More

    ತಾಲೂಕು ಆಡಳಿತ ಸೌಧ ಎದುರು ಧರಣಿ

    ಇಂಡಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಾಲೂಕು ಆಡಳಿತಸೌಧ ಎದುರು ಸಮಾಜ ಬಾಂಧವರು ಗುರುವಾರ ಧರಣಿ ನಡೆಸಿದರು.

    ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿ. ಎಚ್. ಬಿರಾದಾರ ಮಾತನಾಡಿ, 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಪಂಚಮಸಾಲಿ ಜನಾಂಗವನ್ನು 3ಬಿ ವರ್ಗಕ್ಕೆ ಸೇರಿಸಿದ್ದರು.

    ಪಂಚಮಸಾಲಿ ಜನಾಂಗದಲ್ಲೂ ಬಡವರಿದ್ದು, ಅವರು ಶೈಕ್ಷಣಿಕವಾಗಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು.

    ಸೋಮಶೇಖರ ದೇವರ, ಮಂಜುನಾಥ ಕಾಮಗೊಂಡ, ಪ್ರಭು ಹ್ಯಾಳದ, ಅನೀಲಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಉಮೇಶ ಬಳಬಟ್ಟಿ, ವಿಜಯ ರಾಠೋಡ, ಗಣಪತಿ ಬಾಣಿಕೋಲ, ಶ್ರೀಶೈಲ ಕುಂಬಾರ, ಪಿ.ಎಸ್. ಹೊಸಮನಿ, ಶರಣಗೌಡ ಬಂಡಿ ಮಾತನಾಡಿ, ಇಂದು ಸಾಂಕೇತಿಕ ಒಂದು ದಿನ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಶ್ರೀಮಂತ ಬಾರಿಕಾಯಿ, ಬಸವರಾಜ ಪಾಟೀಲ, ಶಿವಾನಂದ ಚಾಳಿಕಾರ, ಡಿ.ಎ. ಮುಜಗೊಂಡ, ವಿನೋದ ಮುಜಗೊಂಡ, ಭೀಮರಾಯ ಮದರಖಂಡಿ, ದೇವೇಂದ್ರ ಬರಡೋಲ, ನಾಗರಾಜ ಕಣದಾಳ, ಮಲ್ಲು ಗುಂಜೆಟ್ಟಿ, ರಾಜಕುಮಾರ ಗುಂಜಟ್ಟಿ, ದತ್ತು ಬಂಡೆನವರ, ತಾರು ಚವಾಣ್, ದಶರಥ ಕೊಟೆನ್ನವರ, ಅಶೋಕ ಕರೂರ, ಅಂಬಣ್ಣ ಕವಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts