More

    ಸಿಎಂ ಬಸವರಾಜ ಬೊಮ್ಮಾಯಿ ಸ್ಮರಣೆ; ಕೃಷಿಗೆ ಪೂರಕವಾಗಿ ಕೆರೆಕಟ್ಟೆ ನಿರ್ಮಿಸಿದ್ದ ಸಿದ್ದರಾಮೇಶ್ವರರು

    ತಿಪಟೂರು (ತುಮಕೂರು):  ತುಮಕೂರು ವಿಶ್ವವಿದ್ಯಾಲಯದ ನೊಳಂಬ ಅಧ್ಯಯನ ಪೀಠಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿವರ್ಷ ಸರ್ಕಾರದ ವತಿಯಿಂದಲೇ ನೊಳಂಬ ಉತ್ಸವ ನಡೆಸುವ ಮಹತ್ವದ ನಿರ್ಧಾರ ಪ್ರಕಟಿಸಿದರು.
    ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಆವರಣದಲ್ಲಿ ಭಾನುವಾರ ನೊಳಂಬ ಲಿಂಗಾಯತ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರ 850ನೇ ಜಯಂತಿ ಸುವರ್ಣ ಮಹೋತ್ಸವದ ಸಮರೋಪ ಭಾಷಣದಲ್ಲಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಇವೆರಡು ಪ್ರಮುಖ ಬೇಡಿಕೆಗಳಿಗೆ ಬೊಮ್ಮಾಯಿ ವೇದಿಕೆಯಲ್ಲಿಯೇ ಒಪ್ಪಿಗೆ ಸೂಚಿಸಿದರು.

    ನೊಳಂಬರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಪ್ರತಿವರ್ಷ ಸರ್ಕಾರದ ವತಿಯಿಂದಲೇ ಉತ್ಸವಕ್ಕೆ ನಡೆಸುವುದಾಗಿ ಘೋಷಿಸಿದ ಬೊಮ್ಮಾಯಿ ಅವರು, ಇದೇ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿಯೇ ನೊಳಂಬ ಉತ್ಸವ ಮಾಡುವುದಾಗಿ ಭರವಸೆ ಕೊಟ್ಟರು. ಸಿದ್ದರಾಮೇಶ್ವರ ಅವರು ಬಸವಣ್ಣನವರ ಒಡನಾಡಿಯಾಗಿದ್ದವರು. ನಾಡಿನೆಲ್ಲೆಡೆ ಕೆರೆ-ಕಟ್ಟೆಗಳನ್ನು ನಿರ್ಮಿಸಿ, ಕೃಷಿಗೆ ಅಪಾರ ಬೆಂಬಲ ನೀಡಿದ ಕಾಯಕಯೋಗಿ. 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತು ಪಾಲಿಸಿ ಸಿದ್ದರಾಮೇಶ್ವರರು ನಾಡಿನೆಲ್ಲೆಡೆ ಸಂಚರಿಸಿ ಕ್ರಾಂತಿಯೇ ಮಾಡಿದ್ದಾರೆ ಎಂದು ಸ್ಮರಿಸಿದರು.

    ಸಿದ್ದರಾಮೇಶ್ವರರ ಆಶಯಗಳನ್ನು ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮಾಡಿದ್ದಾರೆ. ಎಲ್ಲಾ ಕೆರೆಗಳಿಗೂ ಹೂಳು ತೆಗೆಯಲು ಹಣ ನೀಡಿದ್ದರು. ಅಧಿಕಾರವಿಲ್ಲದಾಗಲೂ ಜನಪರ ಚಿಂತನೆಯನ್ನು ಹಾಕಿಕೊಟ್ಟಿದ್ದಾರೆ ಅದರಂತೆಯೇ ನಡೆಯುತ್ತೇನೆ ಎಂದರು.
    ಸಿದ್ದರಾಮೇಶ್ವರರ ಆಶಯಗಳನ್ನು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ಎಲ್ಲ ಕೆರೆಗಳಿಗೂ ಹೂಳು ತೆಗೆಯಲು ಹಣ ನೀಡಿದ್ದಾರೆ. ಅಧಿಕಾರವಿಲ್ಲದಾಗಲೂ ಜನಪರ ಚಿಂತನೆ ಹಾಕಿಕೊಟ್ಟಿದ್ದಾರೆ. ಅದರಂತೆಯೇ ನಡೆಯುತ್ತೇನೆ. ತುಮಕೂರಿನ ಎಲ್ಲ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡಿದ್ದೇವೆ. ಎತ್ತಿನಹೊಳೆ ನೀರು ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದ್ದು ಜನರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

    ನಡೆದಾಡುವ ಸರ್ಕಾರ ನೀಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ರಾಜ್ಯದ ಆರೂವರೆ ಕೋಟಿ ಜನರ ಮನಸ್ಸಿನಲ್ಲಿ ಬಿಎಸ್‌ವೈ ಸ್ಥಾನಪಡೆದಿದ್ದಾರೆ. ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕಡೆದೊಯ್ಯುವ ಅಗತ್ಯವಿದೆ. ದೀಪದಿಂದ ಬೆಳಕು ನೀಡಬಲ್ಲದು. ಆದರೆ, ಸಮಾಜದಲ್ಲಿ ಈ ಸಮಾಜದಲ್ಲಿ ಬೆಂಕಿ ಉಗುಳುವ ಜನರು ಹುಟ್ಟಿಕೊಳ್ಳಲಾರಂಭಿಸಿದ್ದಾರೆ. ಇಂತಹವರಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ಕೆರೆಗೋಡಿ ರಂಗಾಪುರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ, ಬೆಟ್ಟಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಕೋಳಗುಂದ ಕೇದಿಗ ಮಠದ ಜಯಚಂದ್ರಶೇಖರ ಸ್ವಾಮೀಜಿ, ಸಚಿವರಾದ ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ್, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್, ಕೆ.ಎಸ್.ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

    • ಸರ್ಕಾರದಿಂದ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ
    • ತುಮಕೂರು ವಿವಿ ನೊಳಂಬ ಅಧ್ಯಯನ ಪೀಠಕ್ಕೆ 20 ಕೋಟಿ ರೂ., ಅನುದಾನ
    • ನೊಳಂಬರು ಆಡಳಿತ ನಡೆದ ಸ್ಥಳಗಳಲ್ಲಿ ನೊಳಂಬೋತ್ಸವ.
    • ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವುದು
    • ಸಿದ್ದರಾಮೇಶ್ವರರು ನಿರ್ಮಿಸಿರುವ ಎಲ್ಲ ಕೆರೆಗಳ ಅಭಿವೃದ್ಧಿ
    • ನೊಳಂಬ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಬೇಕು
    • ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ನೊಳಂಬ ಲಿಂಗಾಯತರ ಸೇರ್ಪಡೆ.
    • ಕೊಬ್ಬರಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ಘೋಷಣೆ
    • ತಿಪಟೂರು ಜಿಲ್ಲಾ ಕೇಂದ್ರವಾಗಿ ಘೊಷಣೆ ಮಾಡಬೇಕು

    ಸಿಎಂ ಬಂದರೂ ಜೆಸಿಎಂ ಬರಲಿಲ್ಲ! ಸಿದ್ದರಾಮೇಶ್ವರ ಜಯಂತಿಯಲ್ಲಿ ನೊಳಂಬ ಸಮುದಾಯದ ಪ್ರಭಾವಿ ಮುಖಂಡ, ಸಚಿವ ಜೆ.ಸಿ.ಮಾಧುಸ್ವಾಮಿ ಗೈರು ಚರ್ಚೆಗೆ ಗ್ರಾಸವಾಯಿತು. ಎರಡು ದಿನದ ಉತ್ಸವದಲ್ಲಿ ಮಾಧುಸ್ವಾಮಿ ಭಾಗವಹಿಸದ ಬಗ್ಗೆ ತರಹೇವಾರಿ ಚರ್ಚೆಗಳು ನಡೆಯಲಾರಂಭಿಸಿವೆ. ಸಿಎಂ ಆಗಮನದ ಸಂದರ್ಭದಲ್ಲಿಯಾದರೂ ಭಾಗವಹಿಸಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿಯೇ ಇದ್ದರೂ ಮಾಧುಸ್ವಾಮಿ ಸಮಾರಂಭದಲ್ಲಿ ಭಾಗವಹಿಸದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಜನಮಾನಸದಲ್ಲಿ ಬಿಎಸ್‌ವೈ ಸ್ಥಾನ ! ನಡೆದಾಡುವ ಸರ್ಕಾರ ನೀಡಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ರಾಜ್ಯದ ಆರೂವರೆ ಕೋಟಿ ಜನರ ಮನಸ್ಸಿನಲ್ಲಿ ಬಿಎಸ್‌ವೈ ಸ್ಥಾನಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚ್ಯವಾಗಿ ಹೇಳಿದರು. ಶ್ರೀ ಗುರುಸಿದ್ದರಾಮೇಶ್ವರ ಜಯಂತ್ಯುತ್ಸವ ವೇದಿಕೆಯಲ್ಲಿ ಭಾನುವಾರ ಸಮಾರೋಪ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಅವರ ಮುಂದೆಯೇ ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಅವರು ಈಗ ಮುಖ್ಯಮಂತ್ರಿ ಕೂಡ ಅಲ್ಲ. ಯಡಿಯೂರಪ್ಪ ಅವರು ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳು ಪ್ರತೀ ಮನೆ ತಲುಪಿದೆ ಎಂದು ಹೇಳಿದ್ದು ವಿಶೇಷ ಅರ್ಥ ಕಲ್ಪಿಸಿದೆ.

    ವಿಜಯೇಂದ್ರ ಸಂಚಲನ: ಜಯಂತ್ಯುತ್ಸವ ವೇದಿಕೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಲು ನಿಂತಾಗ ನಿರಂತರವಾಗಿ ಜೈಕಾರ, ಚಪ್ಪಾಳೆಯ ಅಭಿಮಾನದ ಹೊಳೆಯೇ ಹರಿಯಿತು. ನೀವು ಹೀಗೆ ಗಲಾಟೆ ಮಾಡಿದರೆ ಬಿ.ಸಿ.ನಾಗೇಶ್ ಅವರನ್ನು ಸೈಡಿಗೆ ಕಳುಹಿಸಿ ತಿಪಟೂರಿನಿಂದಲೇ ಚುನಾವಣೆಗೆ ನಿಲ್ಲಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದಾಗ ಹರ್ಷದ್ಘೋರ ಮುಗಿಲುಮುಟ್ಟಿತು. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೂ ವೇದಿಕೆಯಲ್ಲಿದ್ದರು.

    • ಸರ್ಕಾರದಿಂದ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ
    • ತುಮಕೂರು ವಿವಿ ನೊಳಂಬ ಅಧ್ಯಯನ ಪೀಠಕ್ಕೆ 20 ಕೋಟಿ ರೂ., ಅನುದಾನ
    • ನೊಳಂಬರು ಆಡಳಿತ ನಡೆದ ಸ್ಥಳಗಳಲ್ಲಿ ನೊಳಂಬೋತ್ಸವ.
    • ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವುದು
    • ಸಿದ್ದರಾಮೇಶ್ವರರು ನಿರ್ಮಿಸಿರುವ ಎಲ್ಲ ಕೆರೆಗಳ ಅಭಿವೃದ್ಧಿ
    • ನೊಳಂಬ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಬೇಕು
    • ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ನೊಳಂಬ ಲಿಂಗಾಯತರ ಸೇರ್ಪಡೆ.
    • ಕೊಬ್ಬರಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ಘೋಷಣೆ
    • ತಿಪಟೂರು ಜಿಲ್ಲಾ ಕೇಂದ್ರವಾಗಿ ಘೊಷಣೆ ಮಾಡಬೇಕು

    ತಿಪಟೂರಿನಲ್ಲಿ ಜನಜಾತ್ರೆ: ಸಿದ್ದರಾಮೇಶ್ವರರ ಪ್ರಭಾವ ಹೆಚ್ಚಾಗಿರುವ ತೆಂಗಿನ ಸೀಮೆಯಲ್ಲಿ ಆಯೋಜಿಸಿದ್ದ ಜಯಂತಿಯ ಸುವರ್ಣ ಮಹೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಜನ ಹರಿಬಂದಿದ್ದರು. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಸ್ಥಳವಿಲ್ಲದೆ ಸಾಕಷ್ಟು ಜನರು ಪ್ರಸಾದ ಸ್ವೀಕರಿಸಿ ವಾಪಸ್ಸಾದರು.

    ವಾರದೊಳಗೆ ಕೊಬ್ಬರಿ ಖರೀದಿ: ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುವಾಗ ಜನರೆಲ್ಲರೂ ಒಟ್ಟಾಗಿ ಕೊಬ್ಬರಿ.. ಕೊಬ್ಬರಿ..ಕೊಬ್ಬರಿ ಎಂದು ಕೂಗಿ ಪ್ರೋತ್ಸಾಹಬೆಲೆ ನೀಡಬೇಕು ಎಂದು ಅಂಗಲಾಚಿದರು. ಜನರ ಆಗ್ರಹಕ್ಕೆ ಮಣಿದ ಬೊಮ್ಮಾಯಿ, ವಾರದೊಳಗೆ ನಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರೋತ್ಸಾಹಬೆಲೆಯ ಬಗ್ಗೆ ಚಕಾರ ಎತ್ತಲಿಲ್ಲ, ಕೊಬ್ಬರಿ ಎನ್ನುವ ಬದಲಾಗಿ ಕಬ್ಬು ಖರೀದಿ ಎಂದಿದ್ದು ಜನರನ್ನು ವಿಚಲಿತಗೊಳಿಸಿತು.

    ತುಮಕೂರು ವಿವಿ ನೊಳಂಬ ಅಧ್ಯಯನ ಪೀಠದಲ್ಲಿ ಸಂಶೋಧನೆಗೆ ಒತ್ತು ನೀಡಲು 4.20 ಕೋಟಿ ರೂ. ಅನುದಾನ ಹಾಗೂ ಪ್ರತಿವರ್ಷ ಸರ್ಕಾರದ ವತಿಯಿಂದಲೇ ನೊಳಂಬ ಉತ್ಸವ ನಡೆಸಬೇಕು ಎಂಬ ನಮ್ಮ ಬೇಡಿಕೆಗೆ ಸಿಎಂ ಸ್ಪಂದಿಸಿರುವುದು ಸಂತೋಷ ತಂದಿದೆ.
    | ಎಸ್.ಆರ್.ಪಾಟೀಲ, ಅಧ್ಯಕ್ಷ, ನೊಳಂಬ ಲಿಂಗಾಯತ ಸಂಘ

    ಸಿದ್ದರಾಮರ ಕನಸು ಪೂರ್ಣಗೊಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಬಿಎಸ್‌ವೈ, ಬೊಮ್ಮಾಯಿ ಅವರ ಸರ್ಕಾರದ ನೆರವಿನಿಂದ ತಾಲೂಕಿನ ಕೆರೆಗಳಿಗೆ ನೀರು ಬಂದಿದೆ.
    | ಬಿ.ಸಿ.ನಾಗೇಶ್ ಶಿಕ್ಷಣ ಸಚಿವ

    ಸಿಎಂ ಬಸವರಾಜ ಬೊಮ್ಮಾಯಿ ಸ್ಮರಣೆ; ಕೃಷಿಗೆ ಪೂರಕವಾಗಿ ಕೆರೆಕಟ್ಟೆ ನಿರ್ಮಿಸಿದ್ದ ಸಿದ್ದರಾಮೇಶ್ವರರು
    ತಿಪಟೂರಿನಲ್ಲಿ ಶ್ರೀ ಗುರು ಸಿದ್ಧರಾಮೇಶ್ವರ 850ನೇ ಜಯಂತಿ ಸುವರ್ಣ ಮಹೋತ್ಸವದ ಸಮರೋಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೊಳಂಬ ಲಿಂಗಾಯತ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ, ಬಿ.ಸಿ.ನಾಗೇಶ್, ಎಸ್.ಆರ್.ಪಾಟೀಲ, ಕೆ.ಎಸ್.ಮಧುಸೂದನ್ ಇದ್ದರು.
    ಸಿಎಂ ಬಸವರಾಜ ಬೊಮ್ಮಾಯಿ ಸ್ಮರಣೆ; ಕೃಷಿಗೆ ಪೂರಕವಾಗಿ ಕೆರೆಕಟ್ಟೆ ನಿರ್ಮಿಸಿದ್ದ ಸಿದ್ದರಾಮೇಶ್ವರರು
    ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಭಾಗಿಯಾಗಿದ್ದ ಜನಸ್ತೋಮ.
    ಸಿಎಂ ಬಸವರಾಜ ಬೊಮ್ಮಾಯಿ ಸ್ಮರಣೆ; ಕೃಷಿಗೆ ಪೂರಕವಾಗಿ ಕೆರೆಕಟ್ಟೆ ನಿರ್ಮಿಸಿದ್ದ ಸಿದ್ದರಾಮೇಶ್ವರರು
    ಜಯಂತಿಯ ಅಧ್ಯಕ್ಷತೆವಹಿಸಿದ್ದ ಸಂಸದ ಜಿ.ಎಸ್.ಬಸವರಾಜು ಅವರನ್ನು ಸಿಎಂ ಬೊಮ್ಮಾಯಿ ಸನ್ಮಾನಿಸಿದರು.

    ಸಿದ್ದರಾಮೇಶ್ವರ ಜಯಂತಿಗೆ ಸಾಕ್ಷಿಯಾದ ಲಕ್ಷಾಂತರ ಜನ

    ತಿಪಟೂರು: ನೊಳಂಬ ಲಿಂಗಾಯತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಎರಡು ದಿನ ನಡೆದ ಶ್ರೀಗುರು ಸಿದ್ದರಾಮೇಶ್ವರರ 850ನೇ ಜಯಂತಿ ಸುವರ್ಣ ಮಹೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುವ ಮೂಲಕ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಿದರು.

    ಎರಡೂ ದಿನ 2 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾಯಕಯೋಗಿ ಸಿದ್ದರಾಮೇಶ್ವರರನ್ನು ಸ್ಮರಿಸಿದರು. ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಆವರಣದಲ್ಲಿ ಭಾನುವಾರ ನೊಳಂಬ ಲಿಂಗಾಯತ ಸಂಘದ ವತಿಯಿಂದ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯ ಸಮರೋಪ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹನ್ನರಡನೇ ಶತಮಾನದಲ್ಲೇ ಕೃಷಿಗೆ ಪೂರಕವಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಾವರಿಗೆ ಗುರು ಸಿದ್ದರಾಮೇಶ್ವರರು ಒತ್ತುಕೊಟ್ಟಿದ್ದರು. ಇದೇ ಹಾದಿಯಲ್ಲಿ ನಮ್ಮ ಸರ್ಕಾರವು ಕೃಷಿ ಹಾಗೂ ನೀರಾವರಿಗೆ ಆದ್ಯತೆ ನೀಡಿ ಮುನ್ನಡೆದಿದೆ ಎಂದರು.

    ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನಂಬಿಕೆಯನ್ನು ಅನುಸರಿಸಿ ಸಿದ್ದರಾಮೇಶ್ವರರು ನಾಡಿನೆಲ್ಲೆಡೆ ಸಂಚರಿಸಿ ಕ್ರಾಂತಿಯನ್ನೇ ಮಾಡಿದ್ದಾರೆ. ಶರಣ ಸಂಸ್ಕೃತಿಗೆ ಬಸವಣ್ಣನವರ ಒಡನಾಡಿಯಾಗಿದ್ದ ಸಿದ್ದರಾಮೇಶ್ವರ ಕೊಡುಗೆಯೂ ಅಪಾರ ಎಂದು ಬೊಮ್ಮಾಯಿ ಸ್ಮರಿಸಿದರು.

    ಸಂಸ್ಕಾರ, ಸಂಸ್ಕೃತಿ ನಮ್ಮ ಚಿಂತನೆ ರೂಪಿಸುತ್ತದೆ. ಭವಿಷ್ಯದ ಬದುಕನ್ನು ನಿರ್ಧರಿಸುತ್ತವೆ, ಎಲ್ಲರಿಗೂ ನಮ್ಮ ಕುಲದ ಬಗ್ಗೆ ಅರಿವಿರಬೇಕು ಎಂದರು. ಈ ಶತಮಾನದಲ್ಲಿ ಕಾಯಕನಿಷ್ಠೆಯ ಅಗತ್ಯವಿದೆ. ಎಲ್ಲರೂ ದುಡಿದರಷ್ಟೇ ದೇಶದ ಅಭಿವೃದ್ಧಿ ಸಾಧ್ಯವಿದೆ. ಸರ್ಕಾರದ ಅನುದಾನ ಬಳಸಿಕೊಂಡರಷ್ಟೇ ಆರ್ಥಿಕ ಅಭಿವೃದ್ಧಿಯಾಗಲಿದೆ. ದುಡಿಮೆಗೆ ಗೌರವ ನೀಡಿದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿದೆ ಎಂಬ ನಂಬಿಕೆಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ದುಡ್ಡೇ ದೊಡ್ಡಪ್ಪ ಎಂಬ ಮಾತು ಬದಲಾವಣೆಯಾಗಿದ್ದು ದುಡಿಮೆಯೇ ದೊಡ್ಡಪ್ಪ ಎಂಬ ಮಾತು ಬಂದಿದೆ, ಕುಲಖಸುಬು ಜತೆಗೆ ಇತರೆ ಉದ್ಯಮಗಳಲ್ಲಿಯೂ ಸಮುದಾಯದ ಯುವಕರು ಮುಂದೆ ಬರಬೇಕು ಎಂದು ಸಲಹೆಯಿತ್ತರು.

    ನಡೆದಾಡುವ ಸರ್ಕಾರ ನೀಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ರಾಜ್ಯದ ಕೋಟ್ಯಂತರ ಜನರ ಮನಸ್ಸಿನಲ್ಲಿ ಬಿಎಸ್‌ವೈ ಸ್ಥಾನ ಪಡೆದಿದ್ದಾರೆ.

    ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವ ನಾನು ಎಲ್ಲಾ ಸವಾಲುಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಬಿಎಸ್‌ವೈ ಹಾಗೂ ರಾಜ್ಯದ ಜನರು ನೀಡಿದ್ದಾರೆ. ಸೋಲುಗಳನ್ನು ಮೆಟ್ಟಿಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಜನರ ಸೇವೆ ಮಾಡುವ ಅಧಿಕಾರ ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಕೆರೆಗೋಡಿ ರಂಗಾಪುರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ, ಬೆಟ್ಟಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಕೋಳಗುಂದ ಕೇದಿಗ ಮಠದ ಜಯಚಂದ್ರಶೇಖರ ಸ್ವಾಮೀಜಿ, ಸಚಿವರಾದ ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ್, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್, ಕೆ.ಎಸ್.ಮಧುಸೂದನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts