More

    ಸಮಗ್ರ ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿ

    ಬಾಗಲಕೋಟೆ : ಸಮಗ್ರ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಶಿಾರಸು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕವು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿತು.

    ಎಪಿಎಂಸಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

    ವೀರಶೈವ-ಲಿಂಗಾಯತ ಸಮುದಾಯವನ್ನು ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಿದರೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ. ಇದರಿಂದ ಕೇಂದ್ರದಿಂದ ಲಭ್ಯವಾಗುವ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ. ಕೂಡಲೇ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.

    ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಮಾತನಾಡಿ, ರಾಜ್ಯದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ವರದಿಯ ಪ್ರಕಾರ ಈಗಾಗಲೇ ಒಬಿಸಿ ಪಟ್ಟಿಯಲ್ಲಿರುವ ಸಮುದಾಯಗಳಿಗಿಂತಲೂ ವೀರಶೈವ-ಲಿಂಗಾಯತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಸಮುದಾಯಕ್ಕೆ ಒಬಿಸಿ ಮೀಸಲಾತಿ ಒದಗಿಸಲು ಕೇಂದ್ರಕ್ಕೆ ಶಿಾರಸು ಮಾಡಬೇಕು ಎಂದರು.

    ಸಮುದಾಯ 16 ಉಪಪಂಗಡಗಳು ಮಾತ್ರವೇ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿವೆ. ಜನಸಂಖ್ಯಾ ದೃಷ್ಟಿಯಿಂದ ಇವುಗಳು ಸಣ್ಣ ಉಪಪಂಗಡಗಳಾಗಿವೆ. ಇನ್ನುಳಿದ ಉಪಪಂಗಡಗಳನ್ನೂ ಸೇರಿಸಿದರೆ ಸಮುದಾಯಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮಹಾಸಭಾದ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

    ಗುಳೇದಗುಡ್ಡ ಮುರಘಾಮಠದ ಕಾಶೀನಾಥ ಸ್ವಾಮೀಜಿ, ಬಿಲ್‌ಕೆರೂರು ಬಿಲ್ವಾಶ್ರಮ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನ್ನಿಕಟ್ಟಿ ಸಿದ್ದಲಿಂಗೇಶ್ವರಮಠದ ಶಿವಕುಮಾರ ಸ್ವಾಮೀಜಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮೆಡಿಕಲ್ ಕಾಲೇಜ್ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಮುಖಂಡರಾದ ಕುಮಾರಸ್ವಾಮಿ ಹಿರೇಮಠ ಚಿತ್ತರಗಿ, ವೀರಣ್ಣ ಹಲಕುರ್ಕಿ, ಪ್ರಕಾಶ ರೇವಡಿಗಾರ, ಶಶಿಕುಮಾರ ಬೆಂಬಳಗಿ, ಸಂತೋಷ ಜಕಾತಿ, ಚೆನ್ನಯ್ಯ ಹಿರೇಮಠ, ಎಸ್.ಟಿ. ಪಾಟೀಲ, ಬಸವರಾಜ ಮುಕ್ಕುಪ್ಪಿ, ವಿ.ವಿ.ಸಜ್ಜನ, ಎಂ.ಎಸ್. ದೇಸಾಯಿ, ಶರಣಪ್ಪ ಗುಳೇದ, ಸಿದ್ದಣ್ಣ ಹಂಪನಗೌಡರ, ಎಂ.ಎಂ. ಹಂಡಿ, ರುದ್ರಮ್ಮ ಕೋರಿ, ಗೀತಾ ದಾನಶೆಟ್ಟಿ, ಉಮಾ ರೇವಡಿಗಾರ, ಶಿವಾನಂದ ನಾರಾ ಇತರರು ಇದ್ದರು.

    ವೀರಶೈವ ಲಿಂಗಾಯತ ಸಮುದಾಯವು ಬಹುತೇಕ ಕೃಷಿ ಮತ್ತು ಕೃಷಿ ಆಧಾರಿತ ಕಸುಬು ಅವಲಂಬಿಸಿವೆ. ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಕಾರಣ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ, ಕೇಂದ್ರದ ನೇಮಕಾತಿಯಲ್ಲಿ ಅವಕಾಶಗಳಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು.
    ಡಾ. ವೀರಣ್ಣ ಚರಂತಿಮಠ ಶಾಸಕರು, ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts