More

    ಆರಂಭವಾಗಲಿದೆ ಮಹಿಳಾಸ್ನೇಹಿ ಮದ್ಯದಂಗಡಿ: ಕಮಲನಾಥ್​ ಸರ್ಕಾರದ ನೂತನ ಯೋಜನೆ

    ಭೋಪಾಲ್​: ರಾಜ್ಯದಲ್ಲಿ ಮಹಿಳಾ ಸ್ನೇಹಿ ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಕಮಲನಾಥ್​ ಅವರ ಸರ್ಕಾರ ನಿರ್ಧರಿಸಿದೆ.

    ಮಧ್ಯಪ್ರದೇಶದಲ್ಲಿ ಇನ್ನು ಕೆಲ ದಿನಗಳಲ್ಲಿ ಮಹಿಳಾ ಸ್ನೇಹಿ ಮದ್ಯದಂಗಡಿಗಳು ತೆರೆದುಕೊಳ್ಳಲಿದ್ದು ಅದರಲ್ಲಿ ಮಹಿಳೆಯರು ಇಷ್ಟಪಡುವಂತಹ ವೈನ್​ ಮತ್ತು ವಿಸ್ಕಿ ಬಾಟೆಲ್​ಗಳು ಲಭ್ಯವಾಗಲಿವೆ. ರಾಜ್ಯ ಸರ್ಕಾರ ಪ್ರಕಟಿಸಿರುವ 2020-21ರ ಮದ್ಯ ನೀತಿಯಲ್ಲಿ ಮಹಿಳಾ ಸ್ನೇಹಿ ಮದ್ಯದಂಗಡಿ ನಿರ್ಮಿಸುವುದಾಗಿ ತಿಳಿಸಲಾಗಿದೆ.

    ಮಾಲ್​ಗಳು ಮತ್ತು ಪ್ರತಿಷ್ಟಿತ ಮಾರುಕಟ್ಟೆಗಳಲ್ಲಿ ಮಹಿಳಾ ಸ್ನೇಹಿ ಮದ್ಯದಂಗಡಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಭೋಪಾಲ್​ ಮತ್ತು ಇಂಡೋರ್​ನಲ್ಲಿ ತಲಾ ಎರಡು ಮಹಿಳಾ ಸ್ನೇಹಿ ಮದ್ಯದಂಗಡಿಗಳು ಮತ್ತು ಜಬಲ್ಪುರ್​, ಗ್ವಾಲಿಯರ್​ನಲ್ಲಿ ತಲಾ ಒಂದು ಅಂಗಡಿಯನ್ನು ತೆರೆಯುವುದಾಗಿ ತಿಳಿಸಲಾಗಿದೆ.

    ಇದರ ಜತೆಯಲ್ಲಿ ರಾಜ್ಯದ ಪ್ರಮುಖ ನಗರಗಳ ಪ್ರತಿಷ್ಟಿತ ಮಾರುಕಟ್ಟೆಗಳಲ್ಲಿ ವಿದೇಶಿ ಮದ್ಯವನ್ನು ಮಾರುವಂತಹ ವಿಶೇಷ ಅಂಗಡಿಗಳನ್ನು ತೆರೆಯುವುದಕ್ಕೆ ಸರ್ಕಾರ ನಿರ್ಧರಿಸಿದೆ. ವಿದೇಶದಿಂದ ಆಮದಾಗುವ ಮದ್ಯಗಳನ್ನು ನೇರವಾಗಿ ಇಂತಹ ಅಂಗಡಿಗಳಿಗೆ ಕಳಿಸುವುದಾಗಿ ತಿಳಿಸಿರುವ ಸರ್ಕಾರ ಅಂತಹ ಅಂಗಡಿಗಳಿಗೆ ಬಾಟಲ್​ ಇನ್​ ಒರಿಜಿನಲ್​ (ಬಿಐಒ) ಎನ್ನುವ ಹೆಸರನ್ನೂ ಸಹ ಇಟ್ಟಿದೆ. ಭೋಪಾಲ್​, ಇಂದೋರ್​, ಜಬಲ್ಪುರ್​ ಮತ್ತು ಗ್ವಾಲಿಯರ್​ನಲ್ಲಿ ಇಂತಹ ಅಂಗಡಿಗಳನ್ನು ತೆರೆಯಲಾಗುವುದು.

    ಮದ್ಯದ ಬಾಟೆಲ್​ಗಳ ಮೇಲೆ ಬಾರ್​ಕೋಡ್​ ತರುವುದಾಗಿ ತಿಳಿಸಿರುವ ಸರ್ಕಾರ ಇದರಿಂದಾಗಿ ಮದ್ಯವು ಎಲ್ಲೆಲ್ಲಿಗೆ ಮಾರಾಟವಾಗುತ್ತಿದೆ ಎನ್ನುವುದನ್ನು ಸುಲಭವಾಗಿ ಕಂಡುಹಿಡಯಬಹುದು ಎಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts