More

    ಸಹಪಠ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ

    ಇಂಡಿ: ಸಮಾಜದ ಬಗ್ಗೆ ಪ್ರೀತಿ, ನಾಯಕತ್ವ, ಆತ್ಮವಿಶ್ವಾಸ, ಸಹಕಾರ, ಶಾಂತಿ ಮುಂತಾದ ಗುಣಗಳು ಬೆಳೆಯಬೇಕಾದರೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವುದು ಪ್ರಮುಖ ಪಾತ್ರವಹಿಸುತ್ತದೆ ಎಂದು ಬೆಂಗಳೂರಿನ ಡಿಐಜಿಪಿ ಎಂ.ವಿ.ರಾಮಕೃಷ್ಣಪ್ರಸಾದ ಹೇಳಿದರು.ಪಟ್ಟಣದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 10ನೇ ವರ್ಷದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

    ಮಕ್ಕಳು ತಂತ್ರಜ್ಞಾನ ಯುಗದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು.
    ಕಮಾಂಡಂಟ್ 6ನೇ ಬಟಾಲಿಯನ್‌ನ ಕಲಬುರಗಿಯ ಬಸವರಾಜ ಝಿಲ್ಲೆ ಮಾತನಾಡಿ, ಸಂಸ್ಥೆಯ ಮೂಲ ಸೌಕರ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ವರ್ಷದಿಂದ ಈ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡಿಟ್ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದರು.

    ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಮಾಂಡಂಟ್ ಇಂಡಿಯಾ ರಿಜರ್ವ್ ಬಟಾಲಿಯನ್‌ನ ಎನ್.ಬಿ.ಮೆಳ್ಳಗಟ್ಟಿ, ಸಂಸ್ಥೆಯ ಕಾರ್ಯದರ್ಶಿ ಮಹೇಶ ಶಹಾ, ಆಡಳಿತಾಧಿಕಾರಿ ಕಲ್ಪನಾ ಶಹಾ, ಸದಸ್ಯರಾದ ನೀರಜಾಕ್ಷಿ ಕೆ., ಸುನೀಲ ಕುಲಕರ್ಣಿ, ನಿರಂಜನ ಶಹಾ, ಮಾಣಿಕ ಶಹಾ ಹಾಗೂ ಪಪೂ ವಿಭಾಗದ ಪ್ರಾಚಾರ್ಯೆ ಪರವಿನ್ ಜಮಾದಾರ, ಪ್ರಾಚಾರ್ಯ ಪ್ರಕಾಶ ಪಾಟೀಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಮೂಹಿಕ ಪಥಸಂಚಲನ ಗಮನ ಸೆಳೆಯಿತು. ಸುಪ್ರಿಯಾ ಕುಲಕರ್ಣಿ, ಸಿದ್ಧಿಕಾ ನಾಗಠಾಣ, ಸಾವಿತ್ರಿ ಕರ್ನಾಕ್ ನಿರೂಪಿಸಿದರು. ಸೌಜನ್ಯ ಬಿದನೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts