More

    ಜನತಾ ಕರ್ಪ್ಯೂ ದಿನ ವೃದ್ಧೆಯ ಮೇಲೆರಗಿದ ಕಾಮುಕರು: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಕೆ ಮಾಡಿದ್ದೇನು?

    ಜಲ್ಪೈಗುರಿ(ಪಶ್ಚಿಮ ಬಂಗಾಳ): ಕಾಮುಕರ ನಾಲಿಗೆಯನ್ನು ಕಡಿದು ತುಂಡರಿಸಿ 65 ವರ್ಷದ ವೃದ್ಧೆಯೊಬ್ಬರು ಅತ್ಯಾಚಾರದಿಂದ ತಪ್ಪಿಸಿಕೊಂಡಂತಹ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂ ಅನ್ನು ದುರ್ಬಳಕೆ ಮಾಡಿಕೊಂಡ ಕಾಮುಕರು ಭಾನುವಾರ ರಾತ್ರಿ 8.30ಕ್ಕೆ ದುಷ್ಕೃತ್ಯವೆಸಗಲು ಪ್ರಯತ್ನಿಸಿದ್ದಾರೆ. ಆರೋಪಿಗಳನ್ನು ರಾಕಿ ಮಹಮ್ಮದ್​ ಮತ್ತು ಛೋಟು ಮಹಮ್ಮದ್​ ಎಂದು ಗುರುತಿಸಲಾಗಿದೆ.

    ಪಹರಾಪುರ್​ನಲ್ಲಿ ಒಂಟಿಯಾಗಿದ್ದ ವೃದ್ಧೆಯ ಮನೆಗೆ ದಾಳಿ ಮಾಡಿದ ಕೀಚಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆರೋಪಿಗಳು ಕೂಡ ಅದೇ ಏರಿಯಾದವರು ಎಂದು ತಿಳಿದುಬಂದಿದೆ.

    ಆರೋಪಿ ಚೋಟು ವೃದ್ಧೆಯನ್ನು ಕೆಳಗೆ ಬೀಳಿಸಿದಾಗ ರಾಕಿ ಆಕೆಯ ಮೇಲೆರಗಿದ್ದಾನೆ. ಈ ವೇಳೆ ಕಿರುಚಂದತೆ ತಡೆಯಲು ಯತ್ನಿಸಿದಾಗ ರಾಕಿಯ ನಾಲಿಗೆಯನ್ನು ಕಡಿದು ವೃದ್ಧೆ ತುಂಡಿಸಿದ್ದಾರೆ. ಬಳಿಕ ಸಹಾಯಕ್ಕಾಗಿ ವೃದ್ಧೆ ಕೂಗಿಕೊಂಡಾಗ ಆರೋಪಿ ಚೋಟು ಅಲ್ಲಿಂದ ಪರಾರಿಯಾಗಿದ್ದಾರೆ.

    ಬಳಿಕ ರಾಕಿಯನ್ನು ಜಲ್ಪೈಗುರಿಯಲ್ಲಿರುವ ಸೂಪರ್​ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು ಆತನ ನಾಲಿಗೆಯನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ರಾಕಿಯನ್ನು ಉತ್ತರ ಬಂಗಾಳದ ಮೆಡಿಕಲ್​ ಕಾಲೇಜು ಮತ್ತು ಹಾಸ್ಪಿಟಲ್​ಗೆ ರವಾನಿಸಲಾಗಿದೆ.

    ಪ್ರಕರಣ ಬಗ್ಗೆ ಪಂಚಾಯಿತಿ ಸದಸ್ಯ ರಂಜಿತ್​ ರಾಯ್​ ಮಾತನಾಡಿ, ರಾಕಿ ಮತ್ತು ಚೋಟು ಕುಖ್ಯಾತ ದುಷ್ಕರ್ಮಿಗಳು. ಅವರಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೂ ಎಫ್​ಐಆರ್​ ಅನ್ನು ದಾಖಲಿಸಿಲ್ಲ ಎಂಬುದು ತಿಳಿದುಬಂದಿದೆ. (ಏಜೆನ್ಸೀಸ್)​

    ಕೋವಿಡ್​- 19 ಲಾಕ್​ಡೌನ್​ ಮಾರ್ಗಸೂಚಿ ಉಲ್ಲಂಘನೆ: ಮಧುಮಕ್ಕಳ ಬಂಧನ

    ಜ್ವರ ಪರೀಕ್ಷೆಗೆ ಫೀವರ್ ಟೆಸ್ಟ್ ಕೇಂದ್ರ: ಇಂದಿರಾ ಕ್ಯಾಂಟೀನ್​ನಲ್ಲಿ ಬಡವರಿಗೆ ಫ್ರೀ ಊಟ | ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts