More

    ಪಶು ಸಂಗೋಪನೆಯಿಂದ ರೈತರ ಆದಾಯ ಹೆಚ್ಚಳ


    ಗೋಣಿಕೊಪ್ಪ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಆಧುನಿಕ ಪಶುಪಾಲನಾ ಚಟುವಟಿಕೆಗಳ ಬಗ್ಗೆ ರೈತರಿಗೆ ತರಬೇತಿ ನೀಡಲಾಯಿತು.

    ಪೊನ್ನಂಪೇಟೆ ಗ್ರಾಪಂ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು. ಜಿಲ್ಲಾ ರೈತ ಸಂಘ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಪಶು ಸಂಗೋಪನೆಯಿಂದ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಇದರ ಪ್ರಯೋಜನ ರೈತರು ಪಡೆದುಕೊಳ್ಳಬೇಕು ಎಂದರು.

    ವಿರಾಜಪೇಟೆ ಕೃಷಿಕ ಸಮಾಜದ ಸದಸ್ಯ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಇತ್ತೀಚೆಗೆ ಹಸು ಸಾಕಣೆ ಕಡಿಮೆಯಾಗುತ್ತಿದ್ದು, ರೈತರು ಆಧುನಿಕ ಪದ್ಧತಿ ಅಳವಡಿಸಿ ಹಸು ಸಾಕಣೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕಿದೆ. ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಅವಶ್ಯ ಎಂದರು.

    ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಸಿ. ಜಿ. ಕುಶಾಲಪ್ಪ ಮಾತನಾಡಿ, ಹಸು ಸಾಕಣೆಯಿಂದ ರೈತರಿಗೆ ಹೆಚ್ಚು ಲಾಭವಿದೆ. ಕೊಟ್ಟಿಗೆ ಗೊಬ್ಬರದಿಂದ ಕಾಫಿ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದರು. ಜೇನು ಸಾಕಣೆ ಬಗ್ಗೆ ವಿಜ್ಞಾನಿ ಕೆಂಚಾರೆಡ್ಡಿ ಮಾಹಿತಿ ನೀಡಿದರು. ವಿಜ್ಞಾನಿಗಳಾದ ಡಾ. ಸಿದ್ದರಾಮಣ್ಣ, ಡಾ ಚಂದ್ರಶೇಖರಯ್ಯ ತರಬೇತಿ ನೀಡಿದರು. ಪೊನ್ನಂಪೇಟೆ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಎ.ಎಸ್.ಶಾಂತೇಶ, ಪಶುವೈದ್ಯರಾದ ಡಾ.ಬಿ.ಜಿ.ಗಿರೀಶ, ಡಾ.ಸುರೇಶ್, ಡಾ ಭವಿಷ್ಯಕುಮಾರ್, ಡಾ.ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts