More

    ರಾಜಧರ್ಮ ರಾಜನೀತಿ: ಅಮೆರಿಕದಲ್ಲಿ ಕಪ್ಪು ಬೆಂಕಿ, ಬಿಳಿಯ ಹೊಗೆ!

    ರಾಜಧರ್ಮ ರಾಜನೀತಿ: ಅಮೆರಿಕದಲ್ಲಿ ಕಪ್ಪು ಬೆಂಕಿ, ಬಿಳಿಯ ಹೊಗೆ!

    ‘ಅಮೆರಿಕದಲ್ಲಿ ಏನಾಗುತ್ತಿದೆ, ಗೊತ್ತೆ?’ ಎಂದೊಬ್ಬ ಪ್ರಬುದ್ಧ ರಾಜಕಾರಣಿ ಮಿತ್ರರನ್ನು ಮೊನ್ನೆ ಕೇಳಿದೆ. ‘ಅದಾರೋ ಜಾರ್ಜ್ ಫ್ಲಾಯ್್ಡ ಎಂಬ ಕರಿಯನೊಬ್ಬನನ್ನು ಬಿಳಿಯ ಪೊಲೀಸನು, ತನ್ನ ಮಂಡಿಯನ್ನು ಆತನ ಕೊರಳ ಮೇಲೂರಿ, ಉಸಿರುಗಟ್ಟಿಸಿ ಸಾಯಿಸಿದನಲ್ಲ? ಸರಿಯೇ? ಇಲ್ಲಿ ಮಾನವೀಯತೆ ಇದೆಯೇ?’ ಅಂತ ಅವರು ಹೇಳಿದರು. ‘ಸತ್ತವನು ಕ್ರಿಮಿನಲ್, ಕೊಂದವನು ಪೊಲೀಸ್. ಇದು ಅಲ್ಲಿ ದಿನಾ ನಡೆಯುತ್ತದೆ, ಬಿಡಿ’ ಎಂದು ಉದಾಸೀನವಾಗಿ ಉತ್ತರಿಸಿದರು. ನನಗೆ ತೃಪ್ತಿಯಾಗಲಿಲ್ಲ. ಅಮೆರಿಕವನ್ನು ಆಳುತ್ತಿರುವವರು ಬಿಳಿಯರು. ಈಗ ಅಲ್ಲಿ ‘ಕಪು್ಪ’ ಬೆಂಕಿ=ಜನಾಂಗೀಯ ಅಂತರ್ ಯುದ್ಧದ ಸ್ಥಿತಿ. ಬಿಳಿಯರು ‘ಹೊಗೆ’ಯಾಗಿ ಸತ್ತು ಸಾಯಿಸುತ್ತಿದ್ದಾರೆ. ಇದೋ? ಕರೊನಾ ಸಂದರ್ಭ. ಲಕ್ಷಾಂತರ ಜನರ ಸಾವು ನಡೆದಿದೆ. ಚೀನಾ ಅಮೆರಿಕವನ್ನು ಸಾಯಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿದು, ಕೋಪ ತೋರಿದೆ, ಅಸಹಾಯಕ ಸ್ಥಿತಿಯಲ್ಲಿ. ಅಮೆರಿಕದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಟ್ರಂಪ್ ಈಗ ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ಚೀನೀ ಅಮೆರಿಕನ್ನರೊಡನೆ ಕರಿಯರೂ ಸೇರಿ ರಾಷ್ಟ್ರಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿದೆ. ಚೀನಾದಲ್ಲಿ ಕಮ್ಯುನಿಸ್ಟ್ ಆಡಳಿತದ ಕೊನೆಗಾಲ ಎಂಬ ವರದಿಯ ಜೊತೆಗೆ ಅಮೆರಿಕದಲ್ಲಿ ಬಿಳಿಯರ ದಬ್ಬಾಳಿಕೆಯೂ ಕೊನೆಗಾಣಲಿದೆ ಎಂಬ ಆಸೆ, ಜಗತ್ತಿನಾದ್ಯತ ಎದ್ದದ್ದು ವರದಿ ಇದೆ.

    ಈಗ ಇಲ್ಲಿ ಬೇರೇನೋ ಇದೆ ಎನಿಸಿ ಮೂಲ ಹುಡುಕಲಾರಂಭಿಸಿದೆ. ಒಂದು ಎಳೆ ಸಿಕ್ಕಿದೆ- ಇಲ್ಲಿ ಹಂಚಿಕೊಳ್ಳುತ್ತೇನೆ. ಅಮೆರಿಕದ ನಿವಾಸಿ ಫ್ರೆಂಚ್ ಮಹಿಳೆಯೊಬ್ಬಳು ‘13th’ ಎಂಬ ಹೆಸರಿನ ಒಂದು ಸಾಕ್ಷ್ಯ ಸಿನಿಮಾ ನಿರ್ವಿುಸಿದ್ದಾರೆ. ಈ ‘13’ ಯಾವುದು? ಅದರಲ್ಲಿ ಉತ್ತರವಿದೆ. ಅಮೆರಿಕದಲ್ಲಿ ಶತಮಾನಗಳ ಹಿಂದೆ ಬಿಳಿಯರು ಕರಿಯರನ್ನು ಹಿಡಿದು, ಗುಲಾಮಿ ಮಾರಾಟದಲ್ಲಿ, ಕೊಂಡು, ಅಲ್ಲಿ ಹತ್ತಿ ಹೊರಿಗಳಲ್ಲಿ ದುಡಿಯಲು ಜೀತದಾಳುಗಳನ್ನಾಗಿ ಶೋಷಿಸಿದರು. ಇದು ಹಳೆಯ ಕತೆ ಎನ್ನಬೇಡಿ. ವರ್ಣಭೇದ ನೀತಿಯ ಅಟ್ಟಹಾಸದ ಕಾಲ ಆಗ. ಕ್ರಮೇಣ ಕರಿಯರು ಹಕ್ಕುಗಳಿಗಾಗಿ ಹೋರಾಡಿ, ಜನಾಂಗೀಯ ಯುದ್ಧ ನಡೆದು, ಕೊನೆಗೆ ವರ್ಣಭೇದ ನೀತಿ, ಒಂದು ರೀತಿಯಲ್ಲಿ ‘ಅಂತ್ಯ’ ಕಂಡಿತು. ಕಂಡಿತೇ? ಇಲ್ಲ. ಅಲ್ಲೇ ಭ್ರಾಂತಿ ಇರುವುದು. ಉತ್ತರ ಅಮೆರಿಕ ಬಿಳಿಯರ ಜನ್ಮಭೂಮಿ ಅಲ್ಲ. ಕೊಲಂಬಸ್ ದಾರಿ ತಪ್ಪಿ, ಭಾರತಕ್ಕೆ ಬದಲು ಅಲ್ಲಿ ಹೋಗಲಿಲ್ಲ! ಅವನಿಗೆ ಆಗ ಗೊತ್ತಿತ್ತು. ‘ಇಲ್ಲಿ ಭಾರತೀಯರಿದ್ದಾರೆ, ಇದು ‘ಪಶ್ಚಿಮ ಭಾರತ’-West India ಅಂತ. ಚರಿತ್ರೆಕಾರರು ದಾರಿ ತಪ್ಪಿಸಿದ್ದಾರೆ. ಅಲ್ಲಿದ್ದ ‘ಕೆಂಪು’ ಭಾರತೀಯರು ಮೂಲ ಭಾರತದಿಂದಲೇ ಹೋಗಿ ನೆಲೆಸಿದ್ದವರು (ನೋಡಿ-Hindu America Book By Chaman lal.

    ಬಲಿ ಚಕ್ರವರ್ತಿಯನ್ನು ಇಲ್ಲಿಂದ ಹೊರದಬ್ಬಿದಾಗ ಅವನ ಕಡೆಯವರು ‘ಓಣಂ’ (ತಿರುವೋಣಂ=ಶ್ರವಣ=ವಾಮನ ಜಯಂತಿ) ದಂದು ಸಾವಿರಾರು ದೋಣಿಗಳಲ್ಲಿ ವಲಸೆ ಹೋಗಿ, ಅಲ್ಲಿ ಆಗಿನ ‘ಪಾತಾಳ’ದಲ್ಲಿ ನೆಲೆಸಿದರು (ಭೂಗೋಳವನ್ನು ಭಾರತ ಮೇಲೆ ಬರುವಂತೆ ಹಿಡಿದು, ಸೂಜಿ ಚುಚ್ಚಿದರೆ, ನೇರವಾಗಿ ಅಮೆರಿಕಕ್ಕೆ ಸೇರುತ್ತದೆ. ಅದು ಈಗಿನ ಲೋಕ ಅಂತ ಆಗಲೂ ಗೊತ್ತಿತ್ತು). ಕೇರಳ, ಕಳಾವಳಿಯ ಮೂಲಕ ಬಲಿಯ ಕಡೆಯವರು, ಈಗಿನ ಜಾವಾ, ಸುಮಾತ್ರಾ, ಬೋರ್ನಿಯೋ, ಪೂರ್ವ ಸಮುದ್ರ-ಶಾಂತಸಾಗರ ದಾರಿಯಲ್ಲಿ ಅಮೆರಿಕವನ್ನು ಸೇರಿದ ನೆನಪನ್ನು ಇಂದಿಗೂ ಕೇರಳಿಯರು ‘ಓಣಂ’ ಎಂಬ ದೋಣಿಸ್ಪರ್ಧೆಯ ನೆನಪಿನಲ್ಲಿ ಆಚರಿಸುತ್ತಾರೆ. ಆಚರಿಸುವವರು ಈಗ ಮೀನುಗಾರರು ಮಾತ್ರ ಭ್ರಷ್ಟರಾಗಿದ್ದರೇನು? ಇತಿಹಾಸದ ನೆನಪು ಅದು. ಬಲಿಯ ನಂತರ ‘ಮಯಾಸೂರ’, ತಕ್ಷಕನ ಕಾಟ ತಡೆಯದೆ ಅಲ್ಲಿ ‘ಮೆಕ್ಸಿಕೋ’ದಲ್ಲಿ ನೆಲೆಸಿ, ಕಟ್ಟಿದ ಪಗೋಡಾಗಳು, ನಿರ್ವಿುಸಿದ ಶಿಲ್ಪಗಳು ಈಗಲೂ ಇವೆ. ಅಲ್ಲಿ ಬಲಿಯ ಮಗ ‘ವೀರೋಚನ’ನನ್ನು ಈಗಲೂ ‘ಮೀರಕೋಚ’ ಎಂದು ನೆನಪಿಸಿಕೊಳ್ಳುತ್ತಾರೆ. ನಂತರ ಪರೀಕ್ಷಿತನನ್ನು ಕೊಂದ ಅಪರಾಧಕ್ಕಾಗಿ, ನಾನಾ ಜನರನ್ನು ‘ಆಸ್ತೀಕ’ನ ಮೂಲಕ ಹೊರದಬ್ಬಲಾಯ್ತು. ಇದೆಲ್ಲ ನಾವು ಮರೆತ ಕಥೆ.

    ‘ಪೆರು’ವಿನಲ್ಲಿ 6ನೇ ಶತಮಾನದ ತನಕ ತಮಿಳು ಚೋಳರು-ಇಕ್ಷಾಕು ಕುಲದವರು ಆಳಿವೆ. ದೊರೆಗಳನ್ನು ಆಗ ಅಲ್ಲಿ ‘ರಾಮ’ ಎಂದೇ ಕರೆಯುತ್ತಿದ್ದರು. ಸ್ಪಾನಿಷರು ದೊರೆಯ ಚರ್ಮ ಸುಲಿದು ಕೊಂದು, ಬಂಗಾರ ದೋಚಿ, ಅಧಿಕಾರ ಹಿಡಿದರು.

    ಈ ಹಿನ್ನೆಲೆ ನೆನಪಿರಲಿ. ಕರಿಯರನ್ನು ಶೋಷಿಸಿ, ಹಿಂಸಿಸಿದರೂ, ಕರಿಯರಿಗೆ ಸ್ವಾತಂತ್ರ್ಯ ಸಿಕ್ಕಾಗ ಸಂಖ್ಯೆಯೂ ಬೆಳೆಯುತ್ತ, ವೋಟಿನ ಹಕ್ಕು ದೊರೆತು, ಆಡಳಿತ, ಸಾರ್ವಜನಿಕ ಕ್ಷೇತ್ರಗಳಲ್ಲಿ ಸಮಾನ ಪಾಲು ದೊರೆತುದು ಬಿಳಿಯರಿಗೆ ಸಹನೆಯಾಗಲಿಲ್ಲ. ಅದಕ್ಕಾಗಿ ಪರೋಕ್ಷದಲ್ಲಿ ಅವರನ್ನು ತುಳಿಯಲು ಅಮೆರಿಕದ ಸಂವಿಧಾನದಲ್ಲಿ 13ನೇ ತಿದ್ದುಪಡಿ ತರಲಾಯ್ತು. ಅದೇ 13ಠಿಜ ಎಂದದ್ದು. ಅದರಲ್ಲಿ

    ’Except as a Punishment For Crime Where of the Party shall have been duly Convicted, Shall exist within in United States, Or any Place, subjected their judication’ ಎಂಬುದು ಈ 13ನೇ ತಿದ್ದುಪಡಿ. ಇದರರ್ಥ ಏನು? ‘ಏನೇ ಸಣ್ಣ ತಪ್ಪನ್ನು ಮಾಡಿ, ಕರಿಯನೊಬ್ಬನು ಜೈಲು ಶಿಕ್ಷೆ ಅನುಭವಿಸಿದರೆ ಅವನಿಗೆ ವೋಟು ಹಕ್ಕು ಇಲ್ಲ. ಅಮೆರಿಕವನ್ನು ಬಿಟ್ಟು ಹೋಗುವಂತೆಯೂ ಇಲ್ಲ. ಕೊಳೆಯ ಬೇಕು ನಿರಂತರ ದಾಸ್ಯದಲ್ಲಿ.

    ಪರಿಣಾಮ? ಅಮೆರಿಕದ ಪ್ರಜಾಸಂಖ್ಯೆ ಜಗತ್ತಿನ ಬರೀ 5 ಶೇಕಡ. ಆದರೆ, ಇಲ್ಲಿ ಜೈಲಲ್ಲಿರುವ ಕರಿಯರು, ಜಗತ್ತಿನ ಒಟ್ಟು ಜೈಲುವಾಸಗಳಲ್ಲಿ ಶೇಕಡ 25 ಅರ್ಥವಾಯಿತೆ? ಅಂದರೆ 2.3 ಮಿಲಿಯನ್ ಕರಿಯ ಅಮೆರಿಕನ್ನರು ಈಗ ಜೈಲಿನಲ್ಲಿದ್ದಾರೆ. ಒಟ್ಟು ಅಮೆರಿಕದ ಕರೀ ಪ್ರಜೆಗಳು ಶೇ. 6.5 ಮಾತ್ರ. 1850ನೇ ವರ್ಷದ ಕರಿಯ ಶಿಕ್ಷಿತರಿಗಿಂತ ಹೆಚ್ಚು ಜನ ಇಲ್ಲಿ ‘ಅಪರಾಧಿ’ಗಳು (ಓದ ಬೇಕಾದ ಗ್ರಂಥ Dw griffithನ-‘The Birth of a Nation’ 1915ರದ್ದು)

    ಇಷ್ಟು ಜನ ಕರಿಯರು ಜೈಲು ಸೇರಿದ್ದೇಕೆ? ಹೇಗೆ ಎಂಬುದಕ್ಕೆ ನೀವೇ ಉತ್ತರ ಕಂಡುಕೊಳ್ಳಿ. ಹೊಟ್ಟೆಗಿಲ್ಲದೆ ನಿರಾಶ್ರಿತ ಕರಿಯರು ಮಾದಕ ದ್ರವ್ಯ ಮಾರಾಟಕ್ಕೆ, ಸಣ್ಣಪುಟ್ಟ ಕಳುವಿಗೆ ಹೊಟ್ಟೆಯುರಿತಾಳದೇ ಬಿಳಿಯರ ಮೇಲೆ ಅಲ್ಲಲ್ಲಿ ಹಲ್ಲೆಯೋ, ಬೈಗಳವೋ, ಏನೋ ಎಳೆಸಿದಾಗ ಬಿಳಿಯರು ಈ ನೆಪದಿಂದ ಅವರನ್ನು ಹಿಡಿದು ಜೈಲು ಸೇರಿಸಿಬಿಡುವುದು, ಪರೋಲ್ ಮೇಲೆ ಬಿಟ್ಟರೂ ವೋಟಿನ ಹಕ್ಕಿಲ್ಲ! ಕ್ರೖೆಸ್ತರ ಕ್ರಾಸನ್ನು ಕರಿಯರು ಸುಟ್ಟರು, ಚರ್ಚುಗಳನ್ನು ಸುಟ್ಟರು ಹಲ್ಲೆಗಳು ನಡೆದವು. ಪರಿಣಾಮ? ಕರಿಯರಿಗೆ ಮತ್ತಷ್ಟು ಹಿಂಸೆ! ಕೋರ್ಟ್, ವಿಚಾರಣೆ ಇಲ್ಲದೆ, ಕಂಡಲ್ಲಿ ದೊಂಬಿಮಾಡಿ ಅವರನ್ನು ‘ಢ್ಞ್ಚಜ್ಞಿಜ’ ರೀತಿಯಲ್ಲಿ ರಸ್ತೆಯಲ್ಲೇ ಕೊಲ್ಲುವುದು. ಇದು ಅಲ್ಲಿ ನಿತ್ಯ ವಿಧಿಯಾಗಿ ಬೆಳೆದುದು ರಿಚರ್ಡ್ ನಿಕ್ಸನ್, ರೋನಾಲ್ಡ್ ರೀಗನ್, ಜಾರ್ಜ್ ಬುಷ್, ಕ್ಲಿಂಟನ್ ಇಂಥವರ ಕ್ರೂರ ಆಳ್ವಿಕೆಯ ಕಾಲದಲ್ಲಿ ಅಮೆರಿಕದ ಪತ್ರಿಕೆಗಳು ವರದಿ ಮಾಡಲಿಲ್ಲ! ವುಡ್ರೋ ವಿಲ್ಸನ್ ಅಂಥವರು ಸಮತೆಗೆ ಯತ್ನಿಸಿದಾಗ ಬದಿಗೆ ಸರಿಸಿದರು. ಪ್ರತಿಭಟಿಸಿದ ಬಿಳಿಯರೂ ‘ಕಾಣೆ’ಯಾದರು. ಇದು ಅಲ್ಲಿ ಡೆಮಾಕ್ರಸಿ! ನ್ಯೂಜೆರ್ಸಿಯ ಸೆನೆಟರ್ ಕಾರಿ ಬೂಕರ್ ಹೇಳುತ್ತಾರೆ- ‘ಈಗ,1850ರಲ್ಲಿನ ಕರಿಯರಿಗಿಂತ, ಇಲ್ಲಿನ ಈಗಣವರು ಹೆಚ್ಚು ಕ್ರಿಮಿನಲ್​ಗಳಾಗಿ ನೋಡಲ್ಪಡುತ್ತಿದ್ದಾರೆ’ ಅಷ್ಟು ಕ್ರೂರ ಪರಿಸ್ಥಿತಿ. ಹಿಂದೆ ಇದ್ದದ್ದು ಪ್ರಕಟ ಗುಲಾಮ ಪದ್ಧತಿ, ಈಗಿನದ್ದು ಪ್ರಚ್ಛನ್ನ ಅಷ್ಟೆ. ಪೊಲೀಸರನ್ನು ದಂಡಿಸುವರಿಲ್ಲ. ಕರಿಯರ ಪ್ರಜಾಸಂಖ್ಯೆ ಹೆಚ್ಚಾಗುತ್ತ ಈ ದಬ್ಬಾಳಿಕೆಗೆ ಕೊನೆಯೇ ಇಲ್ಲವಾಗಿ, ಮೊನ್ನಿನ ಘಟನೆ ಒಂದು ಸಣ್ಣ ಸ್ಫೋಟ ಮಾತ್ರ. ಮುಂದಿನ 5 ವರ್ಷಗಳಲ್ಲಿ 300 ಜೈಲುಗಳನ್ನು ಕರಿಯರಿಗಾಗಿಯೇ ಕಟ್ಟಿಸುವುದು ಅವಶ್ಯ ಆದೀತು ಎಂದು ಒಬ್ಬ ಬರೆದಿದ್ದಾನೆ. ‘ಕರಿಯರೆಂದರೆ ಮಾದಕದ್ರವ್ಯ ಏಜೆಂಟರು’ ಎಂಬ ಸಾಮಾನ್ಯ ಕಾರಣ ಕೊಟ್ಟು ಜೈಲು ಸೇರಿಸಿದರಾಯ್ತು, ಸಾಯಿಸಿದರೂ ಆಯ್ತು. ಕೇಳುವವರೇ ಇಲ್ಲ. 1994ರಲ್ಲಿ ಕ್ಲಿಂಟನ್ ಜೈಲಿನ ‘ಬಡಾವಣೆ’ಗಾಗಿಯೇ 30 ಬಿಲಿಯನ್ ಡಾಲರನ್ನು ಮೀಸಲಿಟ್ಟರು. ಎಷ್ಟೊಂದು ಜೈಲು ಬೆಳದಿರಬೇಡ? ಎಲ್ಲ ವ್ಯವಸ್ಥಿತ!

    ‘ಶಿಕ್ಷೆಗೊಳಗಾದವರು ಶಿಕ್ಷಾ ಪ್ರಮಾಣದ ಶೇಕಡ 85ರಷ್ಟನ್ನು ಅನುಭವಿಸಬೇಕು’ ಎಂಬುದು ಕರುಣೆಯಂತೆ. ‘ಕಡಿಮೆಯಾಯಿತಲ್ಲ?’ ಲೆಕ್ಕ ತೋರಿಸಲು? ಒಬ್ಬನಿಗೆ ಎರಡನೆಯ ‘ತಪ್ಪಿ’ಗಾಗಿ ಎರಡರಷ್ಟು ಶಿಕ್ಷೆ! 22 ವರ್ಷದ ಕಲೀಫ್ ಬ್ರೌಡರ್ ಎಂಬ ‘ಅಪರಾಧಿ’ಯನ್ನು 3 ವರ್ಷ ಜೈಲಲ್ಲಿಟ್ಟು, ವಿಚಾರಣೆ ಆಗದಾಗ ಅವನು ನೇಣು ಹಾಕಿಕೊಂಡ. ಕಾರಣ? ‘ಮಾಡದ ಅಪರಾಧಕ್ಕಾಗಿ ಚೌಕಾಸಿ ಮಾಡುವುದಕ್ಕಿಂತ ಸಾಯುವುದೇ ವಾಸಿ’ ಎಂಬ ಹತಾಶ ಭಾವನೆಯಿಂದ. ಇಲ್ಲಿ ಜೀವಕ್ಕೆ ಬೆಲೆಯಿದೆಯೇ? ಕಾನೂನಿಗೆ ಕಣ್ಣಿದೆಯೇ? ಜೈಲಿಂದ ಹೊರಬಂದರೂ, ಸಂಖ್ಯೆ ಬೆಳೆಯುತ್ತಿದೆ. ಉದ್ಯೋಗ ಇಲ್ಲ, ವೋಟು ಇಲ್ಲ. ದ್ವಿತೀಯ ದರ್ಜೆ ಗುಲಾಮರು. 2015ರಲ್ಲಿ ಅಲಬಾಮದಲ್ಲಿ ವೋಟಿಂಗ್ ಹಕ್ಕು ಕೇಳಿಕೆ ಸ್ಮರಣೆಯ 50ನೇ ವಾರ್ಷಿಕ ಜಾಥಾ ನಡೆದಾಗ, ಅವರಿಗೆ ತಿಳಿದುದು ಕರಿಯರಲ್ಲಿ ಶೇಕಡ 30 ಜನರಿಗೆ ವೋಟು ಹಕ್ಕು ಶಾಶ್ವತವಾಗಿ ಇಲ್ಲವಾಗಿದೆ ಅಂತ! ಇನ್ನು ನೋಡಿ, ಪಾಲ್ ವೈರಿಚ್ ಎಂಬ ಒರಟ ಹೇಳಿದ- ‘ಎಲ್ಲರಿಗೂ ವೋಟು ಇಲ್ಲದೆ, ವೋಟುದಾರರ ಸಂಖ್ಯೆ ಇಳಿದಷ್ಟೂ ನಮಗೆ ಬಿಳಿಯರಿಗೆ, ಗೆಲ್ಲುವುದು ಸುಲಭ’ ಅಂತ! ಬಿಳಿಯರು ಕರಿಯರನ್ನು ಕೊಂದು ಜೈಲು ತಪ್ಪಿಸಿಕೊಂಡ ಅನೇಕ ನಿದರ್ಶನಗಳಿವೆ. ಕಾನೂನು ಎಲ್ಲಿದೆ? ಆಯುಧ ತಯಾರಿಕೆ ಕಾರ್ಖಾನೆಗಳು ಬೆಳೆಯುತ್ತಿವೆ. ಜೈಲುಗಳನ್ನು ಖಾಸಗೀಕರಣ ಮಾಡುವ ಯತ್ನ ಅಮೆರಿಕದ ಅನೇಕ ಪ್ರಾಂತ್ಯಗಳಲ್ಲಿದೆ. ಜೈಲಾದವರ ದುಡಿಮೆಯ ವಸ್ತುಗಳನ್ನು ಬಿಳಿಯರು ಮಾರಿ, ಗಳಿಸುವ ವೃತ್ತಿಗೆ ಏನು ಹೇಳುತ್ತೀರಿ? ಪ್ರೖೆವೇಟ್ ಜೈಲು ಕಂಪನಿ ಕೇಳಿದ್ದೀರಾ? ‘Correction corporation of america’- ಹೆಸರು ನೋಡಿ. ಏನೂ ತಿಳಿಯುವುದಿಲ್ಲ! ಇದು ಲಾಭದಾಯಕ ಉದ್ದಿಮೆ ‘ಖಾಸಗಿ ಜೈಲು’ ಕಲ್ಪನೆ. ಇವರಿಗಾಗಿ, ಇಲ್ಲಿ ಜನರನ್ನು ತುಂಬಲು ಪೊಲೀಸರಿಗೆ ಪೂರ್ಣ ಅಧಿಕಾರ. ಯಾರನ್ನೆಲ್ಲ ಶಂಕಿಸುತ್ತಾರೋ ಅವರನ್ನೆಲ್ಲ ಹಿಡಿದು ಜೈಲಿಗೆ ಅಟ್ಟುವುದು ಹೇಗಿದೆ ಡೆಮಾಕ್ರಸಿ? ಭಾರತದಲ್ಲಿ ‘ದನಕೊಂದರು’ ‘ದೊಂಬಿ ಮಾಡಿದರು’ ಎಂದು ಅಬ್ಬರಿಸಿ ಸೋನಿಯಾ ಮಾತು ಕೇಳಿ ಭಾರತ ಸರ್ಕಾರಕ್ಕೆ ಬುದ್ಧಿ ಹೇಳುವ ಹಕ್ಕನ್ನು ಅಮೆರಿಕಕ್ಕೆ ಇತ್ತವರಾರು? ‘ತಾ ಕಳ್ಳ ಪರರ ನಂಬ’ ಎಂಬುದು ಗಾದೆ. ಪಶ್ಚಿಮದ ಬಿಳಿಯರ ರಾಜಕಾರಣ ಜಗತ್ತಿಗೆ ಎಂದೂ ಒಳ್ಳೆಯದು ಮಾಡಲಿಲ್ಲ. ಅಲ್ಲಿ ಇಲ್ಲಿ ಸಾಹಿತಿಗಳು, ಸ್ವಾತಂತ್ರ್ಯಪ್ರಿಯ ಲೇಖಕರು, ಚಿಂತಕರು, ಪ್ರತಿಪಾದಕರು ಇದ್ದರು. They Do Not Matter. ಈಗ ಕರಿಯರ ಪ್ರತಿಭಟನೆ ವಿಶ್ವದಾದ್ಯಂತ ಹಬ್ಬಿದೆ. ಬ್ರಿಟನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಪೂರ್ವ ಯುರೋಪ್ ಎಲ್ಲೆಲ್ಲೂ ವರದಿ. ‘ಇದು ಸಾಮ್ರಾಜ್ಯಗಳ ಕರ್ಮ ಎನ್ನಬೇಕೆ?’ ಕಾಲಪುರುಷ ತಡವಾಗಿಯಾದರೂ ಶಿಕ್ಷೆ ನೀಡುತ್ತಾನೆ. ಈ ಮಾತು ಈಗಿನ ಚೀನಾಕೂ ಅನ್ವಯ. ಮರಳುಗಾಡಿನ ಮತಗಳಲ್ಲಿ ಶೋಷಣೆ ಬಿಟ್ಟು ಬೇರೇನಿದೆಯೋ? ಅಪಪ್ರಚಾರ ಬಿಟ್ಟು ನೋಡಿ. ಅಬ್ಬರ ಬೇರೆ ಆಚರಣೆ ಬೇರೆ. ಜಗತ್ತಿನಾದ್ಯಂತ ಜನರು ಇಸ್ಲಾಂ, ಕ್ರೖೆಸ್ತವನ್ನು ತೊರೆಯುತ್ತಿದ್ದಾರೆ. ಈಗಿನ ಅಂತರ್ಯುದ್ಧ ಅಮೆರಿಕ, ಚೀನಾಗಳನ್ನು ಬಲಿ ತೆಗೆದುಕೊಳ್ಳುವಲ್ಲಿ ಸಂದೇಹ ಇಲ್ಲ. ಧರ್ಮ, ನೀತಿ, ಸತ್ಯ, ಕರುಣೆ ಸೌಹಾರ್ದ, ಸೋದರತ್ವಗಳ ಮೂಲ ಸೆಲೆಯಾದ ಹಿಂದೂ ಭಾರತ ಜಗತ್ತಿಗೆ ದಾರಿ ತೋರಬೇಕು. ಅದು ಶ್ರೀ ಅರವಿಂದರ ಭವಿಷ್ಯ!

    ಕೊನೆಯ ಮಾತು: ‘13th Amendment ಎಂದೆನಲ್ಲ? ಈ 13 ಸಂಖ್ಯೆ ಕ್ರೖೆಸ್ತರಿಗೆ ಇಸ್ಲಾಮಿಯರಿಗೆ ದೆವ್ವದ, ಸೈತಾನನ, ‘ಜೂಡಾನ್’ ಎಂಬುವನ ಅಂಕೆ. ಅದಕ್ಕಾಗಿ ಅದು ಅವರಿಗೆ ಅಮಂಗಳ. ಭಾರತೀಯರಲ್ಲೂ ಯಾವ ಹೋಟೆಲಿನಲ್ಲೂ ‘ನಂ. 13’ರ ರೂಮ್ ಇರುವುದಿಲ್ಲ. ಆದರೆ ಕವಿ ಬೇಂದ್ರೆ ಹೇಳುತ್ತಿದ್ದಂತೆ, ನಮಗೆ ಅದು ಪವಿತ್ರ ಗೀತೆಯ 13ನೇ ಅಧ್ಯಾಯ. ಸೂರ್ಯನಿಗೆ 12 ರಾಶಿ ಸಂಚಾರ. ನಿಯಂತ್ರಿಸುವವನು 13ನೆಯ ಭಗವಂತ! ಕೇಶಿ ಎಂಬ ರಾಕ್ಷಸ ಕುದುರೆಯನ್ನು ಶ್ರೀಕೃಷ್ಣ ಕೊಂದದ್ದು ‘ತ್ರಯೋದಶೀ’- ಅಷ್ಟವಕ್ರ ಗೀತೆಯಲ್ಲಿ ಹೇಳಿದ್ದು. ಅಂದು ವೈದಿಕರು ಪ್ರದೋಷ ಮೌನ ಆಚರಿಸುತ್ತಾರೆ. ನಮ್ಮ ರೀತಿ ಬೇರೆ. ಅಮೆರಿಕದ್ದೇ ಬೇರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts