More

    ಬಣ್ಣದಲ್ಲಿ ಮಿಂದೆದ್ದ ಯುವಜನತೆ

    ಚಿಕ್ಕೋಡಿ: ಚಿಕ್ಕೋಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ನಿಮಿತ್ತ ರಂಗಪಂಚಮಿ ಹಬ್ಬವನ್ನು ಯುವಕರು ಮತ್ತು ಮಹಿಳೆಯರು ವಿಜೃಂಭಣೆಯಿಂದ ಆಚರಿಸಿದರು.

    ಹೋಳಿ ಹುಣ್ಣಿಮೆಯಾದ ಐದು ದಿನಕ್ಕೆ ನಡೆಯುವ ರಂಗಪಂಚಮಿ ನಿಮಿತ್ತ ಪಟ್ಟಣದ ವಿವಿಧೆ ಬಡಾವಣೆಗಳಲ್ಲಿ ಯುವಕರು ಬಣ್ಣದಾಟದಲ್ಲಿ ಮೈ ಮರೆತಿದ್ದರು.

    ವರ್ಷಕ್ಕೊಮ್ಮೆ ಬರುವ ಹೋಳಿ ಹಬ್ಬದ ರಂಗಪಂಚಮಿಯನ್ನು ಕೋಮು ಸೌಹಾರ್ದತೆ ಸಂಕೇತವಾಗಿರುವ ರಂಗಿನಾಟವನ್ನು ಮಹಿಳೆಯರು, ಸಣ್ಣವರು, ದೊಡ್ಡವರು ಎಂಬ ಭೇದಭಾವ ಮಾಡದೇ ಪರಸ್ಪರ ಬಣ್ಣ ಎರಚಿ ಬಣ್ಣದೋಕುಳಿಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು.

    ತಾಲೂಕಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ರಂಗ ಪಂಚಮಿ ಜರುಗಿತು. ಬೆಳಗ್ಗೆಯಿಂದಲೇ ಪಟ್ಟಣದ ಕಿತ್ತೂರು ಚನ್ನಮ್ಮ ರಸ್ತೆ, ಬಸವ ವೃತ್ತ, ಬಸ್ ನಿಲ್ದಾಣ, ಅಂಕಲಿಕೂಟ, ಸೋಮವಾರ ಪೇಟೆ, ಇಂದಿರಾ ನಗರ ಮುಂತಾದ ಬೀದಿಗಳಲ್ಲಿ ಜಮಾಯಿಸಿದ ಯುವಕರು ತಂಡೋಪ ತಂಡವಾಗಿ ರಂಗು ರಂಗಿನ ಬಣ್ಣದೋಕುಳಿ ಆಟದಲ್ಲಿ ಯುವಕರು ನಿರತರಾಗಿದ್ದರು.

    ಪಟ್ಟಣದ ಕೆ.ಸಿ. ರಸ್ತೆಯ ಕೆವಿಜಿ ಬ್ಯಾಂಕ್ ಮುಂಭಾಗದಲ್ಲಿ ಬಣ್ಣದೋಕುಳಿ ಆಡಲು ವೇದಿಕೆ ಕಲ್ಪಿಸಲಾಗಿತ್ತು. ಸ್ಥಳೀಯ ಯುವಕರು ವೇದಿಕೆಗಳ ಬಳಿ ಸಂಗೀತಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಕರೊನಾ ವೈರಸ್ ಭೀತಿ ಹಾಗೂ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಇದ್ದ ಕಾರಣ ಬಣ್ಣದೋಕುಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿರಿಯ ನಾಗರಿಕರು ಭಾಗವಹಿಸದಿರುವುದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts