More

    ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಿ – ಎಂಎಲ್‌ಸಿ ಹಣಮಂತ ನಿರಾಣಿ ಮೂಲಕ ಸರ್ಕಾರಕ್ಕೆ ಮನವಿ

    ಬೀಳಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವಂತೆ ಹಾಗೂ ಸದನದಲ್ಲಿ ವಿಷಯ ಪ್ರಸ್ತಾಪಿಸುವಂತೆ ತಾಲೂಕು ವಾಲ್ಮೀಕಿ ಸಮಾಜದಿಂದ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ಬೀಳಗಿಯಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.

    ವಾಲ್ಮೀಕಿ ಸಮಾಜ ಮುಖಂಡರು ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಹಾಗೂ ಸಾರ್ವಜನಿಕ ಉದ್ಯೋಗಗಳ ನೇಮಕಾತಿಯಲ್ಲಿ ಈಗಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ ಅವರ ಆಯೋಗದ ವರದಿ ಜಾರಿಗೆ ತರಬೇಕು. ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಪ್ರಸನ್ನಾನಂದ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಸ್ವಾಮಿಗಳು ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ 208 ದಿನ ತಲುಪಿದ್ದು ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

    ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲದ ಅಽವೇಶನದಲ್ಲಿ ನಮ್ಮ ನ್ಯಾಯೋಚಿತ ಬೇಡಿಕೆ ಈಡೇರುವಂತೆ ಸದನದ ಒಳಗೆ ಬೀಳಗಿಯ ಶಾಸಕ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ನಿರಾಣಿ ಅವರು ಕೂಡ ನಮ್ಮ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

    ವೀರ ಸಿಂಧೂರ ಲಕ್ಷ್ಮಣ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಸಮಾಜ ತಾಲೂಕು ಅಧ್ಯಕ್ಷ ಸುರೇಂದ್ರ ನಾಯಕ, ನಿವೃತ್ತ ಶಿಕ್ಷಕರಾದ ಟಿ.ವೈ.ಜಾನಮಟ್ಟಿ, ಬಿ.ಎಸ್.ಗೋನ್ಯಾಳ, ತೆಗ್ಗಿ ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠಲ ಬಿರಾದಾರ, ಗ್ರಾಪಂ ಸದಸ್ಯ ವಿಠ್ಠಲ ಕಳಸನ್ನವರ, ತಾಪಂ ಮಾಜಿ ಸದಸ್ಯ ಗೋಪಾಲ ರಜಪೂತ, ಸಿದ್ದಪ್ಪ ಕೂಗಟಿ, ಎಫ್.ಆರ್.ಬಿಸನಾಳ, ಡಿ.ಬಿ.ವಾಲೀಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts