More

    ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

    ತುಮಕೂರು: ‘ನಾರಾಯಣ ನೇತ್ರಾಲಯ ವತಿಯಿಂದ ನಗರದಲ್ಲಿ ನಿರ್ಮಾಣ ಆಗಿರುವ ‘ನಾರಾಯಣ ದೇವಾಲಯ- ಉಚಿತ ನೇತ್ರ ಚಿಕಿತ್ಸಾ ಕೇಂದ್ರ’ವನ್ನು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು(ಬುಧವಾರ) ಉದ್ಘಾಟಿಸಿದರು.

    ತುಮಕೂರಲ್ಲಿ 'ನಾರಾಯಣ ದೇವಾಲಯ' ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

    ಸಿಎಂ ಮಾತನಾಡಿ, ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ರಂಗದ ಎಲ್ಲರೂ ಸೇರಿ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು. ಬದುಕಿನಲ್ಲಿ ಯಶಸ್ಸು ಪಡೆದವರೆಲ್ಲಾ ಸಮಾಜಕ್ಕೆ ಹಿಂತಿರುಗಿಸಿ ನೀಡಬೇಕೆಂಬ ಸಣ್ಣ ಗುಣಧರ್ಮವಿದ್ದರೆ, ಈ ಜಗತ್ತು ಇನ್ನಷ್ಟು ಉತ್ತಮವಾಗುತ್ತದೆ. ಎಲ್ಲರಿಗೂ ಶ್ರೀಮಂತಿಕೆ ಇರುವುದಿಲ್ಲ. ಅಂತಿಮವಾಗಿ ನಮ್ಮ ದುಡಿಮೆ, ಶ್ರೀಮಂತಿಕೆ ಸೃಷ್ಟಿಗೆ ಸೇರಿದ್ದು. ನಾವು ಸೃಷ್ಟಿಯ ಭಾಗವಷ್ಟೇ. ಭುಜಂಗಶೆಟ್ಟಿ ಅವರಿಗೆ ನಾನು ಎನ್ನುವ ಭಾವವಿಲ್ಲ. ನಾರಾಯಣ‌ ನೇತ್ರಾಲಯ ಒಂದು ಹೆಜ್ಜೆ ಮುಂದೆ ಹೋಗಿ ಉಚಿತ‌ ಚಿಕಿತ್ಸೆ ನೀಡುತ್ತಿದೆ. ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ. ಡಾ. ಭುಜಂಗ ಶೆಟ್ಟಿಯವರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ತುಮಕೂರಲ್ಲಿ 'ನಾರಾಯಣ ದೇವಾಲಯ' ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

    ಸಂಪೂರ್ಣ ಉಚಿತ ಆಸ್ಪತ್ರೆ: ಇದು ಸಂಪೂರ್ಣ ಉಚಿತ ಆಸ್ಪತ್ರೆ. ಇಲ್ಲಿ ಕ್ಯಾಶ್ ಕೌಂಟರ್ ಇರುವುದಿಲ್ಲ ಎಂದು ತಿಳಿದಾಗ ಇದು ಹೇಗೆ ಸಾಧ್ಯ? ಎಂದು ಆಶ್ಚರ್ಯವಾಯಿತು. ಶೇ.100 ಅವರ ದುಡಿಮೆಯಿಂದ ಪುಣ್ಯದ ಕಾರ್ಯವಾಗಿ ಈ ಕೆಲಸ ಮಾಡುತ್ತಿರುವುದು ತಿಳಿದು ಹೃದಯ ತುಂಬಿ ಬಂತು. ಈ ರೀತಿಯ ಆಸ್ಪತ್ರೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಆಧುನಿಕ ವ್ಯವಸ್ಥೆಯನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ‌. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕೆನ್ನುವ ತೀರ್ಮಾನ ಮಾದರಿಯಾಗಿದೆ. ಎಲ್ಲ ಯಶಸ್ವಿ ವೈದ್ಯರೂ ಇದನ್ನು ಅನುಸರಿಸಬೇಕು ಎಂದರು.
    ಡಾ.ಭುಜಂಗ ಶೆಟ್ಟಿ, ಸಚಿವ ಬಿ.ಸಿ.ನಾಗೇಶ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

    ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ

    ಜೂಜಾಟಕ್ಕೆ ತನ್ನನ್ನೇ ಪಣಕ್ಕಿಟ್ಟು ಸೋತು ಪರ ಪುರುಷನ ಪಾಲಾದ 2 ಮಕ್ಕಳ ತಾಯಿ! ಗಂಡನ ಗೋಳು ನೋಡಲಾಗ್ತಿಲ್ಲ…

    ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಚೀಲದಲ್ಲಿ ಪತ್ನಿಯ ಶವ ತುಂಬಿಕೊಂಡು ಸೈಕಲ್​ನಲ್ಲಿ ಸಾಗಿಸುತ್ತಿದ್ದ ಪತಿ..! ಯಳಂದೂರಲ್ಲಿ ಹೃದಯವಿದ್ರಾವಕ ಘಟನೆ

    ಕೋಲಾರದಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟ ತಾಯಿ! ರಾತ್ರಿಯಿಡೀ ನರಳಾಡಿ ಪ್ರಾಣಬಿಟ್ಟ ಅಕ್ಕ, ತಂಗಿ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts