More

    ಬಲಿಜ ಸಮುದಾಯಕ್ಕೆ ನಿವೇಶನ ನೀಡಲು ಅಗತ್ಯ ಕ್ರಮ

    ಪಿರಿಯಾಪಟ್ಟಣ: ಸಣ್ಣಪುಟ್ಟ ಸಮುದಾಯಗಳ ಜನರು ಒಗ್ಗಟ್ಟಾಗುವುದರಿಂದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ಆದಿಚುಂಚನಗಿರಿ ಸಮು ದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಯೋಗಿ ನಾರೇಯಣ ಬಲಿಜ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ ನಾಡಿದರು. ರಾಜ್ಯ ಸಂಘದ ಪದಾಧಿಕಾರಿಗಳು ಹಲವು ಸಮಸ್ಯೆಗಳನ್ನು ನನ್ನ ಮುಂದಿಟ್ಟಿದ್ದು, ಅದನ್ನು ಸಿಎಂ ಬಳಿ ಚರ್ಚಿಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣದಲ್ಲಿ ನಿವೇಶನ ನೀಡುವಂತೆ ಬಲಿಜ ಸಮುದಾಯ ಮನವಿ ಮಾಡಿದೆ. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನಗಳ ಲಭ್ಯವಿಲ್ಲ. ತಾಲೂಕಿನಲ್ಲಿ ಸೂಕ್ತ ಸ್ಥಳದಲ್ಲಿ ನಿವೇಶನವನ್ನು ಹುಡುಕಿ ಬಲಿಜ ಸಮಾಜಕ್ಕೆ ನೀಡುವುದಾಗಿ ಭರವಸೆ ನೀಡಿದರು. ಬಲಿಜ ಸಮುದಾಯದ ಬಹುತೇಕರು ವ್ಯವ ಸಾಯದಲ್ಲಿ ತೊಡಗಿಸಿಕೊಂಡಿ ದ್ದಾರೆ. ಅಂತಹವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಿಗುವಂತೆ ಮಾಡಲಾಗುವುದು ಎಂದರು.

    ರಾಜ್ಯ ಬಲಿಜ ಸಂಘದ ಅಧ್ಯಕ್ಷ ಟಿ.ವೇಣುಗೋಪಾಲ್ ಮಾತನಾಡಿ, 1994 ರಿಂದ 18 ವರ್ಷ ಬಲಿಜ ಜಾತಿಯನ್ನು 2ಎ ವರ್ಗದಿಂದ 3ಎ ವರ್ಗಕ್ಕೆ ಬದಲಾಯಿಸಲಾಗಿತ್ತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಪಡೆಯಲು ಸಾಧ್ಯವಾಗದೆ ಪರಿತಪಿಸಬೇಕಾಯಿತು. ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ನಂತರ ಶಿಕ್ಷಣದ ಉದ್ದೇಶಕ್ಕಾಗಿ 2ಎ ವರ್ಗಕ್ಕೆ ಸಮಾಜವನ್ನು ಸೇರಿಸಿದರು. ಮುಂದಿನ ದಿನಗಳಲ್ಲಿ ಇದೇ ವರ್ಗದಲ್ಲಿ ಮುಂದುವರಿಸುವಂತೆ ಮುಖ್ಯಮಂತ್ರಿ ಗಳಿಗೆ ಸಚಿವರು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದಲ್ಲಿ ಅಂತಹವರ ಶಿಕ್ಷಣಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧ ಎಂದು ಭರವಸೆ ನೀಡಿದರು.

    ಮಾಜಿ ಎಂಎಲ್ಸಿ ಟಿ.ಕೆ.ಚಿನ್ನಸ್ವಾಮಿ, ಸಮಾಜ ಸೇವಕಿ ಮಮತಾ ದೇವರಾಜ್ ಮಾತನಾಡಿದರು. ಬಲಿಜ ಸಮುದಾಯದ ಪ್ರತಿಭಾನ್ವಿತರು ಮತ್ತು ಹಿರಿಯರಾದ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಬಲಿಜ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ, ದೇವರಾಜ್, ಗೀತಾ ನಾಯ್ಡು, ಸುಬ್ರಹ್ಮಣ್ಯ, ನಾರಾ ಯಣ, ಗೀತಾಸುಬ್ರಹ್ಮಣ್ಯ, ರಘು, ಮುನಿಕೃಷ್ಣ, ಬಾಲಾಜಿ, ಡಾ ಎಸ್.ದಿವಾಕರ್, ದಯಾನಂದ್, ಬಾಬು, ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts