ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಪೀರನವಾಡಿ ಗ್ರಾಮಸ್ಥರ ವತಿಯಿಂದ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಕಗ್ಗಂಟಾಗಿತ್ತು. ಈ ವಿವಾದವನ್ನು ಸುಲಭ, ಸರಳವಾಗಿ ಬಗೆಹರಿಸಲು ಸಚಿವ ರಮೇಶ ಜಾರಕಿಹೊಳಿ ಸಹಕಾರ ನೀಡಿದ್ದಾರೆ. ದಿಟ್ಟ ನಿರ್ಧಾರ ಕೈಗೊಂಡು ಪ್ರತಿಮೆ ಸ್ಥಾಪಿಸಿದ್ದಾರೆ ಎಂದರು.
ಮಹೇಶ ಪಾಟೀಲ, ಯಲ್ಲಪ್ಪ ಕುರುಬರ, ಲಕ್ಷ್ಮಣರಾವ್ ಚಿಂಗಳೆ, ಬಸವರಾಜ ಬಸಳಿಗುಂದಿ, ಶಂಕರ ಹೆಗಡೆ, ಅಶೋಕ ಮೆಟಗುಡ್ಡ, ಮಡ್ಡೆಪ್ಪ ತೋಳಿನವರ, ಎಚ್.ಎಸ್. ನಸಲಾಪುರೆ, ಭಗವಂತ ಬಂಟಿ, ಸಿದ್ದಲಿಂಗ ದಳವಾಯಿ, ಎಸ್.ಎ್. ಪೂಜೇರಿ, ಜಿ.ಡಿ. ಟೊಪೋಜಿ ಇತರರಿದ್ದರು.