More

    ರಾಹುಲ್, ಖರ್ಗೆಯಿಂದ ಕಾಂಗ್ರೆಸ್ ಖತಂ

    ಹುಮನಾಬಾದ್: ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಖತಂ ಮಾಡಲಿದ್ದಾರೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ವ್ಯಂಗ್ಯವಾಡಿದರು.

    ಥೇರ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀದರ್-ಕಲಬುರಗಿ ಲೋಕಸಭೆ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸಬೇಕು ಎಂಬುದು ಮಹಾತ್ಮ ಗಾಂಧೀಜಿ ಆಶಯವಾಗಿತ್ತು. ಆದರೆ ನೆಹರು ಅವರು ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್‌ನ್ನು ರಾಜಕೀಯ ಪಕ್ಷವಾಗಿ ಬಳಿಸಿಕೊಂಡರು ಎಂದು ದೂರಿದರು.

    ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್‌ನವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಬಂದಿಲ್ಲ. ವಿನಾಶಕಾಲೇ ವಿಪರೀತ ಬುದ್ಧಿ ಎಂಬ ಗಾದೆ ಮಾತಿನಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಹಲವಾರು ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಿಸಿದೆ. ದೇಶದ ೨೫ ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ೫೫ ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆ ಲಾಭ ಸಿಕ್ಕಿದೆ ಎಂದರು.

    ಕರ್ನಾಟಕದಲ್ಲಿ ಸುಳ್ಳುಗಳನ್ನು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಇದರ ಬದಲಾ ಮಧ್ಯಪ್ರದೇಶದಲ್ಲಿ ತೆಗೆದುಕೊಳ್ಳಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಬೀದರ್ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದಿರುವುದು ಖುಷಿ ತಂದಿದೆ. ಇದೇ ಜೋಶ್ ಬರುವ ಲೋಕಸಭೆ ಚುನಾವಣೆಯಲ್ಲಿ ಇರಬೇಕು. ಬೀದರ್, ಕಲಬುರಗಿ ಸೇರಿ ರಾಜ್ಯದ ಎಲ್ಲ ೨೮ ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಎಲ್ಲ ಕಾರ್ಯಕರ್ತರು ಇಂದಿನಿAದಲೇ ಸಂಕಲ್ಪ ಮಾಡಬೇಕು. ಪ್ರತಿ ಮನೆಗೆ ಭೇಟಿ ನೀಡಿ ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರುಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಡಾ.ಅವಿನಾಶ ಜಾಧವ್ ಮಾತನಾಡಿದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಕಾರ್ಯದರ್ಶಿ ಲಲಿತಾ ಅನಪುರ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕರಾದ ಸುಭಾಷ ಕಲ್ಲೂರ್, ರಾಜಕುಮಾರ ಪಾಟೀಲ್ ತೆಲ್ಕೂರ, ಗುಂಡಪ್ಪ ಬಿರಾದಾರ, ಅಮರನಾಥ ಪಾಟೀಲ್, ಪ್ರಕಾಶ ಖಂಡ್ರೆ, ಪ್ರಮುಖರಾದ ಚಂದು ಪಾಟೀಲ್, ಶಿವಾನಂದ ಮಂಠಾಳಕರ್, ಬಸವರಾಜ ಆರ್ಯ, ಪ್ರಭಾಕರ್ ನಾಗರಾಳೆ, ಸಂತೋಷ ಪಾಟೀಲ್ ಇತರರಿದ್ದರು.

    ಬಿಜೆಪಿಯಲ್ಲಿ ಸಿಎಂ ಸಹ ಕಾರ್ಯಕರ್ತ: ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಮತ್ತೆ ಆಡಳಿತಕ್ಕೆ ಬರಲಾಯಿತು. ಸಿಎಂ ಸ್ಥಾನ ಬಿಟ್ಟು ದೇಶಾದ್ಯಂತ ಸೇವೆ ಮಾಡಲು ಕಾರ್ಯಕರ್ತನಾಗಿ ಸುತ್ತಾಡುತ್ತಿರುವೆ. ಬಿಜೆಪಿಯಲ್ಲಿ ಸಿಎಂ ಸಹ ಕಾರ್ಯಕರ್ತ. ಲೋಕಸಭೆ ಚುನಾವಣೆಯಲ್ಲಿ ಶೀಘ್ರದಲ್ಲಿ ಘೋಷಣೆಯಾಗಲಿವೆ. ಕಾರ್ಯಕರ್ತರು ಅಲರ್ಟ್ ಆಗಿರಬೇಕು ಎಂದು ಮಾಜಿ ಸಿಎಂ ಶಿವರಾಜಸಿಂಗ್ ಚೌಹಾಣ್ ಹೇಳಿದರು.

    ಅನುಭವ ಮಂಟಪ ಮೂಲಕ ಜಗತ್ತಿಗೆ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಪುಣ್ಯ ಕ್ಷೇತ್ರ ಇದಾಗಿದೆ. ಬಸವಣ್ಣನವರ ನಡೆದಾಡಿದೆ ಪವಿತ್ರ ಜಾಗ ಇದು. ಬಸವ ತತ್ವವಾದ ಸರ್ವರಿಗೂ ಸಮಾನತೆಯ ಮೇಲೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಮೂಲಕ ಭಾರತವನ್ನು ವಿಶ್ವಗುರು ಮಾಡಬೇಕು.
    | ಶಿವರಾಜ್‌ಸಿಂಗ್ ಚೌಹಾಣ್ ಮಧ್ಯಪ್ರದೇಶ ಮಾಜಿ ಸಿಎಂ

    ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ (ಜೆ) ಜಾರಿಗೆ ಬಂದಿದ್ದು ದಿ.ವೈಜಿನಾಥ ಪಾಟೀಲ್ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ. ಆದರೆ ವಿಶೇಷ ಸ್ಥಾನಮಾನದ ರೂವಾರಿ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದ್ದು ನಾಚಿಕೆಗೇಡಿನ ಸಂಗತಿ. ಅಭಿವೃದ್ಧಿಯಾಗಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳುತ್ತಿದ್ದಾರೆ. ಐದು ಗಂಟೆ ಸಮಯ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಚಿತ್ರಣ ನೀಡುವೆ.
    | ಭಗವಂತ ಖೂಬಾ ಕೇಂದ್ರ ಸಚಿವ

    ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಭಾರತ ಹಿಂದು ರಾಷ್ಟç ಆಗಲಿದೆ. ದೇಶಕ್ಕೆ ಮೋದಿ ಅವಶ್ಯ ಎನ್ನುವುದು ಜನತೆ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ದೇಶ ಲೂಟಿ ಮಾಡಿದೆ. ಅನೇಕ ಭ್ರಷ್ಟಾಚಾರ ನಡೆಸಿದ್ದು, ಕೈ ಪಕ್ಷಕ್ಕೆ ಭವಿಷ್ಯವಿಲ್ಲ. ಅನೇಕ ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ.
    | ಪ್ರಭು ಚವ್ಹಾಣ್ ಔರಾದ್ ಶಾಸಕ

    ಕಾಂಗ್ರೆಸ್‌ನಲ್ಲಿ ಪರಿವಾರ ವಾದ ಮಾತ್ರ ನಡೆದರೆ, ಬಿಜೆಪಿಯಲ್ಲಿ ಕಾರ್ಯಕರ್ತರ ವಾದ ನಡೆಯುತ್ತದೆ. ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ. ಅವರ ಶಕ್ತಿಯಿಂದ ಜಿಲ್ಲೆಯ ೬ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕರಲ್ಲಿ ಕಮಲ ಅರಳಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ನರೇಂದ್ರ ಮೋದಿಜಿ ಪ್ರಧಾನಿಯಾಗುವುದು ಖಚಿತ.
    | ಡಾ.ಶೈಲೇಂದ್ರ ಬೆಲ್ದಾಳೆ ಬೀದರ್ ದಕ್ಷಿಣ ಶಾಸಕ

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಂತರ ಕಾಂಗ್ರೆಸ್‌ನವರಿಗೆ ನಡುಕ ಹುಟ್ಟಿದೆ. ಜಿಲ್ಲೆಯಲ್ಲಿ ಕೇಂದ್ರದ ಸಾಕಷ್ಟು ಯೋಜನೆ ತರುವ ಮೂಲಕ ಸಚಿವ ಭಗವಂತ ಖೂಬಾ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ.
    | ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts