More

    ಮಧ್ಯಾಹ್ನದ ನಂತರ ತೆರೆದ ಸರ್ಕಾರಿ ಕಚೇರಿಗಳು

    ಕೊಪ್ಪಳ: ವೇತನ ಆಯೋಗ ವರದಿ ಜಾರಿ ಹಾಗೂ ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ವೇಳೆಗೆ ಮುಷ್ಕರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಎಂದಿನಂತೆ ಸರ್ಕಾರಿ ಕಚೇರಿಗಳು ಮರು ಆರಂಭವಾದವು.
    ವಾರದ ಹಿಂದೆಯೇ ಮುಷ್ಕರದ ಬಗ್ಗೆ ಮುನ್ಸೂಚನೆ ನೀಡಿದ್ದ ನೌಕರರು ಸಹಜವಾಗಿ ಕರ್ತವ್ಯಕ್ಕೆ ಗೈರಾದರು. ಇದರಿಂದ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು. ಬಹುಪಾಲು ಕಚೇರಿಗಳು ಖಾಲಿಯಾಗಿ ಕಂಡುಬಂದವು. ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಯಿತು.

    ಕೆಲ ಕಚೇರಿಗಳಲ್ಲಿ ಡಿ ಗ್ರೂಪ್ ನೌಕರರು ಬಿಟ್ಟರೆ ಉಳಿದವರಿರಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಮಾಡಲಾಯಿತು. ಇದರ ಅರಿವಿರದೆ ಆಗಮಿಸಿದ ರೋಗಿಗಳು ಬಾಗಿಲು ಮುಚ್ಚಿದ್ದನ್ನು ಕಂಡು ಖಾಸಗಿ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದರು. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಆರಂಭವಾಗಿದ್ದು, ಬುಧವಾರ ಮೂರನೇ ವಿಷಯ ಪತ್ರಿಕೆ ಪರೀಕ್ಷೆ ನಡೆಯಬೇತ್ತು. ಆದರೆ, ಅಧಿಕಾರಿಗಳು ಗೈರಾಗಿದ್ದರಿಂದ ಪರೀಕ್ಷೆಗಳನ್ನು ಮುಂದೂಡಲಾಯಿತು.

    ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದರ ಕಾರಣ ವಿದ್ಯಾರ್ಥಿಗಳು ಕ್ಯಾಂಪಸ್‌ನತ್ತ ಹೆಜ್ಜೆ ಹಾಕಿದರು. ಆದರೆ, ಉಪನ್ಯಾಸಕರಿಲ್ಲದ ಕಾರಣ ಮರಳಿ ಮನೆಗೆ ತೆರಳಿದ ದೃಶ್ಯಗಳು ಕಂಡುಬಂದವು. ಮಧ್ಯಾಹ್ನದ ವೇಳೆಗೆ ಸರ್ಕಾರ ಹಾಗೂ ನೌಕರರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಯಿತು. ಹೀಗಾಗಿ ಕೆಲ ಕಚೇರಿಗಳಿಗೆ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರು. ಆದರೆ, ಶಾಲಾ-ಕಾಲೇಜುಗಳು ಆರಂಭವಾಗಲಿಲ್ಲ. ಉಳಿದಂತೆ ಬಹುಪಾಲು ಕಚೇರಿಗಳು ಬೀಗ ತೆಗೆದಿದ್ದು ಬಿಟ್ಟರೆ ಅಧಿಕಾರಿಗಳು ಅಷ್ಟಾಗಿ ಕಚೇರಿಯತ್ತ ಸುಳಿಯಲಿಲ್ಲ. ಸೇವೆ ಅರಸಿ ಬಂದ ಸಾರ್ವಜನಿಕರು ನಿರಾಸೆಯಲ್ಲಿಯೇ ಮನೆಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts