್ರ (18*ರನ್, 91 ಎಸೆತ, 2 ಬೌಂಡರಿ) ಹಾಗೂ ಅಜಾಜ್ ಪಟೇಲ್ (2* ರನ್, 23 ಎಸೆತ) ದಿನದಾಟದ ಕಡೇ ಹಂತದಲ್ಲಿ ಭಾರತದ ಗೆಲುವಿಗೆ ತಡೆಗೋಡೆಯಾದರು. ಇದರಿಂದ ಭಾರತ 2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಪೂರ್ಣ 12 ಅಂಕ ಗಳಿಸುವುದರಿಂದಲೂ ವಂಚಿತವಾಗಿ, ಕಿವೀಸ್ ಜತೆಗೆ ತಲಾ 4 ಅಂಕ ಹಂಚಿಕೊಂಡಿತು.

    ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 284 ರನ್ ಸವಾಲಿಗೆ ಪ್ರತಿಯಾಗಿ 1 ವಿಕೆಟ್‌ಗೆ 4 ರನ್‌ನಿಂದ ಅಂತಿಮ ದಿನದಾಟ ಆರಂಭಿಸಿದ ಪ್ರವಾಸಿ ತಂಡ, ಆರಂಭಿಕ ಟಾಮ್ ಲಾಥಮ್ (52 ರನ್, 146 ಎಸೆತ, 3 ಬೌಂಡರಿ) ಸೇರಿದಂತೆ ಪ್ರಮುಖ ಬ್ಯಾಟರ್‌ಗಳ ಮಂದಗತಿ ಬ್ಯಾಟಿಂಗ್ ಫಲವಾಗಿ ದಿಟ್ಟ ಪ್ರತಿರೋಧ ಒಡ್ಡಿತು. ಅಂತಿಮವಾಗಿ 9 ವಿಕೆಟ್‌ಗೆ 165 ರನ್‌ಗಳಿಸಿ ಡ್ರಾ ಸಾಧಿಸಿತು. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 345 ರನ್ ಪೇರಿಸಿದ್ದರೆ, ನ್ಯೂಜಿಲೆಂಡ್ 296 ರನ್‌ಗಳಿಗೆ ಸರ್ವಪತನ ಕಂಡು 49 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಭಾರತ ಎರಡನೇ ಸರದಿಯಲ್ಲಿ 7 ವಿಕೆಟ್‌ಗೆ 234 ರನ್‌ಗಳಿಸಿ ಡಿಕ್ಲೇರ್ ೋಷಿಸಿತ್ತು.

    ಭಾರತ: 345 ಮತ್ತು 7 ವಿಕೆಟ್‌ಗೆ 234 ಡಿಕ್ಲೇರ್, ನ್ಯೂಜಿಲೆಂಡ್: 296 ಮತ್ತು 9 ವಿಕೆಟ್‌ಗೆ 165 (ಟಾಮ್ ಲಾಥಮ್ 52, ವಿಲಿಯಮ್ ಸಮರ್‌ವಿಲ್ 36, ಕೇನ್ ವಿಲಿಯಮ್ಸನ್ 24, ರಾಸ್ ಟೇಲರ್ 2, ರಚಿನ್ ರವೀಂದ್ರ 18*, ಆರ್.ಅಶ್ವಿನ್ 35ಕ್ಕೆ 3, ಅಕ್ಷರ್ ಪಟೇಲ್ 23ಕ್ಕೆ 1, ಉಮೇಶ್ ಯಾದವ್ 34ಕ್ಕೆ 1, ರವೀಂದ್ರ ಜಡೇಜಾ 40ಕ್ಕೆ 4). ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts