More

    ರೋಹಿತ್ ಶರ್ಮ ಶತಕದಾಟ, ಗೌರವಯುತ ಮೊತ್ತ ಕಲೆಹಾಕಿದ ಭಾರತ

    ಚೆನ್ನೈ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ (161 ರನ್, 231 ಎಸೆತ, 18ರನ್, 2 ಸಿಕ್ಸರ್) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (67ರನ್, 149 ಎಸೆತ, 9 ಬೌಂಡರಿ) ಜೋಡಿಯ ಸಮಯೋಚಿತ ಬ್ಯಾಟಿಂಗ್ ಲವಾಗಿ ಆತಿಥೇಯ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲ ದಿನದಾಟದಲ್ಲಿ ಗೌರವಯುತ ಮೊತ್ತ ಕಲೆಹಾಕಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 300 ರನ್ ಪೇರಿಸಿದೆ. 4 ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಭಾರತ ತಂಡ ಮೊದಲ ದಿನದಾಟದಲ್ಲೇ ಉತ್ತಮ ನಿರ್ವಹಣೆ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಯತ್ನಿಸಿತು.

    * ಆರಂಭಿಕ ಆಘಾತ
    ಸರಣಿಯಲ್ಲಿ ಸಮಬಲ ಸಾಧಿಸುವ ಛಲದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ (0) ಒಲಿ ಸ್ಟೋನ್ ಎಸೆತವನ್ನು ಎದುರಿಸಲು ವಿಲವಾಗಿ ಎಲ್‌ಬಿ ಬಲೆಗೆ ಬಿದ್ದರು. ರನ್ ಖಾತೆ ತೆರೆಯುವ ಮುನ್ನವೇ ಭಾರತ ಆಘಾತ ಎದುರಿಸಿತು. ಬಳಿಕ ಜತೆಯಾದ ರೋಹಿತ್ ಹಾಗೂ ಅನುಭವಿ ಚೇತೇಶ್ವರ ಪೂಜಾರ (21) ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಯಿತು. ಒಂದೆಡೆ, ಪೂಜಾರ ಮಂದಗತಿ ಬ್ಯಾಟಿಂಗ್‌ಗೆ ಮುಂದಾದರೆ ರೋಹಿತ್ ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಬೀಸಿದರು. ವೈಯಕ್ತಿಕ 41 ರನ್‌ಗಳಿಸಿದ್ದ ರೋಹಿತ್ ಶರ್ಮ ನೀಡಿದ ಕ್ಯಾಚ್‌ಅನ್ನು ಬೆನ್‌ಸ್ಟೋಕ್ಸ್ ಕೈಚೆಲ್ಲಿದರು. 2ನೇ ವಿಕೆಟ್‌ಗೆ 85 ಪೇರಿಸಿದ್ದ ವೇಳೆ ಪೂಜಾರ ಲೀಚ್‌ಗೆ ವಿಕೆಟ್ ನೀಡಿದರೆ, ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಖಾತೆ ತೆರೆಯುವ ಮುನ್ನವೇ ಮೊಯಿನ್ ಅಲಿ ಎಸೆತದಲ್ಲಿ ಬೌಲ್ಡ್ ಆದರು. ಇದರಿಂದ ಭಾರತ ತಂಡ 86 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

    * ರೋಹಿತ್-ರಹಾನೆ ಆಸರೆ
    ದಿಢೀರ್ ಕುಸಿತದಿಂದ ಕಂಗೆಟ್ಟಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಜೋಡಿ ಆಸರೆಯಾಯಿತು. ಭೋಜನ ವಿರಾಮದವರೆಗೂ ಬ್ಯಾಟಿಂಗ್ ಕಾಯ್ದುಕೊಂಡಿತು. ಬಳಿಕ ಎರಡನೇ ಅವಧಿಯಲ್ಲೂ ಕ್ರೀಸ್‌ನಲ್ಲಿ ನಿಂತ ಈ ಜೋಡಿ ತಂಡಕ್ಕೆ ಚೇತರಿಕೆ ನೀಡಿತು. ಈ ಅವಧಿಯಲ್ಲಿ ಶತಕ ಪೂರೈಸಿಕೊಂಡ ರೋಹಿತ್ ಶರ್ಮ, ಕೆಲ ಆಕರ್ಷಕ ಹೊಡೆತಗಳ ಮೂಲಕ ಗಮನಸೆಳೆದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಿಲರಾಗಿದ್ದ ಅಜಿಂಕ್ಯ ರಹಾನೆ ಅರ್ಧಶತಕ ಪೂರೈಸಿದರು. ರೋಹಿತ್-ರಹಾನೆ ಜೋಡಿ 4ನೇ ವಿಕೆಟ್‌ಗೆ 162 ರನ್ ಕಲೆಹಾಕಿ ಬೇರ್ಪಟ್ಟಿತು. ಲೀಚ್ ಎಸೆತದಲ್ಲಿ ದುಡುಕಿದಂತೆ ಕಂಡ ರೋಹಿತ್ ಶರ್ಮ, ದೊಡ್ಡ ಹೊಡೆತ ಹೊಡೆಯಲು ಮುಂದಾಗಿ ಡೀಪ್‌ನಲ್ಲಿದ್ದ ಮೊಯಿನ್ ಅಲಿಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ ಕೂಡ ಮೊಯಿನ್ ಅಲಿ ಎಸೆತದಲ್ಲಿ ಬೌಲ್ಡ್ ಆದರು. ಕೇವಲ 1 ರನ್ ಅಂತರದಲ್ಲಿ ಈ ಜೋಡಿ ನಿರ್ಗಮಿಸಿತು. ರಿಷಭ್ ಪಂತ್ (33*) ಹಾಗೂ ಪದಾರ್ಪಣೆ ಪಂದ್ಯವಾಡುತ್ತಿರುವ ಅಕ್ಷರ್ ಪಟೇಲ್ (5) ಕ್ರೀಸ್‌ನಲ್ಲಿದ್ದಾರೆ.

    ಭಾರತ: 6 ವಿಕೆಟ್‌ಗೆ 300 (ರೋಹಿತ್ ಶರ್ಮ 161, ಚೇತೇಶ್ವರ ಪೂಜಾರ 21, ಅಜಿಂಕ್ಯ ರಹಾನೆ 67, ರಿಷಭ್ ಪಂತ್ 33*, ಜಾಕ್ ಲೀಚ್ 78ಕ್ಕೆ 2, ಮೊಯಿನ್ ಅಲಿ 112ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts