More

    ಬದಲಾದ ಕಾಲದಲ್ಲಿ ಕೃಷಿಯತ್ತ ಒಲವು ಕ್ಷೀಣ, ಸಂವಾದದಲ್ಲಿ ಹಿರಿಯ ಕೃಷಿಕ ರಮೇಶ್ ಪಿ.ದೇವಾಡಿಗ ಖೇದ

    ಹಳೆಯಂಗಡಿ: ಹಿರಿಯರಿಂದ ಪಾರಂಪರಿಕವಾಗಿ ಬಂದ ಕೃಷಿ ಭೂಮಿಯಲ್ಲಿ ದುಡಿದು ಸಂತೋಷ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಆದರೆ ಬದಲಾಗುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಯುವ ಜನಾಂಗ ಕೃಷಿಯತ್ತ ಒಲವು ತೋರಿಸುವುದು ತುಂಬ ಕಡಿಮೆಯಾಗಿದೆ. ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳು ತುಂಬ ಕಡಿಮೆಯಾಗಿರುವುದರಿಂದ ಕೃಷಿಯತ್ತ ಒಲವು ಕೂಡ ಕ್ಷೀಣಿಸುತ್ತಿದೆ ಎಂದು ಹಿರಿಯ ಕೃಷಿಕ ರಮೇಶ್ ಪಿ.ದೇವಾಡಿಗ ಹೇಳಿದರು.

    ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಪಾವಂಜೆಯ ಬೀರನಪಡ್ಪುವಿನಲ್ಲಿ ಇತ್ತೀಚೆಗೆ ನಡೆದ ಕೃಷಿಕರ ಜತೆಗಿನ ಸಂವಾದದಲ್ಲಿ ಮಾತನಾಡಿದರು.

    ಅವಿಭಕ್ತ ಕೃಷಿ ಕುಟುಂಬಗಳು ಮತ್ತು ಸಮಕಾಲೀನ ಪಲ್ಲಟಗಳು ಈ ವಿಷಯದ ಕುರಿತು ಹಿರಿಯ ಕೃಷಿಕರಾದ ನರ್ಸಿ ಪಿ.ದೇವಾಡಿಗ, ರಮೇಶ್ ಪಿ.ದೇವಾಡಿಗ ಮತ್ತು ಸಹೋದರರು ಮತ್ತು ಅವರ ಮಕ್ಕಳ ಜತೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಹಳೆಯಂಗಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್ ಬಿ.ಎಂ ‘ಪ್ರವಾಸಿ ಕಂಡ ಪ್ರಾಚೀನ ಭಾರತ’ ಎಂಬ ಕುರಿತು ಉಪನ್ಯಾಸ ನೀಡಿದರು. ನಾರಾಯಣ ಸನಿಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರಾದ ಆಶಾಲತಾ, ಶುಭಲಕ್ಷ್ಮಿ, ಮಿಶೆಲ್ ಡಿಸಿಲ್ವ ಉಪಸ್ಥಿತರಿದ್ದರು. ಉಪನ್ಯಾಸಕ ಅನಿಲ್ ಚೆರಿಯನ್ ಕಾರ್ಯಕ್ರಮ ಸಂಯೋಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts