More

    ಎಸ್‌ಸಿಎಸ್ ಕೋಚಿಂಗ್ ಅಕಾಡೆಮಿ ಉದ್ಘಾಟನೆ

    ಮಂಗಳೂರು: ಅಶೋಕನಗರದಲ್ಲಿ ಎಸ್‌ಸಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಸಿಎಸ್ ಕೋಚಿಂಗ್ ಅಕಾಡೆಮಿ ಇತ್ತೀಚೆಗೆ ಉದ್ಘಾಟಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಅಭಿನಯ್ ಸೊರಕೆ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೋಚಿಂಗ್‌ನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

    ಡಾ.ರಾಜಾರಾಮ್ ಮಾತನಾಡಿ ಕೋಚಿಂಗ್ ಸ್ವರೂಪ ಅಗತ್ಯ ಹಾಗೂ ಅನಿವಾರ್ಯತೆಯ ಬಗ್ಗೆ ಸ್ಪಷ್ಟ ನಿಲುವು ನೀಡಿದರು. ಕಾರ್ಯಕ್ರಮದಲ್ಲಿ ರೇಖಾ ಬಿ.ಬೈಕಾಡಿ, ಡಾ.ವಿಜಯ ಆಳ್ವ, ಯತಿನ್‌ರಾಜ್, ನಿತ್ಯಾನಂದ ನಾಯ್ಕ, ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ದಾಳಿಂಬ ಶ್ರೀಪತಿ ರಾವ್ ಸ್ವಾಗತಿಸಿದರು. ಉಪನ್ಯಾಸಕಿ ಪೂಜಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts