More

    ಗದಗ: ಗೂಜನೂರು ಗ್ರಾಮಕ್ಕೆ ಕೇಂದ್ರ ಅಧ್ಯಯನ ತಂಡ(ಭಾಗ೧)

    ಗದಗ: ಪ್ರಸಕ್ತ ಸಾಲಿನ ಮಳೆ ಕೊರತೆ ಹಿನ್ನೆಲೆ ಜಿಲ್ಲೆಯ ವಿವಿಧ ಭೇಟಿ ನೀಡಿದ ಕೇಂದ್ರ ಬರ ಅದ್ಯಯನ ಸಮಿತಿ ಎದುರು ಜಿಲ್ಲೆಯ ರೈತರು ಅಳಲು ತೋಡಿಕೊಂಡರು.

    ಮಳೆ ಅಭಾವ ಹಿನ್ನೆಲೆ ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ಇತರೆ ಬೆಳೆ ಇಳುವರಿ ಕೈಕೊಟ್ಟಿದೆ. ಈ ಕಾರಣದಿಂದ ಹೊಲಗಳಿಗೆ ಭೇಟಿ ನೀಡಿದ ತಂಡವು ಮಾಹಿತಿ ಪಡೆಯಿತು. ಸರ್ಕಾರದಿಂದ ಇನ್ ಪುಟ್ ಸಬ್ಸಿಡಿ ಕುರಿತು ಮಾಹಿತಿ ಸಂಗ್ರಹಿಸಿತಲ್ಲದೇ, ಕೃಷಿ ಕೈಕೊಟ್ಟ ಹಿನ್ನೆಲೆ ಪರ್ಯಾಯ ಕೂಲಿ ಮಾಡುತ್ತಿರುವ ಕುರಿತು ರೈತರನ್ನು ಪ್ರಶ್ನಿಸಿದರು.

    ಗೋಜನೂರು ಗ್ರಾಮದ ರೈತನ ಹೊಲದಲ್ಲಿ ಮೆಕ್ಕೆಜೋಳ ಪರಿಶೀಲಿಸಿದ ಅದ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಕೃಷಿ ಜಂಟಿ ಅಧಿಕಾರಿ ತಾರಾಮಣಿ ಮಾಹಿತಿ ನೀಡಿದರು. ಮುಂಗಾರು ವಿಳಂಬ ಹಿನ್ನೆಲೆ ಮೆಕ್ಕೆಜೋಳವನ್ನು ಸಾಮಾನ್ಯ ಅವಧಿಗೆ ಬದಲಾಗಿ ಜುಲೈ ಅಂತ್ಯದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸ್ತುತ ಮಳೆ ಸಂಭವಿಸಿದರೂ ಮೆಕ್ಕೆಜೋಳ ಕಾಳು ಕಟ್ಟವುದಿಲ್ಲ ಎಂದು ಎಂದು ರೈತರು ಕೇಂದ್ರ ಅದ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

    ಒಣ ಬೇಸಾಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೈತರಿಗೆ ಭದ್ರತೆ ಅಗತ್ಯವಿದೆ ಎಂದ ರೈತರು ಗ್ಯಾರಂಟಿ ಯೋಜನೆ ಬಗ್ಗೆ ರೈತರು ಅಸಮಧಾನ ವ್ಯಕ್ತಪಡಿಸಿದರು. ಗ್ಯಾರಂಟಿ ಅನುಷ್ಠಾದಲ್ಲೆ ಸರ್ಕಾರ ಮಗ್ನವಾಗಿದೆ. ರೈತರ ಬೆಳೆ ಪರಿಹಾರವನ್ನು ತುರ್ತಾಗಿ ವಿತರಿಸುವ ಬಲಾಗಿ ಸಮೀಕ್ಷೆ ಮತ್ತೊಂದು ಎಂದು ಕಾಲಹರಣ ಮಾಡುತ್ತಿದ್ದೆ. ಬಿಟ್ಟಿ ಭಾಗ್ಯ ನೀಡುತ್ತಿರುವುದರಿಂದ ರೈತರ ಹೊಲಗಳ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ಆರೋಪೀಸದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts