More

    ಭಾರತ-ದಕ್ಷಿಣ ಆಫ್ರಿಕಾ ಎ 2ನೇ ಟೆಸ್ಟ್ ಡ್ರಾ: ತಿಲಕ್, ಅಕ್ಷರ ಪಟೇಲ್ ಅರ್ಧಶತಕ

    ಬೆನೊನಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ ಮಳೆಬಾಧಿತ 2ನೇ ಚತುರ್ದಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿದೆ. ಧ್ರುವ ಜುರೆಲ್ (69 ರನ್, 166 ಎಸೆತ, 8 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (50* ರನ್, 61 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನೆರವನಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತು.

    ವಿಲ್‌ಮೋರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ವೇಗಿ ಆವೇಶ್ ಖಾನ್ (54ಕ್ಕೆ 5) ದಾಳಿಗೆ ತತ್ತರಿಸಿ 102.3 ಓವರ್‌ಗಳಲ್ಲಿ 263 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿದ್ದರೆ, ಇದಕ್ಕೆ ಉತ್ತರವಾಗಿ ಶುಕ್ರವಾರ 4 ವಿಕೆಟ್‌ಗೆ 159 ರನ್‌ಗಳಿಂದ 4ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಭಾರತ, 95.4 ಓವರ್‌ಗಳಲ್ಲಿ 6 ವಿಕೆಟ್‌ಗೆ 327 ರನ್‌ಗಳಿಸಿದಾಗ ಉಭಯ ತಂಡಗಳ ನಾಯಕರು ಡ್ರಾಗೆ ಸಮ್ಮತಿಸಿದರು. ಪಂದ್ಯದ ಮೊದಲ ದಿನ ಮಳೆಯಿಂದಾಗಿ ಆಟ ನಡೆದಿರಲಿಲ್ಲ.

    ದ.ಆಫ್ರಿಕಾ ‘ಎ’: 102.3 ಓವರ್‌ಗಳಲ್ಲಿ 263 (ಬ್ರಿಟ್ಜ್ಕಿ 36, ಹಂಜಾ 20, ಸಿನೆತೆಂಬಾ 34, ವ್ಯಾನ್ ಡೈಕ್ 41*, ಮೊರಿಕಿ 42, ಆವೇಶ್ ಖಾನ್ 54ಕ್ಕೆ 5). ಭಾರತ ‘ಎ’: 6 ವಿಕೆಟ್‌ಗೆ 327 (ಸುದರ್ಶನ್ 30, ಪಾಟೀದಾರ್ 33, ತಿಲಕ್ 50, ಧ್ರುವ್ 69, ಅಕ್ಷರ್ 50*, ಾರ್ಚೂಯಿನ್ 78ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts