More

    ಪ್ರಧಾನಿ ಮೋದಿ ಪೌರತ್ವ ಪ್ರಮಾಣ ಪತ್ರ ಕೋರಿದ್ದ ಆರ್​ಟಿಐಗೆ ಅರ್ಜಿಗೆ ಪಿಎಂಒ ಕೊಟ್ಟ ಉತ್ತರವೇನು?

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ದೇಶಾದ್ಯಂತ ಪ್ರತಿಭಟನೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ನಾನಾ ರೀತಿಯ ವಿಶ್ಲೇಷಣೆ ಮತ್ತು ಸ್ಪಷ್ಟನೆ ಮೂಲಕ ಸಿಎಎ ಗೊಂದಲ ಮಾತ್ರ ಜನರಲ್ಲಿ ಹಾಗೇ ಮುಂದುವರಿದಿದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಪೌರತ್ವಕ್ಕೆ ಸಂಬಂಧಿಸಿದ ಚರ್ಚೆಯೊಂದು ಕುತೂಹಲ ಸೃಷ್ಟಿಸಿದೆ.

    ಆಗಿದ್ದೇನೆಂದರೆ, ಸುಭಾಂಕರ್​ ಸರ್ಕಾರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ)ಯಡಿ ಪ್ರಧಾನಿ ಮೋದಿ ಅವರ ಪೌರತ್ವ ಪ್ರಮಾಣ ಪತ್ರವನ್ನು ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪಿಎಂಒ ನೀಡಿರುವ ಉತ್ತರ ಸಾಮಾನ್ಯವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

    1955ರ ಪೌರತ್ವ ಕಾಯ್ದೆಯ ಸೆಕ್ಷನ್ 3ರ ಪ್ರಕಾರ​ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುಟ್ಟಿನಿಂದಲೇ ಭಾರತೀಯ ಪ್ರಜೆಯಾಗಿದ್ದಾರೆ. ಹೀಗಾಗಿ ಅವರು ಪೌರತ್ವ ನೋಂದಣಿಗಾಗಿ ಪ್ರಮಾಣ ಪತ್ರ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಿಎಂಒ ಉತ್ತರ ನೀಡಿದೆ.

    ಪ್ರಧಾನಿ ಕಾರ್ಯಾಲಯ ನೀಡಿರುವ ಉತ್ತರಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಪಿಎಂಒ ನೀಡಿರುವ ಉತ್ತರ ಅಸ್ಪಷ್ಟವಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಇನ್ನು ಕೆಲವರು ಪಿಎಂಒ ಉತ್ತರ ಸರಿಯಾಗಿದೆ ಎಂದು ಬೆನ್ನಿಗೆ ನಿಂತಿದ್ದಾರೆ.

    ಹಿರಿಯ ಪತ್ರಕರ್ತ ಸೀಮಿ ಪಾಷ ಆರ್​ಟಿಐ ಪ್ರತಿಯನ್ನು ಟ್ವೀಟ್​ ಮಾಡಿ, 1955ರ ಪೌರತ್ವ ಕಾಯ್ದೆ ಪ್ರಕಾರ ಪ್ರಧಾನಿ ಮೋದಿ ಪೌರತ್ವ ನೋಂದಣಿ ಬೇಕಾಗಿಲ್ಲ ಎನ್ನುವುದಾದರೆ, ಇತರರು ಏಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts