More

    ಹೊಲದಲ್ಲೇ ಹಾಳಾಗುತ್ತಿದೆ ಬೆಳೆ

    ಕೊಕಟನೂರ: ಮಾರಕ ಕರೊನಾ ವೈರಸ್ ಕರಿನೆರಳು ರೈತರ ಮೇಲೆ ಬಿದ್ದಿದ್ದು, ತರಕಾರಿ ಹಾಗೂ ಹಣ್ಣಿನ ಬೆಳೆಗೆ ಬೇಡಿಕೆ ಕುಸಿತಗೊಂಡಿದ್ದರಿಂದ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದಾರೆ.

    ಮಾರುಕಟ್ಟೆಯಲ್ಲಿ ಬಾಳೆ ಹಣ್ಣು ಖರೀದಿಸಲು ದಲ್ಲಾಳಿಗಳು ಇಲ್ಲದ ಕಾರಣ ಬಾಳೆ ಬೆಳೆಗಾರರ ಗೋಳು ಹೇಳತೀರದಂತಾಗಿದೆ. ಬೇಡಿಕೆ ಇಲ್ಲದ್ದರಿಂದ ಬಾಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಇದರ ಕಟಾವಿಗೂ ರೈತರು ಮುಂದಾಗುತ್ತಿಲ್ಲ. ಅಥಣಿ ತಾಲೂಕಿನ ಬಳವಾಡ ಗ್ರಾಮದ ರೈತ ಲಕ್ಷ್ಮಣ ಕಾಂಬಳೆ ತಮ್ಮ 4 ಎಕರೆ ತೋಟದಲ್ಲಿ ಜಿ-9 ಜಲಗಾಂವ ತಳಿಯ ಸುಮಾರು 10 ಸಾವಿರ ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಅವರಿಗೆ ಕರೊನಾ ಸಮಸ್ಯೆ ತಂದೊಡ್ಡಿದೆ. ಕಟಾವಿಗೆ ಬಂದಿದ್ದ 6 ಸಾವಿರ ಗಿಡಗಳು ಗೊನೆ ಸಹಿತ ಹೊಲದಲ್ಲೇ ಬಿದ್ದು ಕೊಳೆಯುತ್ತಿವೆ. ಬಾಕಿ 4 ಸಾವಿರ ಗಿಡಗಳು ಬರುವ 10-15 ದಿನಗಳಲ್ಲಿ ಕಟಾವಿಗೆ ಬರುವ ಸಾಧ್ಯತೆಯಿದೆ. ಆದರೆ ಬೆಳೆ ರಪ್ತು ಮಾಡಲು ಸಾಧ್ಯವಾಗದಿರುವುದರಿಂದ ರೈತನ ಚಿಂತೆ ಹೆಚ್ಚುವಂತೆ ಮಾಡಿದೆ.

    ಪ್ರತಿ ಎಕರೆ ಬೆಳೆ ನಿರ್ವಹಣೆಗೆ ಒಂದು ಲಕ್ಷ ರೂ.ನಂತೆ ಒಟ್ಟು 4 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಬೆಳೆಯಿಂದ 16 ಲಕ್ಷ ರೂ. ಆದಾಯ ಬರುವ ನಿರೀಕ್ಷೆಯಲ್ಲಿದ್ದೆ. ಕಟಾವಿಗೆ ಬಂದ ಬಾಳೆಯನ್ನು ಗೋವಾ, ಹೈದರಾಬಾದ್, ಬೆಂಗಳೂರಿನ ಮಾರುಕಟ್ಟೆಗೆ ಕಳುಹಿಸಬೇಕಿತ್ತು. ಆದರೆ, ಲಾಕ್‌ಡೌನ್ ಆದೇಶದಿಂದ ಸಮಸ್ಯೆಯಾಗಿದೆ. ಬಾಳೆಹಣ್ಣು ಹೊಲದಲ್ಲಿಯೇ ಹಾಳಾಗುತ್ತಿದೆ. ಇದರಿಂದ ನಾವು ಸಂಕಷ್ಟ ಅನುಭವಿಸುವಂತಾಗಿದೆ.
    | ಲಕ್ಷ್ಮಣ ಕಾಂಬಳೆ ಅಥಣಿ ತಾಲೂಕಿನ ಬಳವಾಡ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts